ರಜಿನಿಕಾಂತ್​ 
ಕಾಲಿವುಡ್

‘ಜೈಲರ್ 2’ ಮಾಲಾಮಾಲ್ ರಜಿನಿ ಕಮಾಲ್ : ರಿಲೀಸ್ ಆದ ಒಂದು ವಾರಕ್ಕೆ 500 ಕೋಟಿ ಕ್ಲಬ್ ಸೇರಿದ ತಮಿಳು ಸಿನಿಮಾ JAILER 2

ಕಳೆದ ಅಕ್ಟೋಬರ್ 15ರಂದು ಬಿಡುಗಡೆಯಾಗಿದ್ದ ತಮಿಳು ನಟ ರಜಿನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರವು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ರಿಲೀಸ್ ಆದ ಒಂದು ವಾರಕ್ಕೆ ಈ ಚಿತ್ರವು 549 ಕೋಟಿ ರೂ. ಗಳಿಕೆ ಮಾಡಿದೆ. ಆ ಮೂಲಕ 500 ಕೋಟಿ ರೂ. ಗಳಿಕೆ ಮಾಡಿದ ತಮಿಳಿನ 5 ಚಿತ್ರಗಳಲ್ಲಿ ‘ಜೈಲರ್ 2’ ಎರಡನೇ ಸ್ಥಾನದಲ್ಲಿದೆ.

ಕಳೆದ ಅಕ್ಟೋಬರ್ 15ರಂದು ಬಿಡುಗಡೆಯಾಗಿದ್ದ ತಮಿಳು ನಟ ರಜಿನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರವು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ರಿಲೀಸ್ ಆದ ಒಂದು ವಾರಕ್ಕೆ ಈ ಚಿತ್ರವು 549 ಕೋಟಿ ರೂ. ಗಳಿಕೆ ಮಾಡಿದೆ. ಆ ಮೂಲಕ 500 ಕೋಟಿ ರೂ. ಗಳಿಕೆ ಮಾಡಿದ ತಮಿಳಿನ 5 ಚಿತ್ರಗಳಲ್ಲಿ ‘ಜೈಲರ್ 2’ ಎರಡನೇ ಸ್ಥಾನದಲ್ಲಿದೆ. ಆ ಮೂಲಕ ಬಾಕ್ಸಾಫೀಸ್‌ನಲ್ಲಿ ರಜಿನಿಕಾಂತ್ ಕಮಾಲ್ ಮಾಡಿದ್ದಾರೆ. ಕಳೆದ ಗುರುವಾರ (ಅ.15) ರಿಲೀಸ್ ಆಗಿದ್ದ ‘ಜೈಲರ್ 2’ ಮೊದಲ ದಿನವೇ 60 ಕೋಟಿ ರೂ. ಗಳಿಕೆ ಮಾಡಿತ್ತು. ಬಳಿಕ ಎರಡನೇ ದಿನ 37 ಕೋಟಿ ರೂ., 3ನೇ ದಿನಕ್ಕೆ 47 ಕೋಟಿ, 4ನೇ ದಿನ 55.85 ಕೋಟಿ, 5ನೇ ದಿನ 42.35 ಕೋಟಿ, ಆರನೇ ದಿನ 46.80 ಕೋಟಿ, 7ನೇ ದಿನ 28 ಕೋಟಿ, ಎಂಟನೇ ದಿನವಾದ ಗುರುವಾರ 17.15 ಕೋಟಿ ಕಮಾಯಿ ಮಾಡಿ ‘ಜೈಲರ್ 2’ ಬಾಕ್ಸಾಫೀಸ್‌ನಲ್ಲಿ ಮೈಲಿಗಲ್ಲು ಸಾಧಿಸಿದೆ. ಈ ವೀಕೆಂಡ್‌ನಲ್ಲಿ ಗಳಿಕೆ ಪ್ರಮಾಣ ಹೆಚ್ಚಲಿದೆ. ಕಲೆಕ್ಷನ್‌ನಲ್ಲಿ ಮೊದಲ ಸ್ಥಾನದಲ್ಲಿರುವ ತಮಿಳಿನ ‘2.0’ ಚಿತ್ರದ ದಾಖಲೆಯನ್ನು ‘ಜೈಲರ್ 2’ ಬ್ರೇಕ್ ಮಾಡಲಿದೆ ಎನ್ನಲಾಗುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ ಇದಾಗಿದ್ದು, ರಜಿನಿ ಜತೆಗೆ ರಮ್ಯಾಕೃಷ್ಣ, ಶಿವರಾಜಕುಮಾರ್, ಮೋಹನ್‌ಲಾಲ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ.ಸೂರ್ಯ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್

ತಲೈವಾ ಮೈಲಿಗಲ್ಲು

ನಟ ರಜಿನಿಕಾಂತ್ ತಮಿಳು ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ. ಈವರೆಗೆ 500 ಕೋಟಿ ರೂ. ಕ್ಲಬ್ ಸೇರಿದ ತಮಿಳು ಸಿನಿಮಾಗಳ ಸಂಖ್ಯೆ ಕೇವಲ 5. ಅದರಲ್ಲಿ ನಾಲ್ಕು ರಜಿನಿಕಾಂತ್ ಅಭಿನಯದ ಚಿತ್ರಗಳೇ ಎಂಬುದು ವಿಶೇಷ. ಅವರ ‘2.0’(700 ಕೋಟಿ), ‘ಜೈಲರ್’ (605ಕೋಟಿ), ‘ಜೈಲರ್ 2’ (549 ಕೋಟಿ) ಹಾಗೂ ‘ಕೂಲಿ’ (514 ಕೋಟಿ) ಈ ಸಾಧನೆ ಮಾಡಿವೆ. ಈ ಐದರಲ್ಲಿ ದಳಪತಿ ವಿಜಯ್ ಅಭಿನಯದ ‘ಲಿಯೋ’ (595 ಕೋಟಿ) ಮೂರನೇ ಸ್ಥಾನದಲ್ಲಿದೆ.