Athadu : ಮುರಳಿ ಮೋಹನ್ ನಿರ್ಮಿಸಿ, ತ್ರಿವಿಕ್ರಮ್ ನಿರ್ದೇಶನ ಮಾಡಿದ ಮಹೇಶ್ ಬಾಬು ಮತ್ತು ತ್ರಿಷಾ ನಟಿಸಿರುವ ಅಥಡು ಚಿತ್ರ ಆಗಸ್ಟ್ 9ರಂದು ಮರು ಬಿಡುಗಡೆಗೊಳ್ಳಲಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಇದರ ನಡುವೆ ಸಿನಿಮಾ ಕುರಿತು ಒಂದು ಆಸಕ್ತಿಕರ ಸಂಗತಿ ಹೊರಬಿದ್ದಿದೆ.
ಅಥಡು ಸಿನಿಮಾ ಚಿತ್ರಮಂದಿರಗಳಲ್ಲಿ ಮೊದಲು ಬಿಡುಗಡೆಯಾದಾಗ ಇದು ಸಾಧಾರಣ ಚಿತ್ರ ಎನಿಸಿದರು ಕೂಡ ಸೂಪರ್ ಡೂಪರ್ ಹಿಟ್ ಆಯಿತು. ಇದೀಗ ಅಭಿಮಾನಿಗಳಿಗಾಗಿ ಮರುಬಿಡುಗಡೆಗೆ ರೆಡಿಯಾಗಿದ್ದು, ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ವೇಳೆ ಹಾಜರಿದ್ದ ನಿರ್ಮಾಪಕ ಮುರಳಿ ಮೋಹನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಥಡು ಚಿತ್ರದಲ್ಲಿ ನಾಸರ್ ನಿರ್ವಹಿಸಿದ ಪಾತ್ರಕ್ಕೆ ಶೋಭನ್ ಬಾಬು ಅವರನ್ನು ನಾವು ಯೋಚಿಸಿದ್ದೆವು. ಆ ಪಾತ್ರಕ್ಕಾಗಿ ನಾವು ಅವರಿಗೆ ಖಾಲಿ ಚೆಕ್ ಅನ್ನು ಸಹ ಕಳುಹಿಸಿದ್ದೆವು. ಆದರೆ, ಶೋಭನ್ ಬಾಬು ನಮ್ಮ ಆಫರ್ ಅನ್ನು ತಿರಸ್ಕರಿಸಿದರು. ಎಲ್ಲರೂ ನನ್ನನ್ನು ನಾಯಕನಾಗಿ ನೆನಪಿಸಿಕೊಳ್ಳಬೇಕೆ ಹೊರತು ಈ ರೀತಿಯ ಇನ್ನೊಂದು ಪಾತ್ರದಲ್ಲಿ ಅಲ್ಲ ಎಂದು ಹೇಳುವ ಮೂಲಕ ಅವರು ತಾತಾನ ಪಾತ್ರವನ್ನು ತಿರಸ್ಕರಿಸಿದರು ಎಂದು ಹೇಳಿದರು.
ಶೋಭನ್ ಬಾಬು ಆ ಪಾತ್ರವನ್ನು ತಿರಸ್ಕರಿಸಿದ ನಂತರ, ನಾಸರ್ ಅವರನ್ನು ಆಯ್ಕೆ ಮಾಡಲಾಯಿತು. ಮಹೇಶ್ ಅವರ ಅಜ್ಜನ ಪಾತ್ರದಲ್ಲಿ ನಾಸರ್ ಪರಿಪೂರ್ಣವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಜ್ಜ-ಮೊಮ್ಮಗನ ಭಾವನೆಯನ್ನು ಚೆನ್ನಾಗಿ ಬೆಳೆಸಲಾಗಿತ್ತು ಎಂದು ಮುರಳಿ ಮೋಹನ್ ಹೇಳಿದರು.
ಅಂದಹಾಗೆ, ಎನ್‌ಟಿಆರ್ ಮತ್ತು ಎಎನ್‌ಆರ್ ನಂತರ, ಕೃಷ್ಣ ಮತ್ತು ಶೋಭನ್ ಬಾಬು ಕೆಲವು ವರ್ಷಗಳ ಕಾಲ ಚಲನಚಿತ್ರೋದ್ಯಮವನ್ನು ಆಳಿದರು. ಎಲ್ಲ ನಾಯಕರು ನಾಯಕರಾದ ನಂತರ ಪೋಷಕ ಪಾತ್ರವನ್ನು ಮಾಡಿದರು. ಆದರೆ, ಶೋಭನ್ ಬಾಬು ಮಾತ್ರ ನಾಯಕನಾಗಿಯೇ ಉಳಿದು, ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಹಾಕಿ ಚಲನಚಿತ್ರಗಳಿಂದ ದೂರ ಉಳಿದರು. (ಏಜೆನ್ಸೀಸ್)