ನವದೆಹಲಿ: ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ನ ಶೇಕಡ 74 ಷೇರುಗಳು ಅದಾನಿ ಗ್ರೂಪ್ ಪಾಲಾಗಿದೆ. ಈ ಸಂಬಂಧ ಜಿವಿಕೆ ಗ್ರೂಪ್ ಮತ್ತು ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(ಎಂಐಎಎಲ್) ಜತೆಗೆ ಈ ಸಂಬಂಧ ಒಪ್ಪಂದ ಏರ್ಪಟ್ಟಿದೆ ಎಂದು ಶತಕೋಟ್ಯಧಿಪತಿ ಗೌತಮ್ ಅದಾನಿಯವರ ಅದಾನಿ ಗ್ರೂಪ್ ಸೋಮವಾರ ತಿಳಿಸಿದೆ.
ಜಿವಿಕೆ ಏರ್ಪೋರ್ಟ್ ಡೆವಲಪರ್ಸ್ನ ಸಾಲವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಲುವಾಗಿಯೂ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಒಪ್ಪಂದ ಮಾಡಿಕೊಂಡಿದೆ. ಎಂಐಎಎಲ್ನಲ್ಲಿ ಜಿವಿಕೆ ಗ್ರೂಪ್ 50.50 ಶೇಕಡ ಈಕ್ವಿಟಿ ಷೇರುಗಳನ್ನು ಹೊಂದಿದೆ. ಈಗ ಸಾಲ ಈಕ್ವಿಟಿಯಾಗಿ ಬದಲಾಗಲಿದೆ ಎಂದು ಅದಾನಿ ಎಂಟರ್ಪ್ರೈಸಸ್ ರೆಗ್ಯುಲೇಟರಿ ಫೈಲಿಂಗ್ನಲ್ಲಿ ಹೇಳಿದೆ.
ಇದೇ ರೀತಿ, ಏರ್ಪೋರ್ಟ್ಸ್ ಕಂಪನಿ ಆಫ್ ಸೌತ್ ಆಫ್ರಿಕಾ ಹೊಂದಿರುವ ಶೇಕಡ 23.5 ಈಕ್ವಿಟಿ ಷೇರುಗಳನ್ನೂ ಅದಾನಿ ಗ್ರೂಪ್ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಕಾಂಪಿಟೀಶನ್ ಕಮಿನಷ್ ಆಫ್ ಇಂಡಿಯಾದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಈ ಎರಡೂ ಪಾಲುಗಳು ಸೇರಿದರೆ ಎಂಐಎಎಲ್ನ ಶೇಕಡ 74 ಪಾಲು ಅದಾನಿ ಗ್ರೂಪ್ಗೆ ಸೇರಿದಂತಾಗುತ್ತದೆ. (ಏಜೆನ್ಸೀಸ್)