ಬೆಂಗಳೂರು: ಜೀ ಕನ್ನಡ ಆರಂಭದಿಂದಲೂ ತನ್ನ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ನೃತ್ಯ, ‘ಸರಿಗಮಪ’ದಲ್ಲಿ ಸಂಗೀತ ಮತ್ತು ‘ಕಾಮಿಡಿ ಕಿಲಾಡಿಗಳು’ ಮೂಲಕ ಹಾಸ್ಯದ ರಸದೌತಣವನ್ನು ಬಡಿಸುತ್ತಾ ಬಂದಿದೆ.
ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.ಈ ‘ಮಹಾಸಂಭ್ರಮ’ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ‘ಸರಿಗಮಪ’ ಕಾರ್ಯಕ್ರಮಗಳನ್ನು ನಡೆಸಿಕೊಡುವವರು ಅನುಶ್ರೀ. ಹಾಗೆಯೇ, ‘ಕಾಮಿಡಿ ಕಿಲಾಡಿಗಳು’ ಕಾರ್ಯ ಕ್ರಮವು ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಬರುತ್ತದೆ.
ಈಗ ಇಬ್ಬರೂ ಜತೆಯಾಗಿ ‘ಮಹಾಸಂಭ್ರಮ’ವನ್ನು ನಡೆಸಿಕೊಡಲಿದ್ದು, ಈ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಮತ್ತು ಹಾಸ್ಯ ಒಟ್ಟಿಗೆ ಮೇಳೈಸಲಿದೆ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಅಭೂತಪೂರ್ವ ಮನರಂಜನೆ ಸಿಗಲಿದ್ದು, ಈ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಜೀ ಕನ್ನಡ ಹಾಗೂ ಜೀ ಕನ್ನಡ ಎಚ್ಡಿಯಲ್ಲಿ ಈ ಕಾರ್ಯಕ್ರಮ ನೋಡುವುದನ್ನು ಮರೆಯದಿರಿ.