ಜುಬೀನ್ ಗರ್ಗ್ (Instgram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)
- ಗಾಯಕ ಜುಬೀನ್ ಗಾರ್ಗ್ ಅವರ 53ನೇ ಜನ್ಮದಿನ
- ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪತ್ನಿ ಶುಭಾಶಯ ತಿಳಿಸಿದ್ದಾರೆ
- ಈ ಜನ್ಮದಿಂದ ಮುಂದಿನ ಜನ್ಮದವರೆಗೆ, ನಾನು ನಿಮ್ಮೊಂದಿಗೆ ಇರುತ್ತೇನೆ
- ಗೋಲ್ಡಿ ಹುಟ್ಟು ಹಬ್ಬದ ಶುಭಾಶಯಗಳು! ಯಾವಾಗಲು ಸುರಕ್ಷಿತವಾಗಿರಿ
Zubeen Garg : ಇತ್ತೀಚೆಗೆ ನಿಧನರಾದ ಗಾಯಕ ಜುಬೀನ್ ಗರ್ಗ್ ರ ಹುಟ್ಟುಹಬ್ಬದ ಹಿನ್ನಲೆಯಲ್ಲಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪತ್ನಿ ಗರಿಮಾ ಸೈಕಿಯಾ ಗರ್ಗ್ ದಿವಂಗತ ಪತಿಯ 53 ನೇ ಜನ್ಮದಿನವನ್ನು ಆಚರಿಸಿದ್ದಾರೆ.
ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲೆಂದು ಗಾಯಕ ಜುಬೀನ್ ಗಾರ್ಗ್ ತೆರಳಿದ್ದರು. ಈ ವೇಳೆ ಸ್ವಿಮ್ಮಿಂಗ್ ಮಾಡುತ್ತಿರುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು. ಈ ಕಾರಣದಿಂದ ನಡೆಯಬೇಕಿದ್ದ ಕಾಯಕ್ರಮವನ್ನು ರದ್ದುಗೊಳಿಸಿದರು.
ಪೋಸ್ಟ್ನಲ್ಲೇನಿದೆ?
ಈ ಜನ್ಮದಿಂದ ಮುಂದಿನ ಜನ್ಮದವರೆಗೆ, ನಾನು ನಿಮ್ಮೊಂದಿಗೆ ನನ್ನ ಕಥೆಗಳನ್ನು ಬರೆಯುತ್ತಿರುತ್ತೇನೆ. ಗೋಲ್ಡಿ ಹುಟ್ಟು ಹಬ್ಬದ ಶುಭಾಶಯಗಳು! ಯಾವಾಗಲು ಸುರಕ್ಷಿತವಾಗಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಟಿಪ್ಪಣಿಯನ್ನು ಹಂಚಿಕೊಳ್ಳುತ್ತಾ, ಸೆಪ್ಟೆಂಬರ್ 15 ರಂದು ನೀವು ಬರೆದ ಪ್ರೀತಿಯ ಪತ್ರಗಳು ನಿಮ್ಮ ಜನರ ಹೃದಯವನ್ನು ಮುಟ್ಟಿದೆ ಗೋಲ್ಡಿ! ಇದರ ನಡುವೆ ಇನ್ನೊಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ ಸೆಪ್ಟೆಂಬರ್ 19 ರಂದು ಏನಾಯಿತು? ಹೇಗೆ ಆಯಿತು ಎಂದು ಇನ್ನು ತಿಳಿಯುತ್ತಿಲ್ಲ. ಇದಕ್ಕೆ ಉತ್ತರ ಸಿಗುವವರೆಗೂ ನನಗೆ ಉಸಿರಾಡಲು ಮನಸ್ಸಿಲ್ಲ ಎಂದು ಗರಿಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಸ್ಸಾಂನ ಭೂಮಿ, ಆಕಾಶ, ಗಾಳಿ ಹಾಗೂ ಎಲ್ಲರ ಹೃದಯದಲ್ಲೂ ನೀವಿದ್ದೀರಿ. ಓ ದೇವರ ಮಗನೇ ಅಸ್ಸಾಂ ಅನ್ನು ಪ್ರೀತಿಯಿಂದ ಆವರಿಸಿ ಒಂದು ದಿನ ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ. ನನ್ನ ಜೀವನದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಮತ್ತು ನನ್ನ ಜೀವನದ ಹೊಸ ಕಥೆಯನ್ನು ಬರೆಯುತ್ತೇನೆ. ಆದರೆ, ಈಗ ಆ ದಿನ ಏನಾಯಿತು ಎಂಬುದನ್ನು ನಾನು ತಿಳಿದುಕೊಳ್ಳಬೇಕು ಎಂದರು.
ಗರಿಮಾ ಸೈಕಿಯಾ ಗಾರ್ಗ್ ಹಂಚಿಕೊಂಡಿರುವ ಫೋಟೋದಲ್ಲಿ ಜುಬೀನ್ ಗಾರ್ಗ್ ಅವರ ಹಿಂದಿನ ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಅವರ ಮದುವೆಯ ದಿನದ ಚಿತ್ರವೂ ಸಹ ಇದರಲ್ಲಿ ಕಾಣಬಹುದು. ಅವರ ಆರಂಭಿಕ ಡೇಟಿಂಗ್ನಿಂದ ಪ್ರಾರಂಭವಾಗಿ ಜೀವನದ ಪ್ರಯಾಣದ ಪರಸ್ಪರ ನಡೆಯುವವರೆಗೂ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇಂದು (ಮಂಗಳವಾರ) ಮುಂಜಾನೆ, ಹಲವಾರು ಅಭಿಮಾನಿಗಳು ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮಿಸಿ, ಅವರ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದಾದ ಮಾಯಾಬಿನಿಯನ್ನು ಹಾಡುವ ಮೂಲಕ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ, ಗರಿಮಾ ಸೈಕಿಯಾ ಗರ್ಗ್ ಅವರು ಜುಬೀನ್ ಗಾರ್ಗ್ ಅವರ ನಿಗೂಢ ಸಾವಿಗೆ ಕಾರಣ ಏನು ಎಂಬುದರ ಕುರಿತು ತನಿಖೆ ಆಗಬೇಕೆಂದು ಒತ್ತಾಯಿಸಿದ್ದರು. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸರ್ಕಾರವು ಡಿಸೆಂಬರ್ 8 ರೊಳಗೆ ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ಗುರಿಯನ್ನು ಹೊಂದಿದೆ. ಗಾಯಕನ ಸಾವು ಅಪಘಾತವಲ್ಲ. ಬದಲಿಗೆ ಕೊಲೆ ಎಂದು ಹೇಳಿದ್ದರು.
ಜುಬೀನ್ ಗರ್ಗ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈವರೆಗೂ 7 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಗಾಯಕನ ಸೋದರಸಂಬಂಧಿ ಸಂದೀಪನ್ ಗರ್ಗ್ ಹಾಗೂ ಬ್ಯಾಂಡ್ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಅವರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ (ಏಜೆನ್ಸೀಸ್).