Jana Nayagan To Make OTT Debut On August 21
- ತಮಿಳುನಾಡಿನ ಸಿಎಂ ವಿಜಯ್ ಅಭಿಮಾನಿಗಳಿಗೆ ಗುಡ್ನ್ಯೂಸ್.
- ಸಿಎಂ ಜೋಸೆಫ್ ವಿಜಯ್ ನಟನೆಯ ಕೊನೇ ಸಿನಿಮಾ ಒಟಿಟಿಗೆ ಲಗ್ಗೆ.
- ಆಗಸ್ಟ್21ರಂದು ಜೀ5 ಒಟಿಟಿ ಫ್ಲಾಟ್ ಫಾರ್ಮ್ನಲ್ಲಿ ಜನನಾಯಗನ್ ನೋಡಲು ಲಭ್ಯ.
ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ಜನನಾಯಗನ್(
) ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ವಿಶ್ವದಾದ್ಯಂತ 325 ಕೋಟಿಗೂ ಅಧಿಕ ಗಳಿಸಿ, ಬ್ಲಾಕ್ ಬ್ಲಸ್ಟರ್ ಹಿಟ್ ಆದ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಆ ಮೂಲಕ ಸಿಎಂ ವಿಜಯ್ ಅವರ
ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದು ಸಿಕ್ಕಿದೆ.
ಹೌದು ಇದೇ ವಾರ ಆಗಸ್ಟ್21ರಂದು ಜೀ5 ಒಟಿಟಿ ಫ್ಲಾಟ್ ಫಾರ್ಮ್ನಲ್ಲಿ ನೀವು ಜನನಾಯಗನ್ ಸಿನಿಮಾ ನೋಡಬಹುದಾಗಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ಟೀಸರ್ ಹಂಚಿಕೊಂಡು ಸಿನಿಮಾ ತಂಡ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದೆ. ಎಚ್ ವಿನೋತ್ ನಿರ್ದೇಶನದ ಜನನಾಯನ್ ಸಿನಿಮಾಕ್ಕಾಗಿ ಸಿಎಂ ವಿಜಯ್, ನಟಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಹಾಗೂಮಮಿತಾ ಬೈಜು ಬಣ್ಣ ಹಚ್ಚಿದ್ದಾರೆ.
ಸಿನಿಮಾ ಬಗ್ಗೆ
ಮಾಜಿ ಪೊಲೀಸ್ ಅಧಿಕಾರಿ ..ಹಾಲಿ ಪೊಲೀಸ್ ಅಧಿಕಾರಿಯ ಮಗಳನ್ನು ಫಿಯರ್ ಫೋಬಿಯಾದಿಂದ ರಕ್ಷಿಸಲು ಮತ್ತು ಆಕೆಯನ್ನು ಸೇನೆಗೆ ಸೇರಿಸಲು ಪಡುವ ಕಷ್ಟ ಹಾಗೂ ಸಾಮಾನ್ಯ ಜನರಿಗೆ ಸುಲಭವಾಗಿ ಸಿಗುವ ಗನ್ಗಳು ಅದರಿಂದ ಯುವಜನರ ಮೇಲೆ ಬೀರುವ ಪರಿಣಾಮ ತಡೆಯುವ ಬಗ್ಗೆ ಹಾಗೂ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಮಧ್ಯೆ ನಡೆಯುವ ಕೋಮು ಗಲಭೆ ಸುತ್ತ ಸಿನಿಮಾದ ಕತೆ ಸುತ್ತುತ್ತದೆ. ಪೂಜಾ ಹೆಗ್ಡೆ ಅವರಿಗೆ ಅಷ್ಟಾಗಿ ಸ್ಕ್ರೀನ್ ಕೊಟ್ಟಿಲ್ಲ. ಪ್ರಿಯಾಮಣಿ ಅವರೂ ಸಹ ಒಂದೆರೆಡು ಬಾರಿ ಕಾಣಿಸಿಕೊಳ್ಳುತ್ತಾರೆ ಅಷ್ಟೇ. ಪ್ರಕಾಶ್ ರಾಜ್ ಅವರು ತಮ್ಮ ಪಾತ್ರಕ್ಕೆ ಎಂದಿನಂತೆ ಜೀವ ನೀಡಿದ್ದಾರೆ.
ಜನ ನಾಯಗನ್ ರಿಲೀಸ್ಗೆ ವಿಳಂಬ ಯಾಕೆ?
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಚಿತ್ರದ ಬಿಡುಗಡೆಯು ಹಲವಾರು ತಿಂಗಳುಗಳ ಕಾಲ ವಿಳಂಬವಾಯಿತು. ಈ ವಿಳಂಬದ ಬಗ್ಗೆ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು, ಆದರೆ ಈ ವಿಷಯವು ಸುಪ್ರೀಂ ಕೋರ್ಟ್ ಅನ್ನು ಸಹ ತಲುಪಿತು. ಸಿನಿಮಾ ಯಾಕೆ ರಿಲೀಸ್ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ವಿನೋತ್ ಅಚ್ಚರಿ ಹೇಳಿಕೆ ಕೊಟ್ಟಿದ್ದರು. ಹೇಳುವ ಧೈರ್ಯ ನನಗೆ ಇಲ್ಲ. ನಾನು ಹೇಳುವುದನ್ನು ಕೇಳಿಸಿಕೊಳ್ಳುವ ಧೈರ್ಯ ನಿಮಗೂ ಇಲ್ಲ ಎಂದಿದ್ದರು.
HD ಕ್ವಾಲಿಟಿಯಲ್ಲಿ ಸಿನಿಮಾ ಸೋರಿಕೆ
ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗುವ ಮುನ್ನವೇ, ಆನ್‌ಲೈನ್‌ನಲ್ಲಿ ಎಚ್ಡಿ ಕ್ವಾಲಿಟಿಯಲ್ಲಿ ಸೋರಿಕೆಯಾಗಿತ್ತುಈ ಹಿನ್ನಡೆಗಳ ಹೊರತಾಗಿಯೂ, ಜನ ನಾಯಗನ್ ಅಂತಿಮವಾಗಿ ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು, (ಏಜೆನ್ಸೀಸ್).