ಸಿನಿವಾಣಿ

ಸಿಎಂ ಶ್ಯಾಡೋನಲ್ಲಿ ವಿನೋದ್ ಪ್ರಭಾಕರ್

kumarvrl

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿನೋದ್ ಪ್ರಭಾಕರ್ ಡಿಫರೆಂಟ್ ಆಗಿರುವ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದು, ಆ ಸಾಲಿಗೆ ‘ಶ್ಯಾಡೋ’ ಕೂಡ ಸೇರಿಕೊಂಡಿದೆ.

ಈ ಚಿತ್ರದಲ್ಲಿ ಅವರು ಸಿಎಂ ಆಗಿರಲಿದ್ದಾರಂತೆ. ಆದರೆ, ಅವರು ಚೀಫ್ ಮಿನಿಸ್ಟರ್ ಅಲ್ಲ, ಕಾಮನ್ ಮ್ಯಾನ್. ಸಮಾಜಘಾತುಕ ಶಕ್ತಿಗಳ ವಿರುದ್ಧ ಒಬ್ಬ ಸಾಮಾನ್ಯ ಮನುಷ್ಯ ಹೋರಾಟ ಮಾಡುವ ಕಥೆ ಇರುವ ಈ ಚಿತ್ರವನ್ನುತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಬಳಿ ಸಹಾಯಕರಾಗಿದ್ದ ರವಿ ಗೌಡ ನಿರ್ದೇಶಿಸಿದ್ದಾರೆ.

‘ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರ. ನಾನು ಇದುವರೆಗೂ ನಟಿಸಿರುವ ಪಾತ್ರಗಳಲ್ಲಿ ಇದು ಕೊಂಚ ವಿಭಿನ್ನವಾಗಿದೆ. ಹಿರಿಯ ನಟ ಶರತ್ ಲೋಹಿತಾಶ್ವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿದ್ದಾರೆ. ಅವರು ಚಿತ್ರಕ್ಕೆ ಮತ್ತೊಬ್ಬ ನಾಯಕ ಎಂದರೆ ತಪ್ಪಿಲ್ಲ’ ಎನ್ನುತ್ತಾರೆ ವಿನೋದ್ ಪ್ರಭಾಕರ್. ‘ಶ್ರೀಕನಕದುರ್ಗ’ ಬ್ಯಾನರ್​ನಡಿ ಈ ಚಿತ್ರವನ್ನು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ. ಮಾರ್ಚ್​ನಲ್ಲಿ ಸಿನಿಮಾ ತೆರೆ ಕಾಣಿಸಲು ಚಿತ್ರತಂಡ ಕೆಲಸ ಮಾಡುತ್ತಿದೆ. ಶೋಭಿತ ರಾಣಿ, ವಿನೋದ್ ಪ್ರಭಾಕರ್​ಗೆ

ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಕೆಲ ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಂಭವವಿದೆ.