ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕೆಲ ನಟರು ವಿಲನ್ ಪಾತ್ರಗಳಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಕೆಲವರು ಹಾಸ್ಯಪಾತ್ರಗಳಿಗೆ, ಕೆಲವರು ಹೀರೋ, ಕೆಲವರು ಪೋಷಕ ಪಾತ್ರಗಳಿಗಷ್ಟೇ ಸೂಟ್ ಆಗುತ್ತಾರೆ. ಆದರೆ, ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುವಂತಹ ಕಲಾವಿದರು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಯಶ್ ಶೆಟ್ಟಿ ಆ ಸಾಲಿಗೆ ಸೇರುವ ಕಲಾವಿದ. ನೀನಾಸಂ ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಆ್ಯಕ್ಟಿಂಗ್ ಕಲಿತಿರುವ ಅವರು, "ಕೆಜಿಎ್ ಸರಣಿ', "ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ', "ಸಲಗ', "ಸೂಜಿದಾರ', "ಬೇರ', "ರಾನಿ' ಸೇರಿ ಹಲವು ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಾಯಕನಾಗಿರುವ "ಕೆಡಿ' ಚಿತ್ರದಲ್ಲಿ ಹೆಚ್ಚು ಬಿಜಿಯಿರುವ ಯಶ್, "ಪ್ರೇಮ್ ಸರ್ ನಿರ್ದೇಶನದಲ್ಲಿ ಈ ಹಿಂದೆ "ಎಕ್ಲವ್ಯಾ' ಚಿತ್ರದಲ್ಲಿ ನಟಿಸಿದ್ದೆ. ಅಲ್ಲಿ ನನ್ನ ನಟನೆ ಇಷ್ಟವಾಗಿ ಅವರು "ಕೆಡಿ'ಯಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ. ಸದ್ಯ "ಕೆಡಿ' ಮೇಲೆ ಹೆಚ್ಚು ಗಮನ ಹರಿಸಿದ್ದೇನೆ. ಇದುವರೆಗೂ ನೋಡಿರದ ಯಶ್ ಶೆಟ್ಟಿಯನ್ನು ಒಂದೊಳ್ಳೆ ಪಾತ್ರದಲ್ಲಿ ಈ ಚಿತ್ರದಲ್ಲಿ ನೋಡಬಹುದು. ನಟನಾಗಿ ನನಗೆ ಒಂದೊಳ್ಳೆ ಬ್ರೇಕ್ ಈ ಚಿತ್ರದಲ್ಲಿ ಸಿಗಲಿದೆ ಎಂಬ ವಿಶ್ವಾಸವಿದೆ' ಎಂದು ನಿರೀೆ ವ್ಯಕ್ತಪಡಿಸುತ್ತಾರೆ.
ಕಳೆದ ಜನವರಿಯಲ್ಲಿ ಯಶ್ ಶೆಟ್ಟಿ ನಟಿಸಿರುವ ಮೊದಲ ಹಿಂದಿ ವೆಬ್ಸರಣಿ "ದ ಸೀಕ್ರೆಟ್ಸ್ ಆ್ ಶಿಲೇದಾರ್ಸ್' ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅದರ ಜತೆಗೆ ತೆಲುಗು ಸ್ಟಾರ್ ನಾಗಾರ್ಜುನ ಎರಡನೇ ಮಗ ಅಖಿಲ್ ಅಕ್ಕಿನೇನಿ ನಟಿಸುತ್ತಿರುವ, "ವಿನಾರೊ ಭಾಗ್ಯಮು ವಿಷ್ಣುಕಥಾ' ಖ್ಯಾತಿಯ ಮುರಳಿ ಕಿಶೋರ್ ಅಬ್ಬೂರು ಆ್ಯಕ್ಷನ್-ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. "ಮತ್ತೊಂದು ಹಿಂದಿ ಸಿನಿಮಾ ಮಾತುಕತೆಯೂ ನಡೆಯುತ್ತಿದೆ. ದೊಡ್ಡ ಬ್ಯಾನರ್ನ, ಸ್ಟಾರ್ ಚಿತ್ರವದು. ಆದರೆ, ಅಧಿಕೃತವಾಗಿ ಚಿತ್ರತಂಡದಿಂದ ಘೋಷಣೆ ಆಗುವವರೆಗೂ ನಾನು ಹೆಚ್ಚೇನೂ ಹೇಳಲಾಗುವುದಿಲ್ಲ' ಎನ್ನುತ್ತಾರೆ ಯಶ್.
ಈಗಾಗಲೇ ಖಳನಾಯಕನಾಗಿ ಗುರುತಿಸಿಕೊಂಡಿರುವ ಯಶ್ ಶೆಟ್ಟಿ "ಜಂಗಲ್ ಮಂಗಲ್' ಎಂಬ ಚಿತ್ರದಲ್ಲಿ ನಾಯಕನಾಗಿ ಮೊದಲ ಬಾರಿಗೆ ನಟಿಸಿದ್ದು, ಏಪ್ರಿಲ್ ಅಥವಾ ಮೇಗೆ ಸಿನಿಮಾ ತೆರೆಗೆ ಬರಲಿದೆ. ರತ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯಶ್ ಜತೆ ಹರ್ಷಿತಾ ರಾಮಚಂದ್ರ ಮತ್ತು ಉಗ್ರಂ ಮಂಜು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ಸಿಂಪಲ್ ಸುನಿ ಪ್ರಸ್ತುತಪಡಿಸುತ್ತಿದ್ದಾರೆ. ಉಳಿದಂತೆ "ಮುದ್ದು ರಾಕ್ಷಸಿ', "ಕೋಣ', "ದ ರೈಸ್ ಆ್ ಅಶೋಕ' ಸೇರಿ ಇನ್ನೂ ಕೆಲ ಸಿನಿಮಾಗಳಲ್ಲಿ ಯಶ್ ಬಿಜಿಯಿದ್ದಾರೆ.