Jyotika earned 3 times more than Suriya early in their careers 
ಕಾಲಿವುಡ್

ಸೂರ್ಯನಿಗಿಂತ 3 ಪಟ್ಟು ಹೆಚ್ಚು ಸಂಪಾದಿಸುತ್ತಿದ್ದೆ, ಆದರೆ ಈಗ...; ಸಂಭಾವನೆ ಬಗ್ಗೆ ಸೀಕ್ರೇಟ್​ ರಿವೀಲ್ ಮಾಡಿದ ನಟಿ ಜ್ಯೋತಿಕಾ..Jyotika

ಪ್ರಮುಖ ಮುಖ್ಯಾಂಶಗಳು

  • ಕಾಕಾ ಕಾಕ ಸಿನಿಮಾಗೆ ಸೂರ್ಯನನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಹೇಳಿದ್ದು ನಾನೆ ಎಂದ ಜ್ಯೋತಿಕಾ
  • ನಾವು ಇಬ್ಬರ ಯಶಸ್ಸನ್ನು, ಸಂಪಾದನೆಯನ್ನು ಪ್ರಶಂಸಿಸಿಕೊಳ್ಳುತ್ತೇವೆ ಎಂದ ನಟಿ ಜ್ಯೋತಿಕಾ
  • ನಟಿ ಜ್ಯೋತಿಕಾ ಹಾಗೂ ಸೂರ್ಯ ಫೋಟೋ ಶೂಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್
Jyotika earned 3 times more than Suriya early in their careers: ನಟ ಸೂರ್ಯ ಹಾಗೂ  ನಟಿ ಜ್ಯೋತಿಕಾ  ದಕ್ಷಿಣ ಭಾರತದ ಅದರಲ್ಲೂ ಕಾಲಿವುಡ್​​ನ  ಜನಪ್ರಿಯ ಸೆಲಬ್ರೆಟಿ ಕಪಲ್ಸ್​. ಇದ್ದರೆ ಇವರಿಬ್ಬರಂತೆ ನೂರು ಕಾಲ ಬಾಳಬೇಕು ಎನ್ನುವ ಮಾತುಗಳು ಇವೆ.  ಪೂವೆಲ್ಲಮ್ ಕೆಟ್ಟುಪಾರ್​, ಪೇರಳಗನ್​,  ಕಾಕ ,ಕಾಕ ಸೇರಿದಂತೆ ಬ್ಲಾಕ್​ ಬ್ಲಷ್ಟರ್​ ಸಿನಿಮಾಗಳನ್ನು ಕೊಟ್ಟ ಇವರು ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆಗಿನ ಸಂದರ್ಶನದ ವಿಡಿಯೋ ತುಣುಕಗಳು ಹಾಗೂ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಇದೇ ವೇಳೆ ನಟಿ  ಜ್ಯೋತಿಕಾ ಅವರು ಸಿನಿಮಾಗೆ ಎಂಟ್ರಿಯಾದ ಕಾಲದಲ್ಲಿ ತಾವು ತೆಗೆದುಕೊಳ್ಳುತ್ತಿದ್ದ ಸಂಭಾವನೆ  ಹಾಗೂ ಸೂರ್ಯ ಅವರ ಸಂಭಾವನೆ ಎಷ್ಟಿತ್ತು.  ಈಗ ಅದು ಯಾವ ಮಟ್ಟಕ್ಕೆ ಬಂದಿಳಿದಿದೆ ಎನ್ನುವುದನ್ನು ಹಂಚಿಕೊಂಡಿರುವುದು  ಫ್ಯಾನ್ಸ್​​ಗೆ ಅಚ್ಚರಿ ಮೂಡಿಸುವಂತೆ ಮಾಡಿದೆ. 

ಜ್ಯೋತಿಕಾ ಹೇಳಿದ್ದೇನು?

ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸೋದೆ ದಾಂಪತ್ಯದ ಶಕ್ತಿ. ಈ ಗುಣವೇ ನಾವು ಇಷ್ಟು ಕಾಲ ಜೊತೆಯಾಗಿ ಕಳೆಯಲು ಸಹಾಯ ಮಾಡಿದ್ದು ಎಂದು ಹೇಳಿದರು. ಮುಂದುವರೆದು, ನಾನು ಸಿನಿಮಾದಲ್ಲಿ ನಟಿಯಾಗಿ ಮಿಂಚಲು ಕಾಣಿಸಿಕೊಂಡ ದಿನಗಳಲ್ಲಿ ನಾನು ಸೂರ್ಯಗಿಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದೆ. ಆಗ ಅವರಿಗಿಂತ ಮೂರು ಪಟ್ಟು ಹೆಚ್ಚಿತ್ತು. ಈಗ ಅದು ಉಲ್ಟಾ ಮೂವತ್ತು ಪಟ್ಟು ಕಡಿಮೆ ತೆಗೆದುಕೊಳ್ತಿದ್ದೇನೆ ಎಂದು ಜ್ಯೋತಿಕಾ ಹೇಳುತ್ತಾ ನಗೆಗಡಲಲ್ಲಿ ತೇಲಿದರು.

ನಾವಿಬ್ಬರೂ ಸಮಾನರು

2003ರಲ್ಲಿ ಕಾಲಿವುಡ್​ನಲ್ಲಿ ಕಾಕ ಕಾಕ ಸಿನಿಮಾ ರಿಲೀಸ್ ಆಗಿತ್ತು.  ಗೌತಮ್​ ವಾಸುದೇವ್​​ ಮೆನನ್ ನಿರ್ದೇಶಕರಾದರೆ, ಎಸ್​ ಧನು, ಕಲೈಪುಲಿ ಎಸ್​, ಥಾನು ನಿರ್ಮಾಪಕರು.  ಪೊಲೀಸ್ ಆಗಿ ಸೂರ್ಯ ಮಿಂಚಿದ್ದಾರೆ.  ನಟಿ ಜ್ಯೋತಿಕ,  ರಮ್ಯಕೃಷ್ಣ, ದೇವದರ್ಶಿನಿ ಸುಕುಮಾರನ್​ ಸೇರಿದಂತೆ ಹಲವರು ನಟಿಸಿದ್ದರು. ಈ ಸಿನಿಮಾಕ್ಕೆ ಸೂರ್ಯ ಅವರನ್ನು ನಾಯಕನಾಗಿ ಆಯ್ಕೆ ಮಾಡಲು ತಾವೇ ಶಿಫಾರಸ್ಸು ಮಾಡಿದ್ದು ಎಂದು ಜ್ಯೋತಿಕಾ ಬಹಿರಂಗ ಪಡಿಸಿದ್ದಾರೆ
ಪುರುಷನಲ್ಲಿ ಸಮಾನತೆಯ ಗುಣ ಒಳಗಿಂದ ಬರಬೇಕು ಅದು ಸೂರ್ಯನಲ್ಲಿ ನಾನು ಕಂಡರ. ನಾವಿಬ್ಬರೂಸಮಾನರು. ನಾನು ಅಡುಗೆ ಮಾಡಿದರೆ, ಅವರು ನನಗೆ ಸಹಾಯ ಮಾಡುತ್ತಾರೆ. ಮಕ್ಕಳ ಲಾಲನೆ-ಪಾಲನೆ, ಸಿನಿಮಾ ನಿರ್ಮಾಣ ಸೇರಿದಂತೆ ಪ್ರತಿ ಕೆಲಸವು ಜೊತೆಯಾಗಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಇಬ್ಬರು ಪ್ರೇಮಿಗಳಾಗಿದ್ದು ಹೀಗೆ 

1999ರಲ್ಲಿ ಪೂವೆಲ್ಲಾಮ್ ಕೇಟ್ಟುಪಾರುಸಿನಿಮಾದಲ್ಲಿ  ಜ್ಯೋತಿಕಾ ಹಾಗೂ ಸೂರ್ಯ ಒಟ್ಟಾಗಿ ನಟಿಸಿದರು. ಆ ಮೂಲಕ ಇಬ್ಬರಿಗೂ ಪರಿಚಯವಾಯ್ತು. ಉಯಿರಿಲೇ ಕಲದಂಧು, ಕಾಕ ಕಾಕ, ಪೇರಳಗನ್​, ಮಾಯಾವಿ, ಸಿಲ್ಲನು ಒರು ಕಾದಲ್​​,  ಪೋರಾಟಮ್​​, ಉಯಿರಿಲೆ ಕಲಂಥತ್ತು  ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ ಹಿಟ್​​ ಕೊಟ್ಟಿದ್ದರು.  ಪ್ರೇಕ್ಷಕರಿಗೆ ಈ ಜೋಡಿ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಇನ್ನೂ ಸಿನಿಮಾಗಳ ಮೂಲಕ ಸ್ನೇಹ ಸಂಪಾದಿಸಿಕೊಂಡ ದಂಪತಿ ನಂತರ ಪ್ರೀತಿಯಲ್ಲಿ ಬಿದ್ದರು. ಹಲವಾರು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದು 2006ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶೀಘ್ರದಲ್ಲೇ ಸಿನಿಮಾದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ತಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಿದರು. ಅಂತಿಮವಾಗಿ ಅವರು 2015 ರಲ್ಲಿ ರೋಶನ್ ಆಂಡ್ರ್ಯೂಸ್ ಅವರ ವಯಸ್ಸಿನಿಲೆ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಬೆರಳೆಣಿಕೆ ಸಿನಿಮಾದಲ್ಲಿ ನಟನೆ

ಸೂರ್ಯ ಹಾಗೂ ಜ್ಯೋತಿಕಾ ಅವರು ಸದ್ಯ ಬೆರಳೆಣಿಕೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರುಪ್ಪು ಸಿನಿಮಾ ದೊಡ್ಡ ಹಿಟ್​​ ಅನ್ನು ಕಂಡಿತ್ತು. ಇನ್ನು ಜ್ಯೋತಿಕಾ ಅವರ ಸಿಸ್ಟಂ ಎನ್ನುವ ವೆಬ್​ಸೀರಿಸ್​ ಅಮೆಜಾನ್​ನಲ್ಲಿ ರಿಲೀಸ್​ ಆಗಿದ್ದು, ಅಷ್ಟೊಂದು ರುಚಿಸಲಿಲ್ಲ. ರಬ್ಬರ್​ನಂತೆ ಎಳೆದಾಡಲಾಗಿದೆ ಎಂದು ಪ್ರೇಕ್ಷಕರು ದೂರಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್​ ನಟಿ ಸೋನಾಕ್ಷಿ ನಟಿಸಿದ್ದರು, (ಏಜೆನ್ಸೀಸ್).