Priyanka Chopra 
ಸಿನಿವಾಣಿ

ಶೂಟಿಂಗ್ ಸೆಟ್‌ನಲ್ಲಿ ಅವರೊಬ್ಬ ದೇವಮಾನವನಂತೆ ಕಾಣುತ್ತಿದ್ದರು!; ವಿಜಯ್​ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ..Priyanka Chopra

ಪ್ರಮುಖ ಮುಖ್ಯಾಂಶಗಳು

  • ವಿಜಯ್​ ಜೊತೆ ಮೊದಲ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ
  • ವಿಜಯ್​ಗಾಗಿ ನಿತ್ಯ ನೂರಾರು ಅಭಿಮಾನಿಗಳು ಕಾಯುತ್ತಿದ್ದರು ಎಂದು ಮಾತು
  • ಸಿಟಾಡೆಲ್​ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಹಲವು ಸಂದರ್ಶನದಲ್ಲಿ ಪ್ರಿಯಾಂಕಾ ಭಾಗಿ
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್​ ತಾರೆಯು ಹೌದು, ದಿ ಬ್ಲಫ್, ಸಿಟಾಡೆಲ್​ ಸೇರಿಂದತೆ ಹಲವು ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಬಾಲಿವುಡ್​ನಲ್ಲಿ ಇಂದಿಗೂ ತಮ್ಮ ಬೇಡಿಕೆಯನ್ನು ಕುಂದಿಸಿಕೊಂಡಿಲ್ಲ. ಆದರೆ, ಇಷ್ಟೆಲ್ಲ ಹಿಟ್​ ಸಿನಿಮಾ, ಚಿರಪರಿಚಿತರಾಗೋಕೆ ಕಾರಣವಾಗಿದ್ದು, ವಿಜಯ್​ ಜೊತೆ ನಟಿಸಿದ ಮೊದಲ ಸಿನಿಮಾದಿಂದ. ಈ ಬಗ್ಗೆ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು ವಿಜಯ್​ನ ಪಾಪ್ಯುಲಾರಿಟಿ ಬಗ್ಗೆ ಅದ್ರಿಂದ ಅವರಿಗಾದ ಅನುಕೂಲದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾರ ಚಿತ್ರರಂಗದ ಪ್ರಯಾಣ ಆರಂಭವಾಗಿದ್ದು ತಮಿಳಿನ 'ತಮಿಳನ್' ಚಿತ್ರದ ಮೂಲಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಿತ್ರದಲ್ಲಿ ದಳಪತಿ ವಿಜಯ್ ಅವರಿಗೆ ನಾಯಕಿಯಾಗಿ ನಟಿಸಿದ್ದ ಪ್ರಿಯಾಂಕಾ, ಅಂದೇ ವಿಜಯ್ ಅವರ ಜನಪ್ರಿಯತೆಯನ್ನು ಕಂಡು ದಂಗಾಗಿದ್ದರಂತೆ.

ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

2002ರಲ್ಲಿ ತೆರೆಕಂಡ 'ತಮಿಳನ್' ಚಿತ್ರ ಪ್ರಿಯಾಂಕಾ ಚೋಪ್ರಾ ಅವರ ಚೊಚ್ಚಲ ಮೊದಲ ಸಿನಿಮಾ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿಜಯ್ ಅವರ ಸುತ್ತಲಿದ್ದ ಅಭಿಮಾನಿಗಳ ಅಲೆ ಕಂಡು ಪ್ರಿಯಾಂಕಾ ಬೆರಗಾಗಿದ್ದರಂತೆ. ಆ ಬಗ್ಗೆ ಅವರು ಹೇಳಿದ್ದು ಹೀಗೆ..
ಭಾರತದಲ್ಲಿ ನಾನು ನಟಿಸಿದ್ದು ಮೊದಲ ಸಿನಿಮಾ ತಮಿಳಿನಲ್ಲಿ. ಹೊಸ ಭಾಷೆಯನ್ನು ಕಲಿಯುವುದು ಅಸಾಧ್ಯವಾದ ಕಾರಣ ನಾನು ಫೋನೆಟಿಕ್ ಆಗಿ ಕಲಿತೆ. ಆದರೆ ನಾನು ನನ್ನ ಸಾಲುಗಳನ್ನು ಕಂಠಪಾಠ ಮಾಡಿಕೊಂಡೆ. ನಾನು ಪರಿಚಯವಾಗಿದ್ದೆ ನನ್ನ ಸಹನಟನಿಂದ ಅವರ ಹೆಸರು ವಿಜಯ್, ಅವರು ಅತ್ಯಂತ ಜನಪ್ರಿಯರು. ಅವರು ನೃತ್ಯ ಮಾಡುವಾಗ ಅಥವಾ ತಮ್ಮ ಕೆಲಸವನ್ನು ಮಾಡುವಾಗ ಅವರನ್ನು ನೋಡಲು ನೂರಾರು ಜನರು ಕಾಯುತ್ತಿದ್ದರು.

ದೇವಮಾನವನಂತೆ ಕಂಡರು

ಮುಂದುವರೆದು, ಜನರಿಗೆ ವಿಜಯ್​ ಮೇಲಿದ್ದ ಕ್ರೇಜ್​, ಅಭಿಮಾನ ಕಂಡ ಪ್ರಿಯಾಂಕಾ ಅವರಿಗೆ, ಸಿಎಂ ವಿಜಯ್ ದೇವಮಾನವನಂತೆ (Demi-God) ಕಾಣುತ್ತಿದ್ದರು. ವಿಜಯ್ ಅವರು ಅಪಾರ ಸರಳತೆ ಹೊಂದಿದ್ದಾರೆ. ಸೆಟ್‌ನಲ್ಲಿ ಅತ್ಯಂತ ವಿನಮ್ರರಾಗಿರುತ್ತಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ವೃತ್ತಿಜೀವನದ ಆರಂಭದಲ್ಲೇ ಇಂತಹ ದೊಡ್ಡ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಿದ್ದು ಪ್ರಿಯಾಂಕಾ ಅವರಿಗೆ ವೃತ್ತಿಪರತೆಯ ಬಗ್ಗೆ ಹೊಸ ದೃಷ್ಟಿಕೋನ ನೀಡಿತು. ಅಭಿಮಾನಿಗಳ ಪ್ರೀತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅವರು ವಿಜಯ್ ಅವರನ್ನು ನೋಡಿ ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರಸ್ತುತ ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಸ್ಥಾಪಿಸಿ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಈ ಸಂದರ್ಭದಲ್ಲಿ, ಪ್ರಿಯಾಂಕಾ ಚೋಪ್ರಾ ಅವರ ಈ ಹಳೆಯ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ. (ಏಜೆನ್ಸೀಸ್).