Ram Charan  
ಸಿನಿವಾಣಿ

Ram Charan ಬಾಡಿಗಾರ್ಡ್ ಯಾರು ಗೊತ್ತೆ? ಈತನ ದಿನದ ಸಂಬಳ ಕೇಳಿದ್ರೆ ಅಬ್ಬಾ ಅಂತೀರಾ!

ಹೈದರಾಬಾದ್​: ‘ಆರ್‌ಆರ್‌ಆರ್’ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ (Peddi) ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಮುಂಬೈ, ಭೋಪಾಲ್ ಹಾಗೂ ಬೆಂಗಳೂರಿನಲ್ಲಿ ನಡೆದ ಈವೆಂಟ್‌ಗಳಲ್ಲಿ ರಾಮ್ ಚರಣ್ ಲುಕ್ಸ್ ಜೊತೆಗೆ ಎಲ್ಲರ ಕಣ್ಣು ನೆಟ್ಟಿರುವುದು ಅವರ ಪಕ್ಕದಲ್ಲೇ ಕಾವಲುಗಾರನಂತೆ ನಿಲ್ಲುತ್ತಿರುವ ಒಬ್ಬ ಭಾರಿ ಕಟೌಟ್‌ನ ವ್ಯಕ್ತಿಯ ಮೇಲೆ. ಹಾಲೀವುಡ್ ಸಿನಿಮಾದ ಆಕ್ಷನ್ ಹೀರೋನಂತೆ ಕಾಣುವ ಈ ಹೊಸ ಬಾಡಿಗಾರ್ಡ್‌ನ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ಅಷ್ಟಕ್ಕೂ ಈ ಬಾಡಿಗಾರ್ಡ್ ಯಾರು ಮತ್ತು ಇವರಿಗೆ ರಾಮ್ ಚರಣ್ ನೀಡುತ್ತಿರುವ ದೈನಂದಿನ ಸಂಭಾವನೆ ಎಷ್ಟು ಎಂಬ ಆಸಕ್ತಿದಾಯಕ ವಿವರಗಳು ಈಗ ಹೊರಬಿದ್ದಿವೆ. ಇವರ ಹೆಸರು ಕೆವಿನ್ ಕುಂಟಾ (Kevin Kunta). ಇವರು ಕೇವಲ ಸಾಧಾರಣ ಸೆಕ್ಯೂರಿಟಿ ಗಾರ್ಡ್ ಅಲ್ಲ, ಬದಲಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟುವಂತೆ!

ಯಾರು ಈ ಕೆವಿನ್ ಕುಂಟಾ?

ಆಫ್ರಿಕಾ ಖಂಡದ ಗಾಂಬಿಯಾ ದೇಶಕ್ಕೆ ಸೇರಿದ ಕೆವಿನ್ ಕುಂಟಾ ಪ್ರಸ್ತುತ ಇಟಲಿಯಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಪರ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಫೈಟರ್ ಆಗಿದ್ದು, ಇಟಲಿಯ ಪ್ರಸಿದ್ಧ 'ಮಿಡಲ್‌ವೇಟ್ ಎಂಎಂಎ ಚಾಂಪಿಯನ್' ಆಗಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರಿಂಗ್‌ನಲ್ಲಿ ಎದುರಾಳಿಗಳನ್ನು ಧೂಳೀಪಟ ಮಾಡುವ ಇಂತಹ ಡೇಂಜರಸ್ ಅಂತರರಾಷ್ಟ್ರೀಯ ಫೈಟರ್ ಅನ್ನು ರಾಮ್ ಚರಣ್ ತಮ್ಮ ವೈಯಕ್ತಿಕ ಭದ್ರತೆಗಾಗಿ ನೇಮಿಸಿಕೊಂಡಿದ್ದಾರೆ.
ℹ️

ದಿನದ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!

ವಿವಿಐಪಿ (VVIP) ಮತ್ತು ಜಾಗತಿಕ ಸೆಲೆಬ್ರಿಟಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಸೆಕ್ಯೂರಿಟಿ (ನಿಷ್ಠಾವಂತ ವೈಯಕ್ತಿಕ ಭದ್ರತೆ) ಒದಗಿಸುವಲ್ಲಿ ಕೆವಿನ್ ಪರಿಣಿತರು. ಮೂಲಗಳ ಪ್ರಕಾರ, ರಾಮ್ ಚರಣ್ ತಮ್ಮ ರಕ್ಷಣೆಗಾಗಿ ಕೆವಿನ್ ಕುಂಟಾಗೆ ದಿನಕ್ಕೆ 2 ರಿಂದ 4 ಲಕ್ಷ ರೂಪಾಯಿ ವರೆಗೆ ಸಂಭಾವನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಭಾರಿ ಮೊತ್ತದ ಸಂಬಳದೊಂದಿಗೆ ಕೆವಿನ್, ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಸೆಲೆಬ್ರಿಟಿ ಬಾಡಿಗಾರ್ಡ್‌ಗಳ ಸಾಲಿಗೆ ಸೇರಿದ್ದಾರೆ. ಸೂಟು-ಬೂಟು ಧರಿಸಿ, ಸ್ಟೈಲಿಶ್ ಆಗಿ ಕಾಣುವ ಕೆವಿನ್, ಸಾರ್ವಜನಿಕ ಈವೆಂಟ್‌ಗಳಲ್ಲಿ ನಟನತ್ತ ನುಗ್ಗುವ ಬೃಹತ್ ಜನಸಂದಣಿಯನ್ನು ಅತ್ಯಂತ ಚಾಣಾಕ್ಷತನದಿಂದ ನಿಯಂತ್ರಿಸುತ್ತಿದ್ದಾರೆ.
ಬುಚ್ಚಿಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾ ಇದೇ ಜೂನ್ 4 ರಂದು ತೆರೆಕಾಣುತ್ತಿದ್ದು, ಪ್ರಚಾರದ ಸಮಯದಲ್ಲಿ ಗ್ಲೋಬಲ್ ಸ್ಟಾರ್ ಸುರಕ್ಷತೆಗೆ ಯಾವುದೇ ಕೊರತೆಯಾಗಬಾರದು ಎಂದು ಈ ಅಂತರರಾಷ್ಟ್ರೀಯ ಫೈಟರ್ ಅನ್ನು ರಕ್ಷಣೆಗೆ ಇಳಿಸಲಾಗಿದೆ,(ಏಜೆನ್ಸೀಸ್​).