Vijay-Trisha Love Story Kutty Padmini Reveals Story
- ತ್ರಿಷಾ-ವಿಜಯ್ ಮಧ್ಯೆ ಪ್ರೀತಿ ಇತ್ತು..ಚಂದ್ರ ಶೇಖರ್ ಅವರಿಂದ ಇದಕ್ಕೆ ಒಪ್ಪಿಗೆ ಇರಲಿಲ್ಲ
- ತ್ರಿಷಾ ಮತ್ತು ಸಿಎಂ ವಿಜಯ್ ಅವರ ಒಡನಾಟದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಕುಟ್ಟಿ ಪದ್ಮಿನಿ
- ತ್ರಿಷಾ ನನಗೆ ಮಗಳಿದ್ದಂತೆ, ಎಲ್ಲದಕ್ಕೂ ಆಕೆಯನ್ನು ದೂಷಿಸೋದು ಸರಿಯಿಲ್ಲ ಎಂದ ಹಿರಿಯ ನಟಿ
ವಿಜಯ್ ಮತ್ತು ಸಂಗೀತಾ ನಡುವೆ ಬಿರುಕು ಇಂದಿನಿಂದ ಶುರುವಾಗಿದ್ದಲ್ಲ. ಐದಾರು ವರ್ಷಗಳಿಂದ ಇದೆ. ಗಂಡ-ಹೆಂಡತಿ ಎಂದರೆ ಅವರ ಮಧ್ಯೆ ಸಾವಿರ ಸಮಸ್ಯೆಗಳಿರುತ್ತವೆ. ಅದೆಲ್ಲದಕ್ಕೂ ಹೆಣ್ಣನ್ನು ಕಾರಣವಾಗಿಸಿ ದೂಷಿಸೋದು ತಪ್ಪಾಗುತ್ತದೆ. ತ್ರಿಷಾ ಮತ್ತು ವಿಜಯ್ ಮಧ್ಯೆ ಗೆಳೆತನ ಇತ್ತು. ಹೀಗೆಂದು ಇಂಚಿಂಚೂ ಮಾಹಿತಿ ಕೊಟ್ಟಿದ್ದು ಹಿರಿಯ ನಟಿ ಕುಟ್ಟಿ ಪದ್ಮಿನಿ ಅವರು.
ಡಿವೋರ್ಸ್ಗೆ ಅರ್ಜಿ
ನನ್ನ ಪತಿ ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧವಿಟ್ಟುಕೊಂಡಿದ್ದಾರೆ. ನನಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಇದು ನನಗೆ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದೆ ಎಂದು ಸಂಗೀತಾ ಸ್ವರ್ಣಲಿಂಗಂ ಅವರು ತಮಿಳುನಾಡಿನ ಸಿಎಂ ವಿಜಯ್ ಅವರಿಂದ ಡಿವೋರ್ಸ್ ಬೇಕು ಎಂದು ಮಧುರೈನ ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆ ದಿನದಿಂದಲೂ ತ್ರಿಷಾ ಮತ್ತು ವಿಜಯ್ ಅವರ ಒಡೆನಾಟ ಬಹಿರಂಗವಾಗಿ ನಡೆಯುತ್ತಿತ್ತು. ತ್ರಿಷಾ ಅವರ ವಿರುದ್ಧ ಸಾಕಷ್ಟು ಟ್ರೋಲ್ಗಳು, ಮೀಮ್ಸ್ ಕ್ರಿಯೇಟ್ ಮಾಡಲಾಗಿತ್ತು. ನಟಿಯಿಂದಲೇ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದರು.
ನಿಜಕ್ಕೂ ತ್ರಿಷಾ ಮತ್ತು ವಿಜಯ್ ಮಧ್ಯೆ ಸಂಬಂಧವಿದಯೇ, ಅವರಿಬ್ಬರು ಒಬ್ಬರನ್ನೊಬ್ಬರು ಪ್ರೇಮಿಸಿಕೊಂಡಿದ್ದಾರಾ ಎನ್ನುವ ಹಲವು ಪ್ರಶ್ನೆಗಳು ಹಲವರಲ್ಲಿ ಇದೆ. ಸದ್ಯ ಈ ಎಲ್ಲ ವಿದ್ಯಾಮಾನಗಳ ಬಗ್ಗೆ ಹಿರಿಯ ನಟಿ ಕುಟ್ಟಿ ಪದ್ಮಿನಿ ಅವರು ಮಾತನಾಡಿದ್ದಾರೆ. ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಸಂಬಂಧದ ಬಗ್ಗೆ ಬಹಿರಂಗವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ತ್ರಿಷಾ ಎಲ್ಲದಕ್ಕೂ ಕಾರಣ ಅಲ್ಲ ಎಂದ
ತ್ರಿಷಾ ನನಗೆ ಮಗಳಿದ್ದಂತೆ. ಇತ್ತೀಚೆಗೆ ಆಕೆ ಮೇಲಾಗುತ್ತಿರುವ ಟ್ರೋಲ್. ಆಕೆ ಎದುರಿಸುತ್ತಿರುವ ನಿಂದನೆಗಳನ್ನು ಕಂಡು ನನಗೆ ಬೇಸರವಾಯ್ತು. ತ್ರಿಷಾ ಮತ್ತು ವಿಜಯ್ ಸದ್ಯ ಸ್ನೇಹಿತರಂತೆ ಒಡನಾಟ ನಡೆಸುತ್ತಿರುವುದನ್ನೇ ಬಂಡವಾಳ ಮಾಡಿಕೊಂಡು ಇದೇ ಕಾರಣಕ್ಕೆ ದಂಪತಿ ಮಧ್ಯೆ ಬಿರುಗಾಳಿ ಎದ್ದಿದೆ. ಡಿವೋರ್ಸ್ಗೆ ಅಪ್ಲೈ ಮಾಡಿದ್ದಾರೆ ಎನ್ನೋದು ತಪ್ಪು ಎಂದು ಕುಟ್ಟಿ ಪದ್ಮಿನಿ ಹೇಳಿದ್ದರು.
https://youtube.com/shorts/XCHgdrqbdmc?si=ixb9sNvaAZOf2ooa
https://youtube.com/shorts/XCHgdrqbdmc?si=ixb9sNvaAZOf2ooa
ಮುಂದುವರೆದು ಮಾತನಾಡಿದ ಅವರು, ವಿಜಯ್ ಮತ್ತು ಸಂಗೀತಾ ನಡುವೆ ಭಿನ್ನಭಿಪ್ರಾಯ ಶುರುವಾಗಿರುವುದು ಇಂದಿನಿಂದಲ್ಲ. ಹಲವು ವರ್ಷಗಳಿಂದ ಇದೆ. ಗಂಡ-ಹೆಂಡತಿ ಎಂದ ಮೇಲೆ ಸಾಕಷ್ಟು ಸಮಸ್ಯೆಗಳು...ಬಿರುಕು ಇರುತ್ತದೆ. ಅದೆಲ್ಲದಕ್ಕೂ ಮತ್ತೊಂದು ಹೆಣ್ಣು ಕಾರಣ ಎಂದು ದೂಷಿಸೋದು ತಪ್ಪು. ಎರಡು ಕೈ ಸೇರಿದ್ರೇನೆ ಚಪ್ಪಾಳೆ ಹೊಡೆಯಲು ಸಾಧ್ಯವಾಗೋದು. ಇಬ್ಬರು ಸ್ನೇಹಿತರು ಒಟ್ಟಾಗಿ ಕಾರಿನಲ್ಲಿ ಪ್ರಯಾಣಿಸಿದರೆ ತಪ್ಪೇನಿದೆ ಎಂದು ಕಿಡಿಕಾರಿದರು.
ಹೌದು ಸಂಬಂಧ ಇತ್ತು
ಗಿಲ್ಲಿ ಸಿನಿಮಾದ ಆರಂಭದಲ್ಲಿ ತ್ರಿಷಾ ಮತ್ತು ವಿಜಯ್ ನಡುವೆ ಸಂಬಂಧ ಹಾಗೂ ಪ್ರೀತಿ ಇದ್ದಿದ್ದು ನಿಜ ಆದರೆ ವಿಜಯ್ ತಂದೆ ಚಂದ್ರಶೇಖರ್ ಈ ಸಂಬಂಧಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಹೀಗಾಗಿ ಅವರಿಬ್ಬರು ತಮ್ಮದೇ ಆದ ಪ್ರತ್ಯೇಕ ದಾರಿಗಳನ್ನು ಕಂಡುಕೊಂಡರು. ಆ ಘಟನೆಯನಂತರ ತುಂಬಾ ವರ್ಷಗಳ ಕಾಲ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ,. ಭೇಟಿಯಾಗಿರಲಿಲ್ಲ,. ಇತ್ತೀಚೆಗೆ ಅವರಿಬ್ಬರ ಮಧ್ಯೆ ಒಡನಾಟ ಶುರುವಾಗಿದ್ದು. ಹೀಗಿರುವಾಗ ವಿಜಯ್ ಕುಟಂಬದ ಸಮಸ್ಯೆಗೆ ತ್ರಿಷಾ ಅವರು ಹೇಗೆ ಕಾರಣರಾಗ್ತಾರೆ ಎಂದು ಕುಟ್ಟಿ ಪದ್ಮಿನಿ ಅವರು ಪ್ರಶ್ನೆ ಮಾಡಿದರು.
ವಿಜಯ್ ಈಗ ಸಿಎಂ ಆಗಿದ್ದಾರೆ. ಯಾರ ವಿರುದ್ಧವೂ ಕುತಂತ್ರ ಮಾಡೋದಿಲ್ಲ. ಸರಳವಾಗಿದ್ದಾರೆ ಎಂದು ತಮಿಳುನಾಡಿನ ಸಿಎಂ ಬಗ್ಗೆ ಕುಟ್ಟಿ ಪದ್ಮಿನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎಂ ವಿಜಯ್-ತ್ರಿಷಾ ಸಿನಿಮಾಗಳಿವು