Dhruv Vikram Reacts to Rumours Surrounding His Personal Life
- ವೈಯಕ್ತಿ ಟೀಕೆಗಳು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದ ಧ್ರುವ್ ವಿಕ್ರಂ.
- ಪ್ರೀತಿಸುವವರನ್ನು ಕಾಪಾಡಿಕೊಳ್ಳುವುದು, ನನಗೆ ನಾನೆ ಸೈನಿಕನಾಗಿ ನಿಲ್ಲುವುದು ಮುಖ್ಯ ಎಂದ ಧ್ರುವ್.
- ಮಾಜಿ ಸಂಗಾತಿಯನ್ನು ಅನ್ನಿಯನ್ ಸಿನಿಮಾ ಪಾತ್ರಕ್ಕೆ ಹೋಲಿಸಿದ್ದ ಅನುಪಮಾ ಪರಮೇಶ್ವರನ್.
Dhruv Vikram Reacts to Rumours Surrounding His Personal Life:
ಇತ್ತೀಚೆಗೆ ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಹಳೆಯ ಸಂಬಂಧದಿಂದಾಗಿ ಅನುಭವಿಸಿದ ಸಂಕಟದ ಬಗ್ಗೆ ಮಾತನಾಡಿದ್ದರು. ತಮ್ಮ ಮಾಜಿ ಸಂಗಾತಿಯನ್ನು ನಟ ವಿಕ್ರಂ ಸಿನಿಮಾದ ಅನ್ನಿಯನ್ ಪಾತ್ರಕ್ಕೆ ಹೋಲಿಕೆ ಮಾಡಿದ್ದರು. ಆ ಮೂಲಕ ಚರ್ಚೆಯಲ್ಲಿದ್ದ ಈ ಅವರ ವಿಚಾರಗಳು ಸದ್ಯ ಧ್ರುವ್ ವಿಕ್ರಂ ಮಾತುಗಳತ್ತ ನೆಟ್ಟಿದೆ.
ಧ್ರುವ್ ವಿಕ್ರಂ ಮತ್ತು ಅನುಪಮಾ ಪರಮೇಶ್ವರನ್ ಅವರು 2025ರಲ್ಲಿ ರಿಲೀಸ್ ಆಗಿದ್ದ ‘ಬೈಸನ್ ಕಾಳಮಾಡನ್’ ಸಿನಿಮಾದಿಂದ ಪರಿಚಿತರು. ಇಬ್ಬರು ಒಟ್ಟಾಗಿದ್ದಾರೆ. ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹೆಚ್ಚಾಗಿಯೇ ಹರಡಿತ್ತು. ಆದರೆ, ಇದು ನಿಜ ಎಂದು ಸಾಬೀತಾಗುವ ಮೊದಲೇ..ಇತ್ತೀಚೆಗೆ ನಟಿ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ತುಣುಕಗಳು ಬ್ರೇಕಪ್ ಆದ ಬಗ್ಗೆ ಹೇಳುತ್ತಿತ್ತು.
ಅನ್ನಿಯನ್ ಸಿನಿಮಾ ಕ್ಯಾರೆಕ್ಟರ್ಗೆ ಹೋಲಿಕೆ
ಮಾಜಿ ಸಂಗಾತಿ ವಿಕ್ರಂ ಸಿನಿಮಾದ ಅನ್ನಿಯನ್ ಇದ್ದಂತೆ ಬೆಳಿಗ್ಗೆ ರೆಮೋ ಆದರೆ ಸಂಜೆ ಅನ್ನಿಯನ್ನಂತೆ ವರ್ತಿಸುತ್ತಾನೆ. ಮಾಜಿ ಪ್ರೇಮಿಯಿಂದ ಎರಡು ವರ್ಷಗಳ ಕಾಲ ತೀವ್ರ ಮಾನಸಿಕವಾಗಿ ನೊಂದಿದ್ದೆ . ನನ್ನ ಸಿನಿಮಾ, ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಹಿಡಿತವಿತ್ತು. ಪರಿಚಯವಾದ ಮೂರೇ ತಿಂಗಳಿಗೆ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದರು ಎಂದು ಅನುಪಮಾ ನೋವು ತೋಡಿಕೊಂಡಿದ್ದರು. ಇಲ್ಲಿ ಅನುಪಮಾ ಅವರು ಧ್ರುವ್ ವಿಕ್ರಂರ ಹೆಸರು ಹೇಳದಿದ್ದರೂ ಎಲ್ಲರೂ ಅವರತ್ತಲೇ ಬೊಟ್ಟು ಮಾಡಿದ್ದರು. ಇದರಿಂದ ನಟನಿಗಾದ ಸಮಸ್ಯೆ, ಮಾನಸಿಕ ಹಿಂಸೆ ಬಗ್ಗೆ ಖಾಸಗಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಧ್ರುವ್ ವಿಕ್ರಂ ಹೇಳಿದ್ದೇನು?
ನೀವು ನಿಮಗಾಗಿ ಹೋರಾಡುವ ಸೈನಿಕನಾಗಲು ಕಲಿಯಲು ಶುರುಮಾಡುತ್ತೀರಿ. ನಿಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು, ನಿಮಗಾಗಿ ಕೆಲಸ ಮಾಡಿ ನಿಮ್ಮ ಖಾಸಗಿ ವಲಯವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಕ್ಕನ ಮಕ್ಕಳು, ಅಪ್ಪ..ಸಂಗೀತ ಪ್ರಪಂಚ
ಪ್ರೈವೇಟ್ ಇನ್‌ಸ್ಟಾಗ್ರಾಮ್ ಖಾತೆ ಇದೆಯೋ ಇಲ್ಲವೋ ಎಂಬ ಬಗ್ಗೆ ಮಾತನಾಡಿದ ಅವರು ನಿಮಗೆಂದಿಗೂ ತಿಳಿಯುವುದಿಲ್ಲ ಎಂದು ಹೇಳುತ್ತಾ ಧ್ರುವ್ ನಕ್ಕರು. "ನನಗೆ ವೀಡಿಯೊಗಳನ್ನು ಎಡಿಟ್ ಮಾಡುವುದು ಮತ್ತು ಶೂಟ್ ಮಾಡುವುದು ಎಂದರೆ ತುಂಬಾ ಇಷ್ಟ. ನನ್ನ ತಂದೆ, ಅಕ್ಕನ ಮಗಳು ಮತ್ತು ಸಾಕುಪ್ರಾಣಿಗಳನ್ನು ವೀಡಿಯೊ ಶೂಟ್ ಮಾಡುತ್ತಿರುತ್ತೇನೆ. ಪೋಸ್ಟ್ ಮಾಡದಿದ್ದರೂ iMovie ಬಳಸಿ ಸಂಗೀತಕ್ಕೆ ತಕ್ಕಂತೆ ಕಟ್ ಮಾಡಿ ಸಾಕಷ್ಟು ಎಡಿಟ್‌ಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಸೋಶಿಯಲ್ ಮೀಡಿಯಾದಿಂದ ದೂರ
ನಾನು ಅಷ್ಟಾಗಿ ಸೋಶಿಯಲ್ ಮೀಡಿಯಾ ಬಳಕೆ ಮಾಡೋದಿಲ್ಲ. ಸಿನಿಮಾಗಳ ಪ್ರಚಾರದ ಸಮಯದಲ್ಲಿ ಮಾತ್ರ ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತೇನೆ, ಉಳಿದ ಸಮಯದಲ್ಲಿ ಪುಸ್ತಕ ಓದುವುದು ಅಥವಾ ಸಂಗೀತ ಆಲಿಸುವುದರಲ್ಲಿ ಮಗ್ನನಾಗುತ್ತೇನೆ. ಇದು ಯಾವುದೇ ಯೋಜಿತ ನಿರ್ಧಾರವಲ್ಲ ಎಂದು ಅವರು ಹೇಳಿದರು.
ಅನುಪಮಾ ಹೇಳಿದ್ದೇನು?
ಸಾಮಾಜಿಕ ಜಾಲತಾಣದಿಂದ ವೈರಲ್ ಆಗಿತ್ತು.
'ಯಾರದ್ದೋ ಅನುಮತಿ, ಹಾಡಿನ ಆಯ್ಕೆ ಅಥವಾ ಕ್ಯಾಪ್ಷನ್‌ಗಾಗಿ ಕಾಯುವ ಅಗತ್ಯವಿಲ್ಲದಿದ್ದಾಗ ಪೋಸ್ಟ್ ಮಾಡುವುದು ತುಂಬಾ ಖುಷಿಕೊಡುತ್ತದೆ' ಎಂದು ಬರೆದುಕೊಂಡಿದ್ದರು. ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮಾಜಿ ಪ್ರೇಮಿಯನ್ನು ‘ನಾರ್ಸಿಸಿಸ್ಟ್’ ಹಾಗೂ ವಿಕ್ರಮ್ ಅಭಿನಯದ ‘ಅನ್ನಿಯನ್’ ಚಿತ್ರದ ಪಾತ್ರಕ್ಕೆ ಹೋಲಿಸಿದ್ದರು.
ಅಲ್ಲದೆ, ತಮ್ಮ ಸೂಪರ್ ಹಿಟ್ ಚಿತ್ರ ‘ಡ್ರಾಗನ್’ ಪ್ರಚಾರ ಮಾಡಲು ಸಹ ತಮಗೆ ಅನುಮತಿ ಇರಲಿಲ್ಲ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ, ನಿಖಿಲ್ ವಿಜಯೇಂದ್ರ ಸಿಂಹ ಅವರ ಪೋಡ್‌ಕಾಸ್ಟ್‌ನಲ್ಲಿ ಅನುಪಮಾ ಅವರು, ಧ್ರುವ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ನಿಯಂತ್ರಿಸುತ್ತಾರೆ ಎಂದು ಹೇಳಿದ್ದ ಹಳೆಯ ವೀಡಿಯೊವನ್ನು ನೆಟ್ಟಿಗರು ಹಂಚಿಕೊಳ್ಳಲಾರಂಭಿಸಿದರು. ಆದರೆ, ನಂತರ ಅನುಪಮಾ ಅದು ಕೇವಲ ಪ್ರಚಾರದ ಫೋಟೋಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು, (ಏಜೆನ್ಸೀಸ್).