ಸಿನಿವಾಣಿ

ಕೆಲಸಕ್ಕೆ ರಾಜೀನಾಮೆ ನೀಡಿ 'ಅಡಲ್ಟ್​ ಸ್ಟಾರ್'​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!

ಎಸ್ಸೆಕ್ಸ್​ (ಯುನೈಟೆಡ್​ ಕಿಂಗ್​ಡಮ್ಸ್​): ಪುರುಷ ಪ್ರಧಾನ ಕೆಲಸದ ವಾತಾವರಣದಿಂದ ಬೇಸರಗೊಂಡ ಎಸ್ಸೆಕ್ಸ್​ನ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ "ವಯಸ್ಕರ ನಟಿ" ಆಗಿ ಬದಲಾಗಿರುವುದು ಭಾರೀ ಸುದ್ದಿಯಾಗಿದೆ.

ಓನ್ಲಿ ಫ್ಯಾನ್ಸ್​ (ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್​ ಮಾಡಲಾಯಿತು) ಹೆಸರಿನ ಜಾಲತಾಣ ವೇದಿಕೆಯಲ್ಲಿ ತಮ್ಮ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ವೃತ್ತಿಯನ್ನು ಆರಂಭಿಸಿದ್ದು, ಇದೀಗ 2.3 ಮಿಲಿಯನ್​ ಡಾಲರ್​ ಸಂಪಾದನೆಯೊಂದಿಗೆ ಮಿಲಿಯನೇರ್​ ಆಗಿ ಹೊರಹೊಮ್ಮಿದ್ದಾರೆ. ಇಷ್ಟೇ ಅಲ್ಲದೆ, 265,000 ಪೌಂಡ್​ (2,67,92,295 ರೂಪಾಯಿ) ಮೌಲ್ಯದ ಲಕ್ಷುರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ವಿವರಣೆಗೆ ಬರುವುದಾದರೆ, 7 ವರ್ಷಗಳ ಹಿಂದೆ ಚಾರ್ಲೆಟ್ ರೋಸ್ ತಮ್ಮ ಪೊಲೀಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕಾರಣ ಪುರುಷ ಪ್ರಧಾನ ಕೆಲಸದ ವಾತಾವರಣ. ಇದು ರೋಸ್​ಗೆ ಸ್ವಲ್ಪವು ಇಷ್ಟವಿರಲಿಲ್ಲ. ನಾನು ನನ್ನ ಅರ್ಹತೆಗಳನ್ನು ಪಾಸ್​ ಮಾಡಿದ್ದೇನೆ. ಆದರೆ, ಅದು ವ್ಯರ್ಥ ಅನಿಸಿತು ಮತ್ತು ಕೆಲಸವು ಕೇವಲ ಪುರುಷ ಪ್ರಾಬಲ್ಯದಿಂದ ಕೂಡಿದೆ ಎಂಬುದು ಬಹಳ ಬೇಗನೆ ಸ್ಪಷ್ಟವಾಯಿತು. ಹೀಗಾಗಿ ನಾನು ಉದ್ಯೋಗವನ್ನು ತೊರೆದೆ ಎಂದು ಜಾಮ್​ ಪ್ರೆಸ್​ಗೆ ರೋಸ್​ ಹೇಳಿಕೆ ನೀಡಿದ್ದಾರೆ.

ಸ್ಪೋರ್ಟ್​ ಕಾರುಗಳಿಗೆ ಗ್ಲಾಮರಸ್​ ಪೋಸ್​ ನೀಡುವ ಕೆಲಸವನ್ನು ಆರಂಭಿಸು ಎಂದು ರೋಸ್​ಗೆ ಆಕೆಯ ಸ್ನೇಹಿತೆ ಸಲಹೆ ನೀಡುತ್ತಾರೆ. ತಕ್ಷಣ ರೋಸ್​ ಗ್ಲಾಮರ್​ ಮತ್ತು ಒಳಉಡುಪಿನ ಮಾಡೆಲ್​ ಆಗಿ ಬದಲಾಗುತ್ತಾರೆ. ಹೀಗಿರುವಾಗ 2016ರಲ್ಲಿ ತಮ್ಮ ವೇದಿಕೆ ಸೇರಿಕೊಳ್ಳುವಂತೆ ಓನ್ಲಿ ಫ್ಯಾನ್ಸ್​ ರೋಸ್​ಗೆ ಆಹ್ವಾನ ನೀಡುತ್ತದೆ.

ಇದಾದ ಬಳಿಕ ಓನ್ಲಿ ಫ್ಯಾನ್ಸ್​ ಜಾಲತಾಣಕ್ಕೆ ಸೇರಿಕೊಳ್ಳುವ ರೋಸ್​ ತನ್ನ ಪರಿಮಿತಿಯಲ್ಲಿ ನಿಯಮಿತವಾಗಿ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಾ ಬರುತ್ತಿದ್ದು, ತಿಂಗಳಿಗೆ ತುಂಬಾ ಹಣವನ್ನು ಗಳಿಸುತ್ತಿದ್ದಾರೆ.

ಓನ್ಲಿ ಫ್ಯಾನ್ಸ್​ ವೇದಿಕೆ ಬಗ್ಗೆ ಮಾತನಾಡಿರುವ ರೋಸ್​, ಓನ್ಲಿ ಫ್ಯಾನ್ಸ್​ ಅನ್ನು ಪೋರ್ನ್​ ವೇದಿಕೆ ಅಂದುಕೊಂಡಿದ್ದಾರೆ. ನಾನು ಪೋರ್ನ್​ ವಿರುದ್ಧವೂ ಅಲ್ಲ. ಆದರೆ, ಆ ಮಟ್ಟದ ವಿಷಯಗಳನ್ನು ನಾನು ಪೋಸ್ಟ್​ ಮಾಡುವುದಿಲ್ಲ. ಇದು ನನಗೆ ವೈಯಕ್ತಿಕವಾಗಿದೆ ಮತ್ತು ನಾನು ನನ್ನ ಬೆರಳೆಣಿಕೆಯಷ್ಟು ಅಭಿಮಾನಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ನಾನು ಪ್ರತಿದಿನ ಅವರೊಂದಿಗೆ ಮಾತನಾಡುತ್ತೇನೆ ಮತ್ತು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)