ಸಿನಿವಾಣಿ

ಚೇಸರ್ ಫಸ್ಟ್ ಲುಕ್; ನಾಯಕ ಸುಮಂತ್ ಹುಟ್ಟುಹಬ್ಬಕ್ಕೆ ಚಿತ್ರತಂಡದ ಗ್‌ಟಿ

ಬೆಂಗಳೂರು: ‘ಬುದ್ಧಿವಂತ 2’ ನಿರ್ದೇಶಕ ಎಂ. ಜೈರಾಮ್ ಆ್ಯಕ್ಷನ್-ಕಟ್ ಹೇಳಿರುವ ಹೊಸ ಸಿನಿಮಾ ‘ಚೇಸರ್’. ಇದೊಂದು ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ಜೈರಾಮ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.

ಗುರುವಾರ (ಸೆ. 7) 35ನೇ ವಸಂತಕ್ಕೆ ಕಾಲಿಟ್ಟಿರುವ ನಾಯಕ ಸುಮಂತ್‌ಗೆ ಉಡುಗೊರೆಯಾಗಿ ಚಿತ್ರದ ಮೊದಲ ನೋಟವನ್ನು ಅನಾವರಣ ಮಾಡಿದೆ. ಸೂಪರ್‌ಬೈಕ್ ಮೇಲೆ ಸ್ಟೈಲಿಶ್‌ಆಗಿ ಕುಳಿತಿರುವ ಲುಕ್‌ನಲ್ಲಿ ಸುಮಂತ್ ಮಿಂಚಿದ್ದಾರೆ. ಸದ್ಯ ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನಷ್ಟೇ ಶುರುವಾಗಲಿವೆ.

ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷಾ ಮೆನನ್ ನಟಿಸುತ್ತಿದ್ದಾರೆ. ಜತೆಗೆ ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡ್ಡಿಪುಡಿ ಚಂದ್ರು, ಸಂಗೀತ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.