ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಶಕಗಳ ಹಿಂದೆ ಪ್ರಾರಂಭಗೊಂಡ ಭಾರತ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್ (ಬಿಐಟಿ) ಸಂಸ್ಥೆಯು ದೇಶದ ಟ್ರಾವೆಲ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಾಣ ಮಾಡಿದೆ.
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ 1990ರಲ್ಲಿ ಭಾರತ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆ ಪ್ರಾರಂಭಗೊಂಡಿತು. ಇದಕ್ಕೂ ಮುನ್ನ ನಗರದಲ್ಲಿ ಮೈಸೂರು ಮಹಾರಾಜರು ಮೈಸೂರು ಇಂಟರ್ನ್ಯಾಷನಲ್ ಟ್ರಾವೆಲ್ಸ್ ಏಜೆನ್ಸಿ ಪ್ರಾರಂಭಿಸಿದ್ದರು. ನಗರದ ಎರಡನೇ ಟ್ರಾವೆಲ್ ಏಜೆನ್ಸಿ ಎಂಬ ಹೆಗ್ಗಳಿಕೆ ಬಿಐಟಿಯದು. ಮಹೇಂದ್ರ ಸಾಲಿಯಾನ್-ಯಶೋದಾ ಸಾಲಿಯಾನ್ ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ನಂತರ ಇವರ ಮಕ್ಕಳಾದ ಮನೀಶ್ ಹಾಗೂ ನಿತೀಶ್ ಮತ್ತಷ್ಟು ಯಶಸ್ಸಿನತ್ತ ಕೊಂಡೊಯ್ದರು. ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದ್ದು ದೇಶದ ವಿವಿಧೆಡೆ ತನ್ನ ಶಾಖೆಗಳನ್ನು ತೆರೆದಿದೆ.
ಸಂಸ್ಥೆಯ ಮೂರು ದಶಕದ ಹಾದಿಯಲ್ಲಿ ಸಾಗಿದ ಹಾದಿಯನ್ನು ಮಂಗಳವಾರ ಸಂಸ್ಥೆಯ ನಿರ್ದೇಶಕ ಮಹೇಂದ್ರ ಸಾಲಿಯಾನ್ ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತೆರೆದಿಟ್ಟರು. 1990ರಲ್ಲಿ ಬಿಐಟಿ ಸಣ್ಣದಾಗಿ ಪ್ರಾರಂಭಗೊಂಡಿತು. ಆ ಸಂದರ್ಭ ವಿಮಾನ ಸೇವೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿರಲಿಲ್ಲ. ಕಾಪೋರೇಟ್ ಕಂಪನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಕೇವಲ ಏರ್ ಇಂಡಿಯಾ ಮಾತ್ರ ಹಾರಾಟ ನಡೆಸುತಿತ್ತು. ಆ ಸಂದರ್ಭ ಏರ್ ಇಂಡಿಯಾದ ಟಿಕೆಟ್ಗಳನ್ನು ನೇರವಾಗಿ ಬುಕ್ ಮಾಡುವ ‘ಅಯಾಟ’ ಲೈಸನ್ಸ್ (ಏರ್ ಟ್ರಾನ್ಸ್ ಪೋರ್ಟ್ ಏಜೆನ್ಸಿ) ಪಡೆದುಕೊಂಡಿತು. ಆ ಸಂದರ್ಭ ಅಯಾಟ ಲೈಸನ್ಸ್ಅನ್ನು ಬೆಂಗಳೂರು ಕೇಂದ್ರೀಕೃತ ಟ್ರಾವೆಲ್ ಏಜೆನ್ಸಿಗಳು ಮಾತ್ರ ಹೊಂದಿದ್ದವು. ವಿಮಾನ ಟಿಕೆಟ್ಗಳನ್ನು ಬುಕ್ ಮಾಡುವ ಜತೆಗೆ ವಾಹನ ಸೇವೆಯನ್ನು ಕೂಡ 1990ರಲ್ಲಿ ಪ್ರಾರಂಭಿಸಿದೆವು. 2004ರಲ್ಲಿ ಪ್ಯಾಕೇಜ್ ಟೂರ್ ಪ್ರಾರಂಭಿಸಿದ ನಂತರ ಸಂಸ್ಥೆಯು ಯಶಸ್ಸಿನ ಹಾದಿಯ ಕಡೆ ಮುಖ ಮಾಡಿತು ಎಂದು ತಿಳಿಸಿದರು.
ಸಂಸ್ಥೆಯು ಪ್ರಸ್ತುತ ಬೆಂಗಳೂರು, ಮುಂಬೈ, ಪುಣೆ, ಹೈದರಬಾದ್, ಕೊಚ್ಚಿನ್, ಮಂಗಳೂರು, ಹುಬ್ಬಳ್ಳಿ, ದಾವಣಗೆರೆಯಲ್ಲಿ ಶಾಖೆಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಐದು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುರಕ್ಷತೆಗೆ ಆದ್ಯತೆ: ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಈ ಕಾರಣಕ್ಕೆ ಸಾಕಷ್ಟು ಜನರು ಬಿಐಟಿಯನ್ನು ಆಯ್ಕೆ ಮಾಡುತ್ತಾರೆ. ಸಾಕಷ್ಟು ಜನರು ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ರಾತ್ರಿ ವೇಳೆ ಪ್ರಯಣ ಮಾಡುತ್ತಾರೆ. ರಾತ್ರಿ ವಾಹನ ಚಾಲನೆ ಮಾಡುವುದು ದೊಡ್ಡ ಸವಾಲು. ಈ ಕಾರಣಕ್ಕೆ ರಾತ್ರಿ ವಾಹನ ಚಾಲನೆ ಮಾಡುವ ಚಾಲಕರಿಗೆ ಬೆಳಗ್ಗಿನಿಂದ ಸಂಜೆವರೆಗೆ ವಿಶ್ರಾಂತಿ ನೀಡಲಾಗುತ್ತದೆ. ಅಲ್ಲದೆ ಪ್ರತಿಯೊಂದು ಚಾಲಕರಿಗೂ ವಾಹನ ಚಾಲನೆ ಹಾಗೂ ಪ್ರಯಾಣಿಕರೊಂದಿಗೆ ಯಾವ ರೀತಿ ವರ್ತಿಸಬೇಕೆಂಬ ಕುರಿತು ತರಬೇತಿ ನೀಡಲಾಗುತ್ತದೆ. ಈ ಕಾರಣಕ್ಕೆ ಬಿಐಟಿ ಎಲ್ಲರಿಗೂ ಅಚ್ಚುಮೆಚ್ಚು ಅನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಮಹೇಂದ್ರ ಸಾಲಿಯಾನ್
ಒಂದೇ ಸೂರಿನಡಿ ವ್ಯವಸ್ಥೆ: ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಒಂದೇ ಸೂರಿನಡಿ ಪ್ರಯಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಬಿಐಟಿ ಒದಗಿಸುತ್ತಿದೆ. ಪಾಸ್ ಪೋರ್ಟ್, ವಿಸಾ, ಏರ್ಟಿಕೆಟ್ ಹಾಗೂ ಪ್ಯಾಕೇಜ್ ಟೂರ್ಅನ್ನು ಬಿಐಟಿಯೇ ಸಿದ್ಧ ಪಡಿಸಿಕೊಡುತ್ತದೆ. ಒಂದು ಬಾರಿ ಸಂಸ್ಥೆಗೆ ಭೇಟಿ ನೀಡಿದರೆ ಪ್ರವಾಸಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಒಂದೇ ಸೂರಿನಡಿ ಪಡೆದುಕೊಳ್ಳಬಹುದು. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಐಟಿಯನ್ನು ಆಯ್ಕೆ ಮಾಡುತ್ತಾರೆ ಎಂದು ಮಹೇಂದ್ರ ಸಾಲಿಯಾನ್ ತಿಳಿಸಿದರು.
ಬೆಸ್ಟ್ ಪ್ಯಾಕೇಜ್ ಟೂರ್: ಸಾಕಷ್ಟು ಟ್ರಾವೆಲ್ಸ್ ಸಂಸ್ಥೆಗಳು ಪ್ಯಾಕೇಜ್ ಟೂರ್ಅನ್ನು ಹಮ್ಮಿಕೊಳ್ಳುತ್ತವೆ. ಆದರೆ, ಆ ಎಲ್ಲ ಸಂಸ್ಥೆಗಳಿಗಿಂತ ಬಿಐಟಿ ಆಯೋಜಿಸುವ ಪ್ಯಾಕೇಜ್ ಟೂರ್ ಭಿನ್ನವಾಗಿರುತ್ತದೆ. ಪ್ರವಾಸಿಗರ ಎಲ್ಲ ಬೇಕು ಬೇಡಿಕೆಗಳನ್ನು ಸಂಸ್ಥೆಯು ಖುದ್ದಾಗಿ ಗಮನಿಸುತ್ತದೆ. ಆದರೆ, ಬೇರೆ ಸಂಸ್ಥೆಗಳು ಇಂಥ ವ್ಯವಸ್ಥೆಯನ್ನು ಸೃಷ್ಟಿಸಲು ಮತ್ತೊಂದು ಏಜೆನ್ಸಿಯನ್ನು ಅವಲಂಬಿಸುತ್ತಾರೆ. ಆದರೆ, ನಮ್ಮ ಸಂಸ್ಥೆಯು ಪ್ರವಾಸಿಗರಿಗೆ ಅಗತ್ಯ ಮಾರ್ಗದರ್ಶನ ನೀಡುವ ಜತೆಗೆ ಪ್ರವಾಸ ವೇಳೆಯಲ್ಲಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ದುಬೈ ಹಾಗೂ ಯೂರೂಪ್ಗೆ ಹೆಚ್ಚಿನ ಪ್ಯಾಕೇಜ್ ಟೂರ್ಗಳನ್ನು ಪ್ರತಿವರ್ಷ ಸಂಘಟಿಸುತ್ತೇವೆ. ಇದಲ್ಲದೆ ವಿವಿಧ ದೇಶಗಳಿಗೂ ಪ್ಯಾಕೇಜ್ ಟೂರ್ಗಳನ್ನು ರೂಪಿಸಲಾಗು ತ್ತದೆ. ಪ್ಯಾಕೇಜ್ ಟೂರ್ ಕೈಗೊಳ್ಳುವುದರಿಂದ ಪ್ರತಿಯೊಬ್ಬರಿಗೂ ಶೇ.10 ರಿಂದ 15ರಷ್ಟು ಉಳಿತಾಯವಾಗುವುದು ನಿಶ್ಚಿತ ಎಂದು ಮಹೇಂದ್ರ ಸಾಲಿಯಾನ್ ತಿಳಿಸಿದರು.