ಸಿನಿವಾಣಿ

‘ರಾಕಿಂಗ್​ಸ್ಟಾರ್​’ ಯಶ್​ ಕಡೆಯಿಂದ ಮತ್ತೊಂದು ಹೊಸ ಸುದ್ದಿ...

ಯಶ್​ ಏನೇ ಮಾಡಿದರೂ ಸುದ್ದಿಯೇ. ಅದರಲ್ಲೂ ಸೋಷಿಯಲ್​ ಮೀಡಿಯಾದಲ್ಲಿ ಲಿಮಿಟೆಡ್​ ಪೋಸ್ಟ್ ಗಳನ್ನು ಹಾಕಿದರೂ, ಅದರ ತಲುಪುವಿಕೆ ಪ್ರಮಾಣ ಹೆಚ್ಚೇ ಇದೆ. ಅವರ ಒಂದೊಂದು ಸೋಷಿಯಲ್​ ಮೀಡಿಯಾ ಪೋಸ್ಟ್​ಗೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅದೇ ರೀತಿ ಇದೀಗ ಅಭಿಮಾನಿಗಳ ತಲೆಗೆ ಯಶ್​ ಹುಳ ಬಿಟ್ಟಿದ್ದಾರೆ. ಅಂದರೆ, ಹೊಸದೊಂದು ವಿಡಿಯೋ ಶೇರ್​ ಮಾಡಿಕೊಂಡು ಉಡುಗೊರೆಯೊಂದನ್ನು​ ನೀಡಿದ್ದಾರೆ.

ಹೌದು, ಈ ಸಲ ಹೀರೋ ಬರುವುದಿಲ್ಲ. ಬದಲಿಗೆ ವಿಲನ್​ ಆಗಮನವಾಗಲಿದೆ ಎಂದು ಬರೆದುಕೊಂಡಿರುವ ಯಶ್​, ಖಡಕ್​ ವಿಲನ್​ ಅವತಾರದಲ್ಲಿ ಎದುರಾಗಿದ್ದಾರೆ. ಹಾಗಾದರೆ, ಈ ಕಿರು ಮೋಷನ್​ ಪೋಸ್ಟರ್ ಕೆಜಿಎಫ್​ ಚಿತ್ರದ್ದಾ? ಹೀಗೆ ಬಗೆಬಗೆ ಅನುಮಾನ ಮೂಡಬಹುದು. ಯಶ್​ ಪೋಸ್ಟ್​​​​ಗೆ ಇದು ಕೆಜಿಎಫ್​ ಚಿತ್ರದ ಅಪ್​ಟೇಡ್​ ಇರಬಹುದೆಂದೇ ಅಭಿಮಾನಿಗಳು ಭಾವಿಸಿದ್ದಾರೆ. ಆದರೆ, ಇದು ಜಾಹೀರಾತೊಂದರ ಪ್ರೋಮೋ!

ಹೌದು, ಈ ಹಿಂದೆಯೂ ಯಶ್​ ಹಲವು ಕಮರ್ಷಿಯಲ್​ಗಳಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನ ಮೊದಲ ಲುಕ್​ ನೋಡಿ, ಕೆಜಿಎಫ್ ಸಿನಿಮಾದ್ದೇ ಹೊಸ ಸುದ್ದಿ ಇರಬಹುದಾ ಎನ್ನಲಾಗಿತ್ತು. ಆದರೆ, ಕೊನೆಗೆ ಅದು ಜಾಹೀರಾತು ಎಂದು ಗೊತ್ತಾಯ್ತು. ಸದ್ಯ ಯಶ್​ ಅಂಥದ್ದೇ ಮತ್ತೊಂದು ಕಮರ್ಷಿಯಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಬಗ್ಗೆ ನಾಡಿದ್ದು ಅಂದರೆ ಆಗಸ್ಟ್ 17ರಂದು ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಿದ್ದಾರೆ.