ಬೆಂಗಳೂರು: ಈಗಾಗಲೇ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಮರುಪ್ರಸಾರ ಆರಂಭಿಸಿದೆ. ದರ್ಶನ್, ಜಗ್ಗೇಶ್, ಸುದೀಪ್, ಅಂಬರೀಶ್ ಸೇರಿ ಹಲವು ಘಟಾನುಘಟಿಗಳ ಜೀವನ ತೆರೆಮೇಲೆ ಕಾಣಿಸಿದೆ. ಇದೀಗ ಪುನೀತ್ ಮತ್ತು ಯಶ್ ಸರದಿ. ಹೌದು, ವಿಕೆಂಡ್ ವಿಥ್ ರಮೇಶ್ ನ ಮೊದಲ ಎಪಿಸೋಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೀವನ ಕಥೆ ಈ ಲಾಕ್ ಡೌನ್ ಸಮಯದಲ್ಲಿ ಜೀ಼ ಕನ್ನಡದಲ್ಲಿ ಮರು ಪ್ರಸಾರವಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಏರಿಳೀತದ ಜೀವನವೂ ವೀಕೆಂಡ್ನಲ್ಲಿ ಮತ್ತೊಮ್ಮೆ ಅನಾವರಣವಾಗಲಿದೆ. ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡ ಯಶ್, ಸಮಾಜಮುಖಿ ಕಾರ್ಯಗಳಿಂದ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಇಬ್ಬರು ಸ್ಟಾರ್ಗಳು ಇದೀಗ ಮತ್ತೆ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 25ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪುನೀತ್ ರಾಜ್‍ಕುಮಾರ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಯಶ್ ಎಪಿಸೋಡ್ ಪ್ರಸಾರವಾಗಲಿದೆ.