ಸಿನಿವಾಣಿ

ರಾಗಿಣಿ ನಂಟೇನು? ಮುಂದೇನು ನಡೆಯಲಿದೆ?

ಬೆಂಗಳೂರು: ರಾಗಿಣಿಯ ಡ್ರಗ್ಸ್ ಮಾಫಿಯಾ ನಂಟಿನ ಬಗ್ಗೆ ಅವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಸಿಕ್ಕಂತಹ ಪ್ರಮುಖ ವಸ್ತುಗಳು ಸುಳಿವು ನೀಡಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ರಾಗಿಣಿ ಗೆಳೆಯ ಜಯನಗರದ ಆರ್​ಟಿಒ ಕಚೇರಿ ದ್ವಿತೀಯ ದರ್ಜೆ ನೌಕರ ರವಿ ಅಲಿಯಾಸ್ ರವಿಶಂಕರ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಈ ವೇಳೆ ತನಿಖಾಧಿಕಾರಿಗಳಿಗೆ ಈತ ಫಾಮರ್್​ಹೌಸ್, ಪಂಚತಾರಾ ಹೋಟೆಲ್, ಪಬ್​ಗಳಲ್ಲಿ ನೃತ್ಯಕೂಟ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಸಾಕಷ್ಟು ವಿಡಿಯೋ, ಫೋಟೋಗಳು ಪತ್ತೆಯಾಗಿವೆ. ರವಿಶಂಕರ್ ಜತೆ ರಾಗಿಣಿ ಕೂಡ ಇದ್ದಾರೆ.

ಈತ ಹೊರರಾಜ್ಯಗಳಲ್ಲೂ ಪಾರ್ಟಿಗಳನ್ನು ಆಯೋಜಿಸಿ ವಿದೇಶದಿಂದ ತರಿಸಿದ್ದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ರವಿಶಂಕರ್ ಮೊಬೈಲ್ ಪರಿಶೀಲನೆ ವೇಳೆ ರಾಗಿಣಿ, ರಾಹುಲ್ ಮತ್ತು ವಿರೇನ್ ಖನ್ನಾ ನಡುವೆ ಸಂದೇಶ ವಿನಿಮಯ ಹಾಗೂ ಕರೆಗಳು ಮಾಡಿರುವ ಸುಳಿವು ಲಭ್ಯವಾಯಿತು. ಈ ಆಧಾರದಲ್ಲಿ ಮೇಲೆ ರಾಗಿಣಿಯನ್ನು ಬಂಧಿಸಲಾಗಿದೆ.

ಮುಂದೇನು?

  • ರಾಗಿಣಿಯನ್ನು ಕೋರ್ಟ್​ಗೆ ಹಾಜರು ಪಡಿಸಿ ವಶಕ್ಕೆ ಪಡೆದು ವಿಚಾರಣೆ, ಬಂಧಿತರ ಹೇಳಿಕೆ ಆಧರಿಸಿ ಕಾರ್ಯಾಚರಣೆ
  • ಹೇಳಿಕೆ, ಸಾಕ್ಷ್ಯಾಧಾರ ಆಧರಿಸಿ ಸಂಪರ್ಕದಲ್ಲಿರುವವರ ಬಂಧಿಸಲಾಗುತ್ತೆ
  • ಸ್ಯಾಂಡಲ್​ವುಡ್​ನಿಂದ ರಾಜಕೀಯಕ್ಕೂ ನಂಟು ವಿಸ್ತರಿಸುವ ಸಾಧ್ಯತೆ
  • ಸಂಜನಾ ಹಾಗೂ ಮತ್ತಿತರರಿಗೂ ಸಿಸಿಬಿ ವಿಚಾರಣೆ ಬಿಸಿ ಸಾಧ್ಯತೆ
  • ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು
  • ಬಂಧಿತರು ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಅವಕಾಶ, ಹೊರ ರಾಜ್ಯಗಳಲ್ಲೂ ತನಿಖೆ