Aarti Khetarpal:
ಶ್ರೀ ಕೃಷ್ಣನ ಬೃಂದಾವನ ಹೋಲುವ ಲೆಹಂಗಾ, ತುಳಸಿ ಕಂಠಿ, ಕೈಯಲ್ಲಿ ಕೃಷ್ಣನ ಭಾವಚಿತ್ರವಿದ್ದ ಬ್ಯಾಗ್, ಭಗವದ್ಗೀತೆಯ ಸಣ್ಣ ಪ್ರತಿ ಹೀಗೆ ಭಾರತದ ಧರ್ಮ ಸಂಸ್ಕೃತಿಯನ್ನು Cannes Film Festivalನಲ್ಲಿ ನೆರೆದಿದ್ದ ಸಾವಿರಾರು ಮಾಡೆಲ್ಗಳು, ಡೈರೆಕ್ಟರ್ಸ್, ಕ್ಯಾಮೆರಾ ಮೆನ್, ನಟ-ನಟಿಯರು ಹಾಗೂ ಸಿನಿಮಾ ರಂಗದವರ ಮುಂದೆ ಸಾರಿದ್ದು, (Aarti Khetarpal) ಭಾರತದ ನಟಿ ಹಾಗೂ ಮಾಡೆಲ್ ಆರತಿ ಖೇತರ್ಪಾಲ್.
ಯಾರಿ ಈ ಆರತಿ ಖೇತರ್ಪಾಲ್?
ರಾಗಿಣಿ ಎಂಎಂಎಸ್ ಮತ್ತು ಪ್ಯಾರ್ ಇಶ್ಕ್ ರೆಂಟ್ನಲ್ಲಿ ಮಿಂಚಿದ್ದ ಆರತಿಯವರು ಸದ್ಯ ಫ್ರ್ಯಾನ್ಸ್ನಲ್ಲಿ ಮೇ.12ರಿಂದ ಆರಂಭವಾಗಿರುವ ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವವೆಂದು ಪರಿಗಣಿಸಲಾಗಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ, ಭಾರತದ ಪವಿತ್ರ ಗ್ರಂಥ ಭಗವದ್ಗೀತೆ ಬಗ್ಗೆ ಸಾರಿದ್ದಾರೆ.
ಊರ್ವಶಿ ರೌಟೆಲಾ, ಆಲಿಯಾ ಭಟ್, ತಾರಾ ಸುತಾರಿಯಾ ಸೇರಿ ಗೌನ್, ಸೀರೆ ಲೆಹಂಗಾ ಸೇರಿದಂತೆ ಬೇರೆ ಬೇರೆ ರೀತಿಯ ಡ್ರೆಸ್ಸಿಂಗ್ ಸ್ಟೈಲ್ನಲ್ಲಿ ಅಥವಾ ಪಾಶ್ಚಿಮಾತ್ಯ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ. ಆರತಿ ಮಾತ್ರ ವೃಂದಾವನ ಶೈಲಿಯಿಂದ ಸ್ಫೂರ್ತಿ ಪಡೆದ ಲೆಹೆಂಗಾ ಧರಿಸಿ ಭಾರತೀಯರನ್ನು ಮುಗ್ಧಗೊಳಿಸಿದ್ದಾರೆ.
ಕೇನ್ಸ್ನಲ್ಲಿ ಆರತಿ ಭಾಗಿಯಾಗಿದ್ದೇಕೆ?
2026ರ ಗ್ರ್ಯಾಮಿ ಪ್ರಶಸ್ತಿಗೆ ಸೌಂಡ್ಸ್ ಆಫ್ ಕುಂಭ' ನಾಮನಿರ್ದೇಶನಗೊಂಡಿರುವ ಹಿನ್ನೆಲೆ, ಆ ಆಲ್ಬಂನಲ್ಲಿ ಕಾಣಿಸಿಕೊಂಡಿರುವ ವೃಂದಾವನ ಮೂಲದ ಕಲಾವಿದೆ ಆರತಿ ಖೇತರ್ಪಾಲ್ ಅವರು ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಈ ಮೂಲಕ ತಮ್ಮ ನಂಬಿಕೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಏನಿದೆ?
ಕೇನ್ಸ್ನಲ್ಲಿ ಭಾಗಿಯಾದ ಬಗ್ಗೆ ಆರತಿ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ದೇವರ ಮೇಲೆ ನಂಬಿಕೆ ಇಟ್ಟಿರುವ ಪ್ರತಿ ಮನುಷ್ಯನಿಗಾಗಿ ಎಂದು ಬರೆದುಕೊಂಡಿದ್ದಾರೆ. ನಮಗೆ ದೇವರ ನಾಮ ಹೇಳಿಕೊಡುವ ಪ್ರತಿಯೊಬ್ಬ ಬೋಧಕರಿಗೂ ಸಂತರಿಗೂ ಈ ನನ್ನ ದಿನ ಸಮರ್ಪಣೆ. ಭಗವದ್ಗೀತೆಯನ್ನು ರಚನೆ ಮಾಡಿದ ವೇದವ್ಯಾಸರಿಗೆ, ವೇದ ಗ್ರಂಥಗಳನ್ನು ರಕ್ಷಿಸಿದ ಪ್ರಕಾಶನ ಸಂಸ್ಥೆಗಳಿಗೆ. ಭಕ್ತಿಯನ್ನು ಫ್ಯಾಷನ್ ಆಗಿ ಸೃಷ್ಟಿ ಮಾಡಿ ವಿನ್ಯಾಸಕರಿಗೆ ಧನ್ಯವಾದ ಎಂದಿದ್ದಾರೆ.
ನನಗೆ ಕೃಷ್ನನನ್ನು ಹಾಗೂ ಆತನ ನಾಮಸ್ಮರಣೆ ಸ್ಮರಿಸಲು ಕಲಿಸಿದ ತಾಯಿ, ನನ್ನ ಯಶಸ್ಸಿನ ಶಕ್ತುಯಾದ ಸಹೋದರ, ನನ್ನ ಕೆಲಸಗಳನ್ನು ನಿರ್ವಹಿಸಲು ರಾತ್ರಿಯೆಲ್ಲಾ ಎಚ್ಚರಿರುವ ನನ್ನ ಸೋದರಿಗೆ ಚಲನಚಿತ್ರೋತ್ಸವದಲ್ಲಿ ಯಾರ ಸಿನಿಮಾ ಪ್ರದರ್ಶನಗೊಳ್ಳುತ್ತಿದೆಯೋ ಅಂತಹ ನನ್ನ ತಂದೆಗೆ ಈ ಸಂಭ್ರಮ ಅರ್ಪಿತ. ಹೇ ಕೃಷ್ಣ ನೀನು ನೀಡುವ ಪ್ರತಿ ವೇದಿಯನ್ನು ನಾನು ಪ್ರಾಮಾಣಿಕವಾಗಿ ಬಳಕೆ ಮಾಡಿಕೊಳ್ಳಳುತ್ತೇನೆ ಇದು ನನ್ನ ಜವಾಬ್ದಾರಿ ಎಂದಿದ್ದಾರೆ, (ಏಜೆನ್ಸೀಸ್).