ಸಿನಿವಾಣಿ

‘ಮಹಾನ್’ ವಿಜಯ್ ರಾಘವೇಂದ್ರ: ಪಿ.ಸಿ.ಶೇಖರ್ ನಿರ್ದೇಶನದ ರೈತ ಕಾಳಜಿ ಚಿತ್ರದಲ್ಲಿ ‘ಚಿನ್ನಾರಿ ಮುತ್ತ’

ಬೆಂಗಳೂರು: ‘ರೋಮಿಯೋ’, ‘ಸ್ಟೈಲ್‌ಕಿಂಗ್’, ‘ರಾಗ’, ‘ಲವ್ ಬರ್ಡ್ಸ್’ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ಸದ್ಯ ಡಬಲ್ ಖುಷಿಯಲ್ಲಿದ್ದಾರೆ. ಅವರ ನಿರ್ದೇಶನದ ನಕುಲ್ ಗೌಡ ಹಾಗೂ ಮಾನ್ವಿತಾ ಹರೀಶ್ ಮುಖ್ಯಭೂಮಿಕೆಯಲ್ಲಿರುವ ‘ಬ್ಯಾಡ್’ ಚಿತ್ರವು ಕಳೆದ ಮಾ.31ರಂದು ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆಯೇ, ಶೇಖರ್ ತಮ್ಮ ನಿರ್ದೇಶನದ ಮುಂದಿನ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಆ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ. ಯುಗಾದಿ ಹಬ್ಬದಂದು ನಟ ಶಿವರಾಜ್‌ಕುಮಾರ್ ಟೈಟಲ್ ಅನೌನ್ಸ್ ಮಾಡಿ ಶುಭ ಕೋರಿದರು. ಸದ್ಯ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ನಟ ವಿಜಯ್ ರಾಘವೇಂದ್ರ ‘ಮಹಾನ್’ ನಾಯಕನಾಗಿ ಅಭಿನಯಿಸಲಿದ್ದಾರೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗವನ್ನು ಸದ್ಯದಲ್ಲೇ ಚಿತ್ರತಂಡ ಘೋಷಿಸಲಿದೆಯಂತೆ. ಚಿತ್ರದ ಕುರಿತಂತೆ ನಿರ್ದೇಶಕ ಪಿ.ಸಿ.ಶೇಖರ್, ‘ಇದು ರೈತರ ಕಷ್ಟದ ಹಾಗೂ ಹೋರಾಟದ ಕಥೆಯಲ್ಲ. ಬದಲಾಗಿ ಇದು ಅವರ ಸ್ವಾಭಿಮಾನದ ಕಥೆ. ರೈತನಲ್ಲೂ ಒಬ್ಬ ಸ್ವಾಭಿಮಾನಿ ಇದ್ದಾನೆ ಎಂಬುದನ್ನು ಪಾಸಿಟಿವ್ ಆಗಿ ತೋರಿಸುವುದೇ ‘ಮಹಾನ್’ ಪ್ರಯತ್ನ. ಶಿಕ್ಷಣ, ಆರೋಗ್ಯ ಹಾಗೂ ಆಹಾರ ಈ ಮೂರು ಮನುಷ್ಯನ ಮೂಲ ಅಗತ್ಯಗಳು. ಈಗಾಗಲೇ ಶಿಕ್ಷಣ, ಆರೋಗ್ಯ ವ್ಯಾಪಾರೀಕರಣಗೊಂಡಿವೆ. ಆದರೆ, ರೈತ ಮಾತ್ರ ಹಾಗೆಯೇ ಹಿಂದುಳಿದಿದ್ದಾನೆ. ಬೆಳೆಯ ಬಹುತೇಕ ಲಾಭಾಂಶ ದಲ್ಲಾಳಿ ಹಾಗೂ ಮಾರುಕಟ್ಟೆಯವರ ಕೈ ಸೇರುತ್ತದೆ. ರೈತನಿಗೆ ದಕ್ಕುತ್ತಿಲ್ಲ. ಹಾಗಾಗಿ, ರೈತ ತನ್ನ ಲಾಭವನ್ನು ಹೇಗೆ ಪಡೆಯುತ್ತಾನೆ ಎಂಬುದೇ ಒಂದು ಪಾಸಿಟಿವ್ ಆಗಿ ತೋರಿಸುವ ಪ್ರಯತ್ನ. ರಿಯಾಲಿಸ್ಟಿಕ್ ಆಲೋಚನೆಗಳಿವೆ. ಇದಕ್ಕಾಗಿ ಹಲವಾರು ರೈತರು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರನ್ನು ಸಂಪರ್ಕಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

ಲಾಯರ್ ಆದ ‘ಚಿನ್ನಾರಿ ಮುತ್ತ’: ‘ಮಹಾನ್’ ಚಿತ್ರಕ್ಕೆ ನಾಯಕನಾಗಿ ವಿಜಯ್ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಇಲ್ಲಿ ಅವರು ಲಾಯರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಜಯ್ ಆಯ್ಕೆ ಬಗ್ಗೆ ಪಿ.ಸಿ.ಶೇಖರ್, ‘ಈ ಸಿನಿಮಾದಲ್ಲಿ ಆ್ಯಕ್ಟಿಂಗ್ ಪರ್ಪಾಮೆನ್ಸ್‌ಗೆ ಹೆಚ್ಚು ಆದ್ಯತೆ ಇದೆ. ಹೊಸಬರಿಗೆ ಅವಕಾಶ ನೀಡಿದರೆ ಅಷ್ಟು ಹೊಂದಲ್ಲ ಎಂದು ವಿಜಯ್ ರಾಘವೇಂದ್ರ ಅವರನ್ನು ಸಂಪರ್ಕಿಸಿದೆವು. ಈ ಪಾತ್ರಕ್ಕೆ ಅವರೇ ಒಪ್ಪಿಕೊಂಡರು. ಇಲ್ಲಿ ಅವರು ಲಾಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಚಿತ್ರೀಕರಣ ಮಂಡ್ಯದಲ್ಲಿ ನಡೆಯಲಿದ್ದು, ಇದೇ ತಿಂಗಳಾಂತ್ಯಕ್ಕೆ ಶೂಟಿಂಗ್ ಆರಂಭಿಸಲಿದ್ದೇವೆ. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿಬರಲಿದೆ’ ಎನ್ನುತ್ತಾರೆ.
‘ಮಹಾನ್’ ಚಿತ್ರದಲ್ಲಿ ಮನರಂಜನೆ ಜತೆಗೆ ಒಂದು ಸಂದೇಶವು ಇರಲಿದೆ. ನಟ ಶಿವರಾಜಕುಮಾರ್ ಅವರು ಟೈಟಲ್ ಅನೌನ್ಸ್ ಮಾಡಿ, ಚಿತ್ರದ ಕಥೆ ಬಗ್ಗೆ ಖುಷಿವ್ಯಕ್ತಪಡಿಸಿದ್ದಾರೆ. ರೈತರ ಕಾಳಜಿ ಕುರಿತ ವಿಭಿನ್ನ ಕಥೆ ಇದಾಗಲಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಪಾತ್ರ ಇರಲಿದೆ. ನಾನು ಕೂಡ ಈ ಪಾತ್ರಕ್ಕಾಗಿ ಕಾತುರನಾಗಿದ್ದೇನೆ. ವಿಜಯ್ ರಾಘವೇಂದ್ರ, ನಟ