ಸಿನಿವಾಣಿ

ಗುಡ್​ ಬಾಬು ವರ್ಸಸ್​ ಬ್ಯಾಡ್​ ಬಾಬು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಲಿಪ್​ಸ್ಟಿಕ್​ ಮರ್ಡರ್​', "ಡೆಡ್ಲಿ ಅೇರ್​' ಸೇರಿ ಹಲವು ಚಿತ್ರಗಳಿಗೆ ಆ್ಯಕ್ಷನ್​&ಕಟ್​ ಹೇಳಿರುವ ರಾಜೇಶ್​ ಮೂರ್ತಿ ನಿರ್ದೇಶನದ ಸೈೈ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ "ಬ್ಲಡಿ ಬಾಬು'. ಈ ಚಿತ್ರದ ಮೂಲಕ ಅವರ ಪುತ್ರ ಯಶಸ್ವ ನಾಯಕನಾಗಿ ಡೆಬ್ಯೂ ಮಾಡಿದ್ದಾರೆ. ಕಣ್ಣಿನಿಂದಲೇ ವಶೀಕರಣ ಮಾಡಿಕೊಳ್ಳುವ ಶಕ್ತಿ ಇರುವ ಬಾಬು (ದಿಲೀಪ್​ ಕುಮಾರ್​) ಬಾಲ್ಯದಿಂದಲೇ ಅಡ್ಡದಾರಿ ಹಿಡಿಯುತ್ತಾನೆ. ತನ್ನ ವಶೀಕರಣ ಶಕ್ತಿಯ ಮೂಲಕ ಕಳ್ಳತನ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿರುತ್ತಾನೆ. ಹೈಪ್ರೊೈಲ್​ ಹೋಟೆಲ್​, ರೆಸಾರ್ಟ್​ಗಳೇ ಆತನ ಟಾರ್ಗೆಟ್​. ಹಾಗೆ ಸರಣಿ ಕಳ್ಳತನಕ್ಕೀಡಾದ ರೆಸಾರ್ಟ್​ಗೆ ಬಾಬು (ಯಶಸ್ವ) ಕೆಲಸಕ್ಕೆ ಸೇರುತ್ತಾನೆ. ಆತನ ಮಾರ್ಷಲ್​ ಆರ್ಟ್ಸ್​ ಪರಿಣಿತಿ ನೋಡಿಯೇ ಮಾಲೀಕ (ನೆ.ಲ. ನರೇಂದ್ರಬಾಬು) ಬಾಬುಗೆ ಕೆಲಸ ಕೊಡುತ್ತಾನೆ. ಹೀಗೆ ವಶೀಕರಣದ ಮೂಲಕ ಕಳ್ಳದಾರಿ ಹಿಡಿದ ಕೆಟ್ಟ ಬಾಬು ಮತ್ತು ಶಕ್ತಿ&ಯುಕ್ತಿಯ ಮೂಲಕ ದುಷ್ಟರನ್ನು ಮಟ್ಟ ಹಾಕುವ ಬಾಬು (ಯಶಸ್ವ) ಮುಖಾಮುಖಿಯಾಗುತ್ತಾರೆ. ಹಾಗಾದರೆ ಈ ಗುಡ್​ ಬಾಬು, ಆ ಬ್ಯಾಡ್​ ಬಾಬುನ ಹೇಗೆ ಮಟ್ಟ ಹಾಕುತ್ತಾನೆ? ತಿಳಿಯಲು "ಬ್ಲಡಿ ಬಾಬು' ನೋಡಿ.

ಶ್ರೀಮಂತ ಕಾನ್ಸೆಪ್ಟ್​ ಇರುವ ಬಡ ಸಿನಿಮಾ "ಬ್ಲಡಿ ಬಾಬು'. ಏಕೆಂದರೆ ಚಿತ್ರದ ಜಾನರ್​, ಪರಿಕಲ್ಪನೆ, ಚಿತ್ರಕಥೆಯ ಗಟ್ಟಿತನ, ಆ್ಯಕ್ಷನ್​ ಸನ್ನಿವೇಶಗಳು ಎಲ್ಲವೂ ರಿಚ್​ ಆಗಿವೆ. ಆದರೆ, ಕಡಿಮೆ ಬಜೆಟ್​ ಚಿತ್ರವಾದ ಕಾರಣ ಮೇಕಿಂಗ್​ನಲ್ಲಿ ಆ ಶ್ರೀಮಂತಿಕೆ ಕಾಣುವುದಿಲ್ಲ. ಆದರೂ, ಅಲ್ಲಲ್ಲಿ ಟ್ವಿಸ್ಟ್​ಗಳು ಮತ್ತು ಭರ್ಜರಿ ಆ್ಯಕ್ಷನ್​ಗಳಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಮಾರ್ಷಲ್​ ಆರ್ಟ್ಸ್​, ಆ್ಯಕ್ಷನ್​ ಮತ್ತು ಸ್ಟಂಟ್​ಗಳನ್ನು ಕಲಿತು ಸಿದ್ಧತೆ ಮಾಡಿಕೊಂಡಿರುವ ಯಶಸ್ವ ನಟನೆಯ ವಿಷಯದಲ್ಲಿ ಸ್ವಲ್ಪ ಪಳಗಬೇಕಿದೆ. ವಿಲನ್​ ಬಾಬು ಪಾತ್ರದ ದಿಲೀಪ್​ ಕುಮಾರ್​ ಕೂಡ. ನಾಯಕಿ ಲಿಲ್ಲಿ ಪಾತ್ರದಲ್ಲಿ ಸ್ಮಿತಾ ಗೌರ್​ ಕೆಲವೇ ಸನ್ನಿವೇಶಗಳಿಗೆ ಸೀಮಿತವಾಗಿದ್ದಾರೆ. ನೆ.ಲ. ನರೇಂದ್ರ ಬಾಬು ವಿಭಿನ್ನ ಲುಕ್​ ಮತ್ತು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪರಿಕಲ್ಪನೆಯ ಸೈಫೈ ಥ್ರಿಲ್ಲರ್​ ಪ್ರಿಯರು ಒಮ್ಮೆ "ಬ್ಲಡಿ ಬಾಬು' ನೋಡಬಹುದು.