ಸಿನಿವಾಣಿ

ಇವತ್ತು ಮಾತ್ರವಲ್ಲ.. ಇಡೀ ವರ್ಷ ಮಹಿಳೆಯರನ್ನು ಗೌರವ, ಪ್ರೀತಿಯಿಂದ ಕಾಣಬೇಕು!

ಮಾರ್ಚ್ 8 ರಂದು ವಿಶ್ವಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು, ಬಹುತೇಕ ಎಲ್ಲರ ಮನೆಯಲ್ಲಿ, ಕಛೇರಿಗಳಲ್ಲಿ ಈ ದಿನವನ್ನು ಯಾವ ಹಬ್ಬಕಿಂತ ಕಡಿಮೆಯಾಗಿ ಆಚರಿಸಲಾಗುವುದಿಲ್ಲ. ಸಮಾನತೆಗಾಗಿ ಹಾಗೂ ಹೆಣ್ಣು ಸಬಲೆ ಎಂಬ ಸಂದೇಶ ಸಾರುವುದರ ಜತೆಗೆ ಯಾವುದೇ ಲಿಂಗ ತಾರತಮ್ಯ ಇಲ್ಲದೇ ಬದುಕ ಬೇಕೆಂದು ಹಲವು ವರ್ಷಗಳಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಅಂದಹಾಗೆ, ಕಾಲ ಬದಲಾಗಿದೆ. ಲಿಂಗ ತಾರತಮ್ಯದ ಕಾನ್ಸೆಪ್ಟ್​ ಹೋಗಿದೆ. ಎಲ್ಲಾ ಕ್ಷೇತ್ರದಲ್ಲೂ ಈಗ ಮಹಿಳೆಯರು ಪುರುಷರಿಗೆ ಸಮಾನವಾಗಿ ಮುನ್ನುಗುತ್ತಿದ್ದಾರೆ.
ಹಾಗಾಗಿ, ನಟಿ ಹರ್ಷಿಕಾ ಪೂಣಚ್ಚ ಅವರು ಈ ವಿಶೇಷ ದಿನದ ಬಗ್ಗೆ ಒಂದು ವಿಡಿಯೋದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮಹಿಳೆ ಆಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಆದರೆ, ಮಾರ್ಚ್- 8ಕ್ಕೆ ಮಾತ್ರ ಇದನ್ನು ಸೆಲೆಬ್ರೇಟ್​ ಮಾಡದೇ, ಪ್ರತಿ ವರ್ಷ ಪೂರ್ತಿ ಮಹಿಳೆಯನ್ನು ಆಚಡಿಸುವುದು ಕಲಿಯಬೇಕು ಮನುಷ್ಯ. ಹೆಣ್ಣು ಮಕ್ಕಳಿಗೆ ಈ ದಿನ ಸಿಗುವ ಹಕ್ಕುಗಳು, ಗೌರವ, ಪ್ರೀತಿ, ವರ್ಷ ಪೂರ್ತಿ ಸಿಕ್ಕರೆ ಚೆನ್ನಾಗಿರುತ್ತೆ. ಎಲ್ಲಾ ಪುರುಷರಲ್ಲೂ ನಾನು ಇದನ್ನು ವಿನಂತಿಸುತ್ತಿದ್ದೆನೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅದನ್ನು ಖಂಡಿಸಬೇಕು’ ಎಂದು ವಿಡಿಯೋ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.