ಸಿನಿವಾಣಿ

ಸೊಂಟ, ಬೆನ್ನು ನೋವನ್ನು ನಿಯಂತ್ರಿಸಬಲ್ಲ ಯೋಗಾಸನ, ಮುದ್ರೆ

  • ನನಗೆ ಬೆನ್ನುನೋವು, ಸೊಂಟನೋವಿದೆ. ನಾನು ಯಾವೆಲ್ಲಾ ಆಸನ, ಪ್ರಾಣಾಯಾಮ, ಮುದ್ರೆಗಳನ್ನು ಮಾಡಬಹುದು ಹಾಗೂ ಈ ಬಗ್ಗೆ ಏನೆಲ್ಲಾ ಸೂಚನೆಗಳನ್ನು ಪಾಲಿಸಬಹುದು?

| ಗೌರೀಶ್ 48 ವರ್ಷ. ಗುಲ್ಬರ್ಗ

ಸೊಂಟನೋವನ್ನು ನಿಯಂತ್ರಿಸಲು ಯೋಗವು ಸಹಾಯ ಮಾಡುತ್ತದೆ. ಆಯ್ದ ಯೋಗಾಸನಗಳು ಬೆನ್ನಿನ ಹಾಗೂ ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತವೆ. ಆರೋಗ್ಯವಾಗಿರಲು ನಿಯಮಿತ ವಾಗಿ ಯೋಗಾಸನಗಳನ್ನು ಅಭ್ಯಾಸಮಾಡಿ. ಜತೆಗೆ ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಿ. ನೇರವಾಗಿ ಬೆನ್ನಿನೊಂದಿಗೆ ಕುಳಿತುಕೊಳ್ಳಿ, ದೇಹದ ಭಂಗಿಯನ್ನು ಸುಧಾರಿಸುವ ಪ್ರಯತ್ನ ಮಾಡಿ. ಅಸಮತೋಲನ ಭಂಗಿ ಸೊಂಟನೋವಿಗೆ ಕಾರಣವಾಗುತ್ತದೆ. ಜಡಜೀವನಶೈಲಿ ಮತ್ತು ವ್ಯಾಯಾ ಮದ ಕೊರತೆಯು ಬೆನ್ನು, ಸೊಂಟ ನೋವಿಗೆ ಕಾರಣವಾಗುತ್ತದೆ. ಆಸನಗಳ ಅಭ್ಯಾಸದಿಂದ ನರಗಳು ಮತ್ತು ಬೆನ್ನು ಮೂಳೆಯ ರಕ್ತ ಪರಿಚಲನೆ ಸುಧಾರಿಸುತ್ತದೆ.

ಸೂಚಿತ ಆಸನಗಳು: ಮಾರ್ಜಾಲಾಸನದಲ್ಲಿ ಕ್ಯಾಟ್ ಮತ್ತು ಕ್ಯಾಮಲ್ ಭಂಗಿ, ಉತ್ಥಿಥ ಏಕಪಾದಾಸನ, ಮಲಗಿಕೊಂಡು ತಿರುಚುವಿಕೆಯ ವ್ಯಾಯಾಮ, ಸೇತುಬಂದ ಸರ್ವಾಂಗಾಸನ, ಮಕರಾಸನ, ಶಲಭಾಸನ, ಭುಜಂಗಾಸನ, ಶವಾಸನ.

ಪ್ರಾಣಾಯಾಮಗಳು: ಸುಖಪ್ರಾಣಾಯಮ, ನಾಡೀಶುದ್ಧಿ, ಬ್ರಾಮರೀ.

ಮುದ್ರೆಗಳು: ಪ್ರಾಣಮುದ್ರೆ, ಆರಂಭದಲ್ಲಿ ಹಾಗೂ ಕೊನೆಯಲ್ಲಿ ಹತ್ತು ನಿಮಿಷ, ಮೇರುದಂಡ ಮುದ್ರೆ ಆರು ನಿಮಿಷದ ಹಾಗೇ ಮೂರು ಬಾರಿ, ವಾಯುಶೂನ್ಯ ಹತ್ತು ನಿಮಿಷ, ಭುವನೇಶ್ವರಿ ಮುದ್ರೆ ಹತ್ತು ನಿಮಿಷ ಮಾಡಿ. ಮುದ್ರೆಗಳನ್ನು ಯಾವ ಹೊತ್ತಿಗೂ ಮಾಡಬಹುದು. ಯೋಗಾಭ್ಯಾಸವನ್ನು ಮುಂಜಾನೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಗುರುವಿನ ಮಾರ್ಗದರ್ಶನದಲ್ಲಿ ಯೋಗ ಕಲಿತು ಅಭ್ಯಾಸ ಮಾಡಿ.

  • ಮೇರುದಂಡ ಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ.

| ಸುನಿತಾ 32 ವರ್ಷ, ಮೈಸೂರು

ಸಂಸ್ಕೃದಲ್ಲಿ ಮೇರುದಂಡ ಎಂದರೆ ಬೆನ್ನುಹುರಿ ಮತ್ತು ಮುದ್ರೆ ಎಂದರೆ ಸನ್ನೆ. ಬೇರೆ ಬೇರೆ ವಿಧಾನದಲ್ಲಿ ಅಭ್ಯಾಸ ನಡೆಸಬಹುದಾಗಿದೆ. ಮೇರು ದಂಡ ಎಂದರೆ ಸಂಸ್ಕೃತದಲ್ಲಿ ಬೆನ್ನು ಹುರಿ ಎಂದರ್ಥ. (ಠಟಜ್ಞಿಚ್ಝ ್ಚ್ಟ) ಈ ಮುದ್ರೆಯನ್ನು ಬಲಗೈಯಲ್ಲಿ ಒಂದು ರೀತಿಯಲ್ಲಿ, ಎಡಗೈಯಲ್ಲಿ ಇನ್ನೊಂದು ರೀತಿಯಲ್ಲಿ ಅಭ್ಯಾಸ ಮಾಡಬೇಕು. ವಿಶೇಷವಾಗಿ ಬೆನ್ನಿನ ಆಯಾಸ ಬಳಲಿಕೆಯ ನಿಯಂತ್ರಣಕ್ಕೆ ಇರುವ ಮುದ್ರೆ ಇದು. ಈ ಮುದ್ರೆಯಲ್ಲಿ ಮಧ್ಯದ ಬೆರಳು (ಆಕಾಶತತ್ತ್ವ), ಕಿರುಬೆರಳು (ವರುಣತತ್ತ್ವ) ಮತ್ತು ಹೆಬ್ಬೆರಳು (ಅಗ್ನಿತತ್ತ್ವ) ಜೊತೆಗೂಡುತ್ತದೆ. ಹೀಗೆ ಜೊತೆಗೂಡುವ ಪರಿಣಾಮವಾಗಿ ಬೆನ್ನುಮೂಳೆಯ ಸಂಧಿಯಲ್ಲಿ ಇರುವ ಒತ್ತಡ ಹಾಗೂ ವಾಯುದೋಷ ನಿವಾರಣೆಯಾಗುತ್ತದೆ.

ಮುದ್ರೆ ಮಾಡುವ ವಿಧಾನ: ಬಲಗೈಯ ಮಧ್ಯದ ಬೆರಳು ಮತ್ತು ಕಿರುಬೆರಳುಗಳ ಅಗ್ರಭಾಗವನ್ನು ಹೆಬ್ಬೆರಳಿನ ತುದಿಗೆ ಮೃದುವಾಗಿ ರ್ಸ³ಸಿ. ಉಳಿದ ಬೆರಳು ಮತ್ತು ತೋರು ಬೆರಳುಗಳು ನೇರವಾಗಿರಲಿ. ಎಡಗೈಯ ಹೆಬ್ಬೆರಳು, ತೋರು ಬೆರಳಿನ ಉಗುರಿನ ಮೇಲೆ ರ್ಸ³ಸಿ. ಬೆರಳ ಎಡಗೈಯ ಉಳಿದ ಬೆರಳುಗಳು ನೇರವಾಗಿರಲಿ. ಸುಮಾರು ಐದರಿಂದ 10 ನಿಮಿಷಗಳಂತೆ ದಿನಕ್ಕೆ ಮೂರು ಬಾರಿ ಅಭ್ಯಾಸ ಮಾಡಿ.

ಪ್ರಯೋಜನಗಳು: ಬೆನ್ನು ಮೂಳೆಯ ಮೇಲೆ ಮಸಾಜ್ ಮಾಡುವುದರಿಂದ ತುಂಬಾ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ದೇಹದಾದ್ಯಂತ ಪ್ರಾಣ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ. ಬೆನ್ನುಮೂಳೆಯ ಮೇಲೆ ಮಾಡುವ ಹಿತವಾದ ಪರಿಣಾಮಗಳಿಂದಾಗಿ ಇದನ್ನು ಸ್ಪೈನ್ ಮುದ್ರಾ ಎಂದೂ ಕರೆಯಲಾಗುತ್ತದೆ.