'Vishwanath And Sons' OTT release date
- ಕಾಲಿವುಡ್ ನಟ ಸೂರ್ಯ ನಟನೆಯ ವಿಶ್ವನಾಥ್ ಅಂಡ್ ಸನ್ಸ್ ರಿಲೀಸ್.
- ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಒಟಿಟಿಗೆ ಸಿನಿಮಾ ಲಗ್ಗೆ.
- ವಿಶ್ವನಾಥ್ ಅಂಡ್ ಸನ್ಸ್ ಒಟಿಟಿ ಸ್ಟ್ರೀಮಿಂಗ್ ಹಕ್ಕನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ.
'Vishwanath And Sons' OTT release date: ಕಾಲಿವುಡ್ ನಟ ಸೂರ್ಯ ನಟನೆಯ ವಿಶ್ವನಾಥ್ ಅಂಡ್ ಸನ್ಸ್ ಆಗಸ್ಟ್ 14ರಂದು ರಿಲೀಸ್ ಆಗಿದ್ದು,
ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೂರ್ಯ ಸಹೋದರ ನಟ ಕಾರ್ತಿ ಸಹ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಈ ಹೊತ್ತಲ್ಲೇ...ಚಿತ್ರ ಯಾವ ಓಟಿಟಿ ಫ್ಲಾಟ್ಫಾರ್ಮ್ನಲ್ಲಿ ಬರಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ವೆಂಕಿ ಅಟ್ಲೂರಿ ನಿರ್ದೇಶನದ ಸೂರ್ಯ ಮತ್ತು ಮಾಲಿವುಡ್ ನಟಿ ಮಮಿತಾ ಬೈಜು, ರವೀನಾ ಟಂಟನ್, ರಾಧಿಕಾ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಭಾವನಾತ್ಮಕ ಮತ್ತು ಕೌಟುಂಬಿಕ, ಪ್ರೀತಿ, ಮದುವೆ ಒತ್ತಡ, ನಲವತ್ತರ ಪ್ರಾಯ ಹಾಗೂ ಪಿತೃತ್ವ ಸಂಬಂಧಗಳ ಸುತ್ತ ಈ ಸಿನಿಮಾದ ಕತೆ ಸುತ್ತಲಿದೆ. ಈಗಾಗಲೇ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪಾಸಿಟಿವ್ ರಿವ್ಯೂವ್ಗಳನ್ನು ಪಡೆದುಕೊಳ್ಳುತ್ತಿದೆ.
ಓಟಿಟಿಗೆ ಕಾಲಿಡೋದು ಯಾವಾಗ?
ವಿಶ್ವನಾಥ್ ಅಂಡ್ ಸನ್ಸ್ ಸಿನಿಮಾ ಈ ದಿನವಷ್ಟೇ ರಿಲೀಸ್ ಆಗಿರುವ ಕಾರಣ ಅಕ್ಟೋಬರ್ ಅಥವಾ ಸೆಪ್ಟೆಂಬರ್ ಕೊನೇ ವಾರದಲ್ಲಿ ಒಟಿಟಿಗೆ ಕಾಲಿಡಲಿದೆ. ಈಗಾಗಲೇ ನೆಟ್ಫ್ಲಿಕ್ಸ್ ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ, ಇನ್ನೂ ಯಾವ ದಿನ, ಯಾವ ತಿಂಗಳು ಸಿನಿಮಾ ನೋಡಬಹುದು ಎನ್ನುವ ಬಗ್ಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿಲ್ಲ.
ವೆಂಕಿ ಅಟ್ಲೂರಿಯವರನ್ನು ಟ್ಯಾಗ್ ಮಾಡಿ
ಸುಂದರ ಪಾತ್ರಗಳು ಮತ್ತು ಅದ್ಭುತ ಅಭಿನಯ.ಮುಕ್ತವಾಗಿ ನಗಿಸುವ ಮತ್ತು ಹೃದಯವನ್ನು ಪ್ರೀತಿಯಿಂದ ತುಂಬುವ ಆರೋಗ್ಯಕರ ಚಿತ್ರ. ಮತ್ತೊಮ್ಮೆ ನೋಡಲು ಇಷ್ಟಪಡುತ್ತೇನೆ ಎಂದು ನಟ ಕಾರ್ತಿ ಬರೆದುಕೊಂಡಿದ್ದಾರೆ.
ಜ್ಯೋತಿಕಾ-ಸೂರ್ಯ ಇಂಟರ್ವ್ಯೂ
ಹಾಲಿವುಡ್ ರಿಪೋರ್ಟರ್ ಇಂಡಿಯಾ ಸಂದರ್ಶಿಸಿತ್ತು. ಈ ವೇಳೆ ಇಬ್ಬರು ತಮ್ಮ ಸಿನಿ ಪ್ರಯಾಣ ಹಾಗೂ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದರು. ಜ್ಯೋತಿಕಾ ಅವರು ಸೂರ್ಯ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಗ್ಗೆ ಹಾಗೂ ಈಗ ಅದು ದುಪ್ಪಟ್ಟು ಕಡಿಮೆಯಾದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.
ಇಬ್ಬರು ಎಂದಿಗೂ ಈ ಕೆಲಸ ನೀವೆ ಮಾಡಬೇಕು ಎಂದು ಭಾವಿಸಿಲ್ಲ. ಸಮಾನಾಗಿ ಎಲ್ಲವನ್ನೂ ಮಾಡಿದ್ದೇವೆ. ಸಂಭಾವನೆಯನ್ನು ಸಂಭ್ರಮಿಸಿದ್ದೇವೆ. ಯಾರಿಗೇ ಪ್ರಶಸ್ತಿ ಸಿಕ್ಕರೂ ಒಬ್ಬರಿಗೊಬ್ಬರು ನೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದರು.
ಈ ಸಿನಿಮಾದಲ್ಲಿ ನಟನೆ
ಸೂರ್ಯ ಮತ್ತು ಜ್ಯೋತಿಕಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ, ಹಿಟ್ ಜೋಡಿ ಎನಿಸಿಕೊಂಡಿದ್ದಾರೆ. ಕಾಕಾ-ಕಾಕಾ, ಪೇರಳಗನ್, ಮಾಯಾವಿ, ಸಿಲ್ಲುನು ಒರಿ ಕಾದಲ್, ಪೋರಾಟಮ್ ಉಯಿರಿಲೇ ಕಲಂದಂಧು ಸಿನಿಮಾಗಳಲ್ಲಿ ಮಿಂಚಿದ್ದಾರೆ, (ಏಜೆನ್ಸೀಸ್).