Anupama Parameswaran breakup
- ಧ್ರುವ ವಿಕ್ರಮ್ ಜೊತೆಗಿನ ಬ್ರೇಕಪ್ ವದಂತಿಗಳ ಬೆನ್ನಲ್ಲೇ ಟಾಕ್ಸಿಕ್ ಸಂಬಂಧದ ಬಗ್ಗೆ ಅನುಪಮಾ ಮಾತು
- ಎರಡು ವರ್ಷಗಳ ಕಾಲ ದೈಹಿಕ ಹಾಗೂ ಭಾವನಾತ್ಮಕ ಹಿಂಸೆ ಅನುಭವಿಸಿರುವುದಾಗಿ ನಟಿಯ ಹೇಳಿಕೆ.
- ಕೇವಲ ಮೂರು ತಿಂಗಳಲ್ಲಿ ನಿಶ್ಚಿತಾರ್ಥದ ಮಾತುಕತೆ ಆರಂಭವಾಗಿತ್ತು ಎಂದು ಬಹಿರಂಗ.
Anupama Parameswaran breakup: ತಮ್ಮದೇ ನಟನಾ ಶೈಲಿಯಿಂದ ಮಿಂಚಿರುವ ಅನುಪಮಾ ಪರಮೇಶ್ವರನ್ ಹಾಗೂ ನಟ ಧ್ರುವ್ ವಿಕ್ರಂ ಬೈಸನ್ ಸಿನಿಮಾದ ಮೂಲಕ ಪರಿಚಯವಾಗಿ, ಪ್ರೀತಿಯಲ್ಲಿ ಬಿದ್ದಿದ್ದಾರೆ. ಒಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ಸ್ ಇತ್ತು. ಆದರೆ, ಇತ್ತೀಚೆಗೆ ಅನುಪಮಾ ಪರಮೇಶ್ವರನ್ ಹಂಚಿಕೊಂಡಿದ್ದ ಪೋಸ್ಟ್ವೊಂದು ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿತ್ತು. ಆ ಬೆನ್ನಲ್ಲೇ ಅವರು ಪಾಡ್ಕಾಸ್ಟ್ವೊಂದರಲ್ಲಿ ಟಾಕ್ಸಿಕ್ ಸಂಬಂಧಗಳ ಬಗ್ಗೆ ಮಾತನಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅನುಪಮಾ ಪರಮೇಶ್ವರನ್, ತಾವು ಈ ಅನುಭವದ ಬಗ್ಗೆ ಹಿಂದೆಂದೂ ಸಾರ್ವಜನಿಕವಾಗಿ ಮಾತನಾಡಲಿಲ್ಲ ಎಂದು ಹೇಳುತ್ತಾ, ಆ ಸಂಬಂಧವು ಎರಡು ವರ್ಷಗಳ ದೈಹಿಕ ಮತ್ತು ಭಾವನಾತ್ಮಕ ಯಾತನೆಯಿಂದ ಕೂಡಿತ್ತು ಎಂದು ತಿಳಿಸಿದ್ದಾರೆ.
ಅನುಪಮಾ ಹೇಳಿದ್ದಿಷ್ಟು
ಇತ್ತೀಚೆಗೆ ಅವರು ಹಂಚಿಕೊಂಡಿದ್ದ ಇನ್ಸ್ಟಾಗ್ರಾಮ್ ಪೋಸ್ಟ್ ಬಗ್ಗೆ ಮಾತನಾಡಿದ ಅವರು, ತಮ್ಮ ಮಾಜಿ ಸಂಗಾತಿ ನಡವಳಿಕೆ ಅನ್ನಿಯನ್ ಸಿನಿಮಾದ ಕ್ಯಾರೆಕ್ಟರ್ನಂತಿತ್ತು.
ಇದು ತುಂಬಾ ತಮಾಷೆಯ ವಿವರಣೆ ಆದರೆ, ಜನರಿಗೆ ನಾರ್ಸಿಸಿಸ್ಟಿಕ್ ದೌರ್ಜನ್ಯದ(
ಒಂದು ದಿನ ಆತ ರೆಮೋ ಕ್ಯಾರೆಕ್ಟರ್ನಂತೆ ಇರುತ್ತಿದ್ದ.
ಆಗ ಜೀವನದಲ್ಲಿ ಅಂತಹ ಒಳ್ಳೆಯ ವ್ಯಕ್ತಿ ಸಿಕ್ಕಿದ್ದಕ್ಕೆ ಅದೃಷ್ಟಶಾಲಿ ಎಂದು ಭಾವಿಸುತ್ತೀರಿ. ಆದರೆ ಮರುದಿನವೇ ಅವರು 'ಅನ್ನಿಯನ್' ಆಗಿ ಬದಲಾಗಿ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಮತ್ತೆ ಮಾರನೇ ದಿನ ಬಂದು ಮಗುವಿನಂತೆ ಅಳುತ್ತಾ ಕ್ಷಮೆಯಾಚಿಸುತ್ತಾರೆ. ಎಂದಿಗೂ ಈ ತಪ್ಪು ಮಾಡೋದಿಲ್ಲ ಎಂದು
ಪ್ರಮಾಣ ಮಾಡುತ್ತಾರೆ. ಆದರೆ ಪದೇ ಪದೇ ಅದೆ ರಿಪಿಟೇಶನ್ ಲವ್ ಬಾಂಬಿಂಗ್
(ಅತಿಯಾದ ಪ್ರೀತಿ ತೋರಿಸಿ ಬಳಿಕ ಹಿಂಸಿಸುವ) ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಇಂತಹ ನಡವಳಿಕೆಯನ್ನು ಮಾದಕ ವ್ಯಸನಕ್ಕೆ ಹೋಲಿಸಿರುವ ನಟಿ, ಪ್ರೀತಿಯಿಂದ ಶುರುವಾಗುವ ಈ ಸಂಬಂಧ ಮುಂದಿನದಿನದಲ್ಲಿ ಆಸಕ್ತಿ ಮತ್ತು ವ್ಯಸನವಾಗಿ ಮಾರ್ಪಡುತ್ತದೆ. ಕೊನೆಗೆ ಯಾರು ನಮಗೆ ತೀವ್ರವಾಗಿ ನೋಯಿಸುತ್ತಾರೆ. ಅವರೇ ನಮ್ಮನ್ನು ಸಮಾಧಾನಗೊಳಿಸುವಂತೆ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಕೆಲಸ ಸೇರಿ ಎಲ್ಲವನ್ನು ನಿಯಂತ್ರಿಸುತ್ತಿದ್ದ
ಈ ಟಾಕ್ಸಿಕ್ ಸಂಬಂಧದಿಂದಾಗಿ ವೃತ್ತಿ ಜೀವನದ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ. ಡ್ರಾಗನ್ ಸಿನಿಮಾ ನನ್ನ ವೃತ್ತಿ ಜೀವನದ ಅತಿದೊಡ್ಡ ಯಶಸ್ಸು. ಅದರ ಪ್ರಚಾರಗಳಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವನು ನನ್ನನ್ನು ನಿಯಂತ್ರಿಸಲು ಶುರು ಮಾಡಿದ. ನನ್ನ ಕೆಲಸ ಮಾತ್ರವಲ್ಲ ನನ್ನ ಜೀವನದ ಪ್ರತಿ ಅಂಶವನ್ನು ಎಂದು ಹೇಳಿಕೊಂಡಿದ್ದಾರೆ.
ನಿಶ್ಚಿತಾರ್ಥದ ಮಾತುಕತೆ ಬಗ್ಗೆ ಹೇಳಿದ್ದಿಷ್ಟು
ಮದುವೆಯ ಚರ್ಚೆಗಳು ಎಷ್ಟು ಬೇಗನೆ ಪ್ರಾರಂಭವಾದವು. ಕೆಲವೇ ದಿನಗಳ ನಂತರ ನನ್ನನ್ನು ಕುಟುಂಬಕ್ಕೆ ಪರಿಚಯಿಸಿಲಾಯಿತು. ನಾನು ಅವರೊಂದಿಗೆ ಊಟ ಮಾಡಿದೆ. ಮೂರು ತಿಂಗಳೊಳಗೆ, ಅವರು ನಿಶ್ಚಿತಾರ್ಥದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನಾನು 'ಗೋಲ್ಡ್ ಡಿಗ್ಗರ್' ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದ್ದು, ನಿಶ್ಚಿತಾರ್ಥವನ್ನು ಮುಂದುವರಿಸದಿರಲು ನಿರ್ಧರಿಸಿದ್ದು ತಾನೇ ಎಂದು ಸ್ಪಷ್ಟಪಡಿಸಿದರು.
ನಟ ಧ್ರುವ ವಿಕ್ರಮ್ ಅವರೊಂದಿಗೆ ತಮಗೆ ಸಂಬಂಧವಿದೆ ಎಂಬ ಬಹಳ ಹಿಂದಿನ ಊಹಾಪೋಹಗಳ ನಡುವೆಯೇ ಅನುಪಮಾ ಪರಮೇಶ್ವರನ್ ಅವರ ಈ ಹೇಳಿಕೆಗಳು ಬಂದಿವೆ. ಮಾರಿ ಸೆಲ್ವರಾಜ್ ಅವರ 'ಬೈಸನ್ ಕಾಲಾಮಡನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ, 2025 ರ ಆರಂಭದಲ್ಲಿ ಇವರಿಬ್ಬರ ಡೇಟಿಂಗ್ ವಾದ್ದಂತಿಗಳು ಹಬ್ಬಲು ಪ್ರಾರಂಭಿಸಿದ್ದವು,