ಸಿನಿವಾಣಿ

ಕೇವಲ 99 ರೂಪಾಯಿಗೆ ಈ ಹೊಸ ಕನ್ನಡ ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ನೋಡಿ..! |Movie Tickets

ಕರ್ನಾಟಕದಲ್ಲಿ ಸಿನಿಪ್ರೇಮಿಗಳಿಗೆ ಟಿಕೆಟ್​​ ದರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೊರ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮಲ್ಲಿ ಟಿಕೆಟ್​​​ ದರ ದುಪ್ಪಟ್ಟಾಗಿದೆ. ಈ ಬಗ್ಗೆ ಸರ್ಕಾರವೂ ತಲೆ ಕೆಡಿಸಿಕೊಂಡು ಕಡಿವಾಣ ಹಾಕುತ್ತಿಲ್ಲ. ದೊಡ್ಡ ಸಿನಿಮಾಗಳು ಬಂದಾಗ ನಾಲ್ಕು- ಐದು ಪಟ್ಟು ಟಿಕೆಟ್ ದರ ಹೆಚ್ಚಿಸೋದ್ರಿಂದ ಜನ ಮಲ್ಟಿಪ್ಲೆಕ್ಸ್​​​ ಕಡೆಗೆ ಮುಖವೇ ಹಾಕುತ್ತಿಲ್ಲ.

ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೂ ಕರ್ನಾಟಕ ಫಿಲ್ಮ್ ಚೇಂಬರ್ ಸಹ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ನಡುವೆ ಪಕ್ಷ ಟಿಕೆಟ್ ದರ ಕಮ್ಮಿ ಮಾಡಿದರೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಆಶಾಭಾವನೆ ಕೆಲವರದ್ದು.

ಯಾವುದೇ ಚಿತ್ರವನ್ನ ಕುಟುಂಬ ಸಮೇತರಾಗಿ ನಾಲ್ಕೂ ಜನ ತೆರಳಿ ವೀಕ್ಷಿಸಿಬೇಕೆಂದರೆ 1500 ರೂಪಾಯಿಯಿಂದ 2000 ರೂಪಾಯಿ ಖರ್ಚಾಗುತ್ತೆ. ಇದೇ ಕಾರಣಕ್ಕೆ ಚಿಕ್ಕ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ದೊಡ್ಡ ಚಿತ್ರಗಳು ಬಂದಾಗ ಮಾತ್ರ ನೋಡ್ತೀವಿ ಎನ್ನುಚ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ.

ಸದ್ಯ ಕನ್ನಡದ ಹೊಚ್ಚ ಹೊಸ ಕನ್ನಡ ಚಿತ್ರವನ್ನು ಬರೀ 99 ರೂಪಾಯಿಗೆ ನೋಡುವ ಅವಕಾಶ ಸಿಗುತ್ತಿದೆ. ಯಸ್​​, ನವೆಂಬರ್ 22ಕ್ಕೆ ಅನೀಶ್ ನಟನೆಯ 'ಆರಾಮ್ ಅರವಿಂದ್ ಸ್ವಾಮಿ' ತೆರೆಗೆ ಬರಲಿದೆ. ಈ ಚಿತ್ರವನ್ನ ಪ್ರೇಕ್ಷಕರು 99 ರೂಪಾಯಿ ಕೊಟ್ಟು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು ಎಂದು ಚಿತ್ರತಂಡ ಘೋಷಿಸಿದೆ.

ಹೌದು ಅನೀಶ್​ ನಟನೆಯ ಚಿತ್ರಕ್ಕೆ ಈ ಆಫರ್​​ 3 ದಿನಗಳ ಕಾಲ ಮಾತ್ರ ಇರುತ್ತದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಇಂಥಾದೊಂದು ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಈ ಆಫರ್ ಮೊದಲ 3 ದಿನಗಳ ಕಾಲ ಮಾತ್ರ ಇರುತ್ತದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಇಂಥಾದೊಂದು ಪ್ರಯತ್ನ ಮಾಡುತ್ತಿದೆ ಚಿತ್ರತಂಡ.

ಸದ್ಯ ಕನ್ನಡದ ಹೊಚ್ಚ ಹೊಸ ಕನ್ನಡ ಚಿತ್ರವನ್ನು ಬರೀ 99 ರೂಪಾಯಿಗೆ ನೋಡುವ ಅವಕಾಶ ಸಿಗುತ್ತಿದೆ.