ಚಿತ್ರದುರ್ಗದೊಂದಿಗೆ ಡಾ. ವಿಷ್ಣುವರ್ಧನ್ ಅವರಿಗೆ ಅವಿನಾಭಾವ ನಂಟಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆ ನಂಟು ಈಗಲೂ ಮುಂದುವರಿದಿದೆ. ವಿಷ್ಣುವರ್ಧನ್ ಅವರ ಅಪರೂಪ ಎನ್ನಬಹುದಾದ ಕಲಾಕೃತಿಯೊಂದನ್ನು ಕೋಟೆನಾಡಿನ ಅಭಿಮಾನಿಯೊಬ್ಬರು ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿದ್ದಾರೆ.
ಸದ್ಯ ಬೆಂಗಳೂರಲ್ಲಿರುವ ದುರ್ಗದ ಜಯಲಕ್ಷ್ಮೀ ಬಡಾವಣೆಯ ಇಂಜಿನಿಯರಿಂಗ್ ಪದವೀಧರೆ ಐಶ್ವರ್ಯಾ, 2 ದಿನ ಸತತ ಪ್ರಯತ್ನದಿಂದ ಐದು ಕಿ.ಮೀ. ಉದ್ದದ ದಾರವನ್ನು ಬಳಸಿ ವಿಷ್ಣು ಭಾವಚಿತ್ರವನ್ನು ರಚಿಸಿದ್ದಾರೆ. ಹಲಗೆಯೊಂದರ ಮೇಲೆ ವೃತ್ತಾಕಾರದಲ್ಲಿ ಚಿಕ್ಕ ಮೊಳೆಗಳನ್ನು ಬಳಸಿಕೊಂಡು ಒಂದು ಬದಿಯಿಂದ ಮತ್ತೊಂದು ಬದಿಗೆ ದಾರ ಎಳೆಯುವ ಮೂಲಕ ಪೂರ್ಣ ಪ್ರಮಾಣದಲ್ಲಿ ದಾರದಿಂದ ಚಿತ್ರ ರಚಿಸಿದ್ದಾರೆ.
ಸತತ ಒಂದು ವರ್ಷದ ಅಭ್ಯಾಸದೊಂದಿಗೆ ಸ್ಟ್ರಿಂಗ್ಆರ್ಟ್ ಕರಗತ ಮಾಡಿಕೊಂಡಿರುವ ಐಶ್ವರ್ಯಾ, ಇನ್ನೇನು ಆ ಕಲಾಕೃತಿಯನ್ನು ನಟ ಅನಿರುದ್ಧ್ ಜತ್ಕರ್ ಅವರಿಗೆ ತಲುಪಿಸಲಿದ್ದಾರೆ.