ಕಾಫಿ ವಿತ್ ಕರಣ್ ಟಾಕ್ ಶೋದಲ್ಲಿ ಶೇರ್ ಷಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ.
ಮದುವೆ, ದಾಂಪತ್ಯ ಜೀವನದ ಗುಟ್ಟು ರಟ್ಟು ಮಾಡಿದ ಬಾಲಿವುಡ್ನ ಕ್ಯೂಟ್ ಕಪಲ್ಸ್.
ಮನೆಗೆ ಸಿನಿಮಾ ಕೆಲಸದ ವಿಚಾರಗಳನ್ನು ಎಳೆದು ತಂದು ಡಿಸ್ಕಸ್ ಮಾಡಲ್ಲ ಎಂದ ನಟ.
Sidharth-Kiara: 2018ರಲ್ಲಿ ಬಿಡುಗಡೆಯಾದ ಲಸ್ಟ್ ಸ್ಟೋರಿಸ್ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಸಿದ್ಧಾರ್ಥ್ ಮಲ್ಹೊತ್ರಾ ಮತ್ತು ಕಿಯಾರ ಅಡ್ವಾಣಿ ಜೋಡಿ..ನಂತರ ಒಟ್ಟಾಗಿದ್ದು, ಷೇರ್ ಷಾ ಸಿನಿಮಾಕ್ಕಾಗಿ. ಇಲ್ಲಿಂದ ಇವರ ಸ್ನೇಹ, ಪ್ರೀತಿ, ಡೇಟಿಂಗ್ ಶುರುವಾಗಿತ್ತು. 2021ರಲ್ಲಿ ಶುರುವಾದ ಇಬ್ಬರ ಪ್ರೇಮ ಪಯಣವು ದಾಂಪತ್ಯ ಜೀವನದೊಂದಿಗೆ ಆರಂಭವಾಗಿದ್ದು, 2023ರಲ್ಲಿ. ಸದ್ಯ ಈ ಜೋಡಿ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಕಾಫಿ ವಿತ್ ಕರಣ್ ಟಾಕ್ ಶೋದಲ್ಲಿ ಭಾಗಿಯಾಗಿದ್ದ ಅವರು, ಮದುವೆ ಜೀವನ, ಬೆಡ್ ರೂಂ ಗುಟ್ಟಿನ ಬಗ್ಗೆ ರಿವೀಲ್ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾಫಿ ವಿತ್ ಕರಣ್ ಸೀಸನ್ 9ರಲ್ಲಿ ಬಾಲಿವುಡ್ನ ಕ್ಯೂಟೆಸ್ಟ್ ಕಪಲ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಭಾಗಿಯಾಗಿದ್ದಾರೆ. ಈ ಎಪಿಸೋಡ್‌ನ ಹೊಸ ಪ್ರೋಮೋದಲ್ಲಿ, ದಂಪತಿ ತಮ್ಮ ಮದುವೆಯ ಮಧುರ ಕ್ಷಣ ಹಾಗೂ ದಾಂಪತ್ಯ ಜೀವನದ ಗುಟ್ಟು ಸೇರಿದಂತೆ ಹಲವು ವಿಚಾರವನ್ನು ಮಾತನಾಡಿದ್ದಾರೆ. ಇದರೊಂದಿಗೆ ಕರಣ್ ಜೊಹರ್ರ ತಮಾಷೆಯ ಮಾತು ಸಾಕಷ್ಟು ವೀಕ್ಷಣೆಗೆ ಕಾರಣವಾಗಿದೆ.
ಆಫ್ ಸ್ಕ್ರೀನ್ನಲ್ಲಿ ಯಾವುದಾದರೂ ಸೀನ್ಗಳನ್ನು ಇಬ್ಬರು ತಂದಿದ್ದೀರಾ ಎಂದು ಕೇಳಿದ ಕರಣ್ ಜೋಹರ್ ಅವರ ಮಾತಿಗೆ ದಂಪತಿ ಹೇಳಿದ್ದು ಹೀಗೆ, ನಾವು ಕೆಲಸದ ವಿಚಾರವನ್ನು ಎಂದಿಗೂ ನಮ್ಮ ಮನೆಗೆ ಮತ್ತು ಬೆಡ್‌ರೂಮ್‌ಗೆ ತರಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ವೈಯಕ್ತಿಕ ಜೀವನವನ್ನು ಕ್ಯಾಮೆರಾಗಳಿಂದ ದೂರವಿಡಲು ಬಯಸುವ ಬಗ್ಗೆ ಸಿದ್ಧಾರ್ಥ ಮಾತನಾಡಿದ್ದಾರೆ. ಆ ಮೂಲಕ ಸುಖ ಜೀವನದ ಗುಟ್ಟನ್ನು ರಟ್ಟು ಮಾಡಿದ್ದಾರೆ.
ನಿಮ್ಮ ಲೇಟ್ ನೈಟ್ಗಳು ಡಿನ್ನರ್ಗೆ ಮಾತ್ರ ಸೀಮಿತವಾಗಿಟ್ಟುಕೊಳ್ಳದೇ ಮತ್ತಿನ್ನೇನನ್ನು ಮಾಡುತ್ತೀರಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಿಯಾರ, ತಮ್ಮ ಬೇಬಿ ಬಂಪ್ ಅನ್ನು ತೋರಿಸುತ್ತಾ...ಇದು ಈಗಷ್ಟೇ ಆಯ್ತು ನೋಡಿ ಎಂದು ತಮಾಷೆ ಮಾಡಿದ್ದಾರೆ.
ಸಿದ್ಧಾರ್ಥ್ ಮತ್ತು ಕಿಯಾರಾ ಜೋಡಿ ಕಳೆದ ಅಕ್ಟೋಬರ್ 7 ರಂದು ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ದಂಪತಿಗಳು 2025 ರಲ್ಲಿ ತಮ್ಮ ಮೊದಲ ಮಗು ಮಗಳು ಸಾರಾಯಾಳನ್ನು ಸ್ವಾಗತಿಸಿದ್ದರು, (ಏಜೆನ್ಸೀಸ್).