ಫೆಬ್ರವರಿ ತಿಂಗಳು ಬಂತೆಂದರೆ ಪ್ರೀತಿಯ ಚರ್ಚೆಯಾಗುತ್ತದೆ. ಅದರಲ್ಲೂ ಫೆಬ್ರವರಿ 14ರಂದು ಪ್ರೀತಿಯ ಬಗ್ಗೆ, ಪ್ರೇಮಿಗಳ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿಯಾಗುತ್ತದೆ. ಇದಕ್ಕೆ ಪ್ರತಿಯಾಗಿ, ಈ ಪ್ರೀತಿಯನ್ನು ಪ್ರೇಮಿಗಳಿಗೆ ಮತ್ತು ಕೇವಲ ಒಂದೇ ಒಂದು ದಿನಕ್ಕೆ ಯಾಕೆ ಸೀಮಿತಗೊಳಿಸಬೇಕು, ಪ್ರೀತಿ ಎಂದರೆ ಸರ್ವವ್ಯಾಪಿ ಎಂಬೆಲ್ಲ ಮಾತುಗಳು ಕೇಳಿಬರುತ್ತದೆ. ಇದನ್ನು ಚಂದನವನದ ಕೆಲವು ತಾರೆಯರು ಸಹ ಅನುಮೋದಿಸುತ್ತಾರೆ. ಯಾರೆಲ್ಲ ಏನು ಮಾತಾಡಿದ್ದಾರೆ ಎಂಬುದು ಒಮ್ಮೆ ನೋಡೋಣ ಬನ್ನಿ...
ನಮ್ಮನ್ನು ನಾವು ಪ್ರೀತಿಸಬೇಕು...
ಫೆಬ್ರವರಿ ಬರುತ್ತಿದ್ದಂತೆ ಎಲ್ಲರೂ ಪ್ರೀತಿ ಬಗ್ಗೆ ಮಾತನಾಡುತ್ತಾರೆ. ನಾನು ಸಿಂಗಲ್ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಮಗೆ ಅಂತ ನಮ್ಮ ಮನೆಯವರಿದ್ದಾರೆ, ಸ್ನೇಹಿತರಿದ್ದಾರೆ. ಹೀಗಿರುವಾಗ ಸಿಂಗಲ್ ಅನ್ನೋ ಮಾತು ಯಾಕೆ? ನಮ್ಮನ್ನೂ ಪ್ರೀತಿಸುವವರು ಇದ್ದಾರೆ. ಅವರಿಗೂ ನಮ್ಮ ಪ್ರೀತಿಯ ಅವಶ್ಯಕತೆ ಇದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವು ಪ್ರೀತಿಸಬೇಕು. ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಾನು ಸಿಂಗಲ್ ಎಂದು ನನಗೆ ಒಂಚೂರು ಅನಿಸಿಲ್ಲ. ನನ್ನ ಸುತ್ತ ಪ್ರೀತಿಸುವವರೇ ಹೆಚ್ಚಿರುವಾಗ ನನಗೆ ಆ ಪ್ರೀತಿ ಕೊರತೆ ಕಂಡುಬಂದಿಲ್ಲ. ಆ ಒಂದು ಘಳಿಗೆಗೂ ಸಮಯ ಬರುತ್ತದೆ. ನಮಗೆ ಅಂತ ದೇವರು ಒಬ್ಬರನ್ನು ಸೃಷ್ಟಿಸಿರುತ್ತಾನೆ. ಅದಕ್ಕಾಗಿ ಅವಸರ ಮಾಡುವ ಅಗತ್ಯ ಇಲ್ಲ. ಸದ್ಯ ನಮ್ಮ ಕನಸಿನ ಬೆನ್ನು ಹತ್ತುವ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು.
| ಕೃಷಿ ತಾಪಂಡ