ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾಕ್ಕೂ ಕೊರೊನಾ ಎಫೆಕ್ಟ್ ತಗುಲಿದೆ. ಚಿತ್ರೀಕರಣಕ್ಕೆಂದು ಯುರೋಪ್ಗೆ ಹೋಗಬೇಕಿದ್ದ ಚಿತ್ರತಂಡ ಪ್ರಯಾಣವನ್ನು ಕ್ಯಾನ್ಸಲ್ ಮಾಡಿಕೊಂಡಿದೆ.
ಈಗಾಗಲೇ ಕೊರೊನಾದಿಂದ ಜಾಗತಿಕ ಮಾರುಕಟ್ಟೆಯವೆಗೂ ಕುಸಿತಕಂಡಿದೆ. ವ್ಯಾಪಾರ, ವಹಿವಾಟುಗಳ ಮೇಲೆಯೂ ಋಣಾತ್ಮಕ ಪ್ರಭಾವ ಬೀರಿದೆ. ಇದೀಗ ಸ್ಯಾಂಡಲ್ವುಡ್ಗೂ ಕೊರೊನಾ ಭಯ ಕಾಡುತ್ತಿದೆ.
ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಯುರೋಪ್ನ ಸ್ಲೋವೇನಿಯಾಗೆ ಹೋಗಲು ಪ್ಲ್ಯಾನ್ ಹಾಕಿಕೊಳ್ಳಲಾಗಿತ್ತು. ಮಾರ್ಚ್ 7 ರವರೆಗೆ ಅಲ್ಲಿ ಶೂಟಿಂಗ್ ನಡೆಯುವುದಿತ್ತು. ಈಗಾಗಲೇ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಆಗಿತ್ತು. ಆದರೆ ಈಗ 15-20 ಲಕ್ಷ ರೂಪಾಯಿ ನಷ್ಟವಾದರೂ ಪರವಾಗಿಲ್ಲ, ಹೋಗುವುದು ಬೇಡವೆಂದು ಚಿತ್ರತಂಡ ನಿರ್ಧರಿಸಿದೆ.
ಯುವರತ್ನ ಸಿನಿಮಾವನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)