ಸಿನಿವಾಣಿ

ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

ಚೆನ್ನೈ: ಮಲಯಾಳಂ ಬ್ಯೂಟಿ ಹನಿ ರೋಸ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ. ಆದರೆ, ಇಷ್ಟೊಂದು ಸೌಂದರ್ಯವತಿಯಾಗಿರುವ ಹನಿ ರೋಸ್​ಗೆ ಯಾಕೆ ಹೆಚ್ಚಿನ ಸಿನಿಮಾ ಆಫರ್​ಗಳು ಬರುತ್ತಿಲ್ಲ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅದ್ಭುತ ಯಶಸ್ಸು ಸಾಧಿಸಿದ ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿ ರೋಸ್​ ನಟಿಸಿದರು. ಈ ಚಿತ್ರ 100 ಕೋಟಿ ರೂ. ಕ್ಲಬ್​ ಸೇರಿದೆ. ತಮ್ಮ ಬೋಲ್ಡ್​ ಪಾತ್ರದ ಮೂಲಕ ಸಿನಿರಸಿಕರ ಮನ ಗೆದ್ದಿರುವ ಹನಿ ರೋಸ್​, ಈ ಸಿನಿಮಾ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.

ಬೋಲ್ಡ್​ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಹನಿ ರೋಸ್​, ಸದಾ ತಮ್ಮ ಬೋಲ್ಡ್​ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಶಾಪ್​ ಓಪನಿಂಗ್​ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲಿಯೂ ತಮ್ಮ ಬೋಲ್ಡ್​ ಉಡುಗೆಗಳಿಂಗಲೇ ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತಾರೆ.

ಧಕ್ಕೆ ತಂದಿದ್ದೀರಾ?

ತಮ್ಮ ಸೌಂದರ್ಯದಿಂದಲೇ ಸದ್ದು ಮಾಡುತ್ತಿರುವ ಹನಿ ರೋಸ್​ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಯಾಕೆ ಎಂಬ ಪ್ರಶ್ನೆ ಮೂಡಿದೆ. ನಿರ್ದೇಶಕರು ಹನಿ ರೋಸ್​ ಕಡೆ ತಮ್ಮ ಗಮನ ಹರಿಸುತ್ತಿಲ್ಲ ಏಕೆ ಎಂದು ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ. ಹನಿ ರೋಸ್​ಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ನಿರ್ದೇಶಕರ ಭಾವನೆಗಳಿಗೆ ಏನಾದರೂ ಧಕ್ಕೆ ತಂದಿದ್ದೀರಾ ಎಂದು ಹನಿ ರೋಸ್​ಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಐಟಂ ಗರ್ಲ್​

ಹನಿ ರೋಸ್​ ಅವರು ನಾಯಕಿಯ ಪಾತ್ರಗಳಿಗೆ ಸೂಕ್ತವಾಗಿದ್ದಾರೆ. ಆದರೆ, ನಿರ್ದೇಶಕರು ಅವರನ್ನು ಐಟಂ ಗರ್ಲ್​ ಎಂದು ಮಾತ್ರ ನೋಡುತ್ತಾರಂತೆ. ಹೀರೋಯಿನ್​ಗೆ ಸೂಕ್ತ ಅಲ್ಲ ಎಂದು ಹೇಳುತ್ತಿದ್ದಾರಂತೆ. ಹೀಗಾಗಿ ಹನಿ ರೋಸ್ ಅವರು ಸಿನಿಮಾದಲ್ಲಿ ಹಿಂದೆ ಉಳಿದಿದ್ದಾರೆ. ಕೆಲವು ನಿರ್ದೇಶಕರು ತೂಕ ಇಳಿಸಿಕೊಳ್ಳಲು ಹನಿ ರೋಸ್​ ಅವರಿಗೆ ಸಲಹೆಗಳನ್ನೂ ನೀಡುತ್ತಿದ್ದಾರಂತೆ. ಮುಂದಿನ ದಿನಗಳಲ್ಲಾದರೂ ಅವಕಾಶ ಸಿಗಬಹುದು ಅಂತ ಅಭಿಮಾನಿಗಳು ಭರವಸೆ ಹೊಂದಿದ್ದಾರೆ. (ಏಜೆನ್ಸೀಸ್​)