Leaked pictures of Sai Pallavi, Vijay Sethupathi shooting for Mani Ratnam
- ಹೊಸ ಲವ್ ಸ್ಟೋರಿ ಸಿನಿಮಾ ನಿರ್ದೇಶನದಲ್ಲಿ ಮಣಿರತ್ನಂ ಬ್ಯುಸಿ.
- ಕೋಲ್ಕತ್ತಾದ ಹೌರಾ ಬ್ರಿಡ್ಜ್ ಮೇಲೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಸಿನಿಮಾ ಶೂಟಿಂಗ್, ಫೋಟೋಗಳು ವೈರಲ್.
- 96 ಸಿನಿಮಾದಂತೆ ಕಾಣುತ್ತಿದೆ ಎಂದ ವಿಜಯ್ ಸೇತುಪತಿ ಫ್ಯಾನ್ಸ್.
ರೋಜಾ, ನಾಯಗನ್, ಬಾಂಬೆ , ಅಲೈಪಾಯುದೆ, ಬಾಂಬೆ, ಕನ್ನತಿಲ್ ಮುತ್ತಮಿತ್ತಲ್ನಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಮಣಿರತ್ನಂರಿಗೆ ಥಗ್ ಲೈಫ್ ಮಾತ್ರ ಅಷ್ಟಾಗಿ ಹೆಸರು ತಂದುಕೊಟ್ಟಿಲ್ಲ. ಈ ಮಧ್ಯೆ ಮತ್ತೆ ತಮಿಳು ಸಿನಿಮಾ ರಂಗದಲ್ಲಿ ಪುಟಿದೇಳಲು ಖ್ಯಾತ ನಿರ್ದೇಶಕ ಸಜ್ಜಾಗಿದ್ದಾರೆ.
ಹೌದು, ಮಣಿರತ್ನಂ ನಿರ್ದೇಶನದ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅಭಿನಯದ ಮುಂಬರುವ ಚಿತ್ರದ, ಶೂಟಿಂಗ್ ಚಿತ್ರಗಳು ಸೋರಿಕೆಯಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನೇಕ ಅಭಿಮಾನಿಗಳು ಫೋಟೋಗಳನ್ನು ನೋಡಿದ ನಂತರ ಸೇತುಪತಿ ಅವರ 96 ಅನ್ನು ನೆನಪಿಸಿಕೊಂಡರೆ, ಇನ್ನೂ ಕೆಲವರು ಇದು ಒಳ್ಳೆಯ ಲವ್ಸ್ಟೋರಿ ಸಿನಿಮಾ ಆಗಲಿದೆ ಎಂದಿದ್ದಾರೆ.
ಹೌರಾ ಬ್ರಿಡ್ಜ್ ಮೇಲೆ ಶೂಟಿಂಗ್
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಕೋಲ್ಕತ್ತಾದ ಹೌರಾ ಬ್ರಿಡ್ಜ್ ಮೇಲೆ ನಟ ವಿಜಯ್ ಸೇತುಪತಿ ಹಾಗೂ ಸಾಯಿಪಲ್ಲವಿಯವರನ್ನೊಳಗೊಂಡ ಸಿನಿಮಾವೊಂದರ ಶೂಟಿಂಗ್ ಆಗುತ್ತಿದ್ದು, ಅದಕ್ಕೆ ತಮಿಳುನಾಡಿನ ಖ್ಯಾತಿಯ ಡೈರೆಕ್ಟರ್ ಮಣಿರತ್ನಂ ನಿರ್ದೇಶಿಸುತ್ತಿರುವ ವಿಡಿಯೋಗಳು, ಫೋಟೋಗಳು ವೈರಲ್ ಆಗಿದೆ.
ನೇರಳೆ ಬಣ್ಣದ ಬಟ್ಟೆ ಧರಿಸಿ, ಡೈರೆಕ್ಷನ್ ನೀಡುತ್ತಿದ್ದರೆ, ಇತ್ತ ಕಾಲೇಜ್ ಹುಡುಗನಂತೆ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ, ಜೀನ್ಸ್ ತೊಟ್ಟು ವಿಜಯ್ ಸೇತುಪತಿ ಮಿಂಚಿದ್ದಾರೆ. ಇನ್ನೂ ಗಾಢ ಕೆಂಪು ಬಣ್ಣದ ಮರೂನ್ ರೀತಿಯ ಗೌನ್ ತೊಟ್ಟು, ಕೂದಲು ಫ್ರೀ ಬಿಟ್ಟು, ಸಿಂಪಲ್ ಲುಕ್ನಲ್ಲಿ ಸಾಯಿಪಲ್ಲವಿ ಕಾಣಿಸಿಕೊಂಡಿದ್ದಾರೆ. ಇಬ್ಬರು ರಸ್ತೆಯಲ್ಲಿ ಒಟ್ಟಾಗಿ ನಡೆಯುತ್ತಿರುವುದು. ನಿಲ್ಲುವಂತೆ ಸೂಚನೆ ನೀಡುತ್ತಿರುವ ಫೋಟೋಗಳು ಕಾಣಿಸಿಕೊಂಡಿವೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಎಂಥ ಚಂದ ಇದೆ, ಇದು ಲೀಕ್ ಆದ ವರ್ಷನ್ ಆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಯಾವ ಸಿನಿಮಾ ಅನ್ನೋ ಸುಳಿವಿಲ್ಲ
ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಈ ಸಿನಿಮಾ ಹೆಸರೇನು ಎನ್ನುವ ಬಗ್ಗೆ ಯಾರಿಗೂ ಅಂದಾಜಿಲ್ಲ. ಆದರೆ, ಇದೊಂದು ಲವ್ ಸ್ಟೋರಿ ಸಿನಿಮಾವಾಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಚರ್ಚೆಗಳ ಮಧ್ಯೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ, ಅದು ಮಾರ್ಚ್‌ನಲ್ಲಿ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸುವುದನ್ನು ದೃಢಪಡಿಸಿ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಮಣಿರತ್ನಂ ನಿರ್ದೇಶನದ ಈ ಸಿನಿಮಾಕ್ಕೆ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ ಎನ್ನುವ ಮಾಹಿತಿಯೂ ಪೋಸ್ಟರ್ನಲ್ಲಿ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಈ ಪಟಗಳು 96 ಸಿನಿಮಾವನ್ನು ನೆನಪು ಮಾಡ್ತಿದೆ ಎಂದು ಬರೆದುಕೊಂಡಿದ್ದಾರೆ. ಮಣಿರತ್ನಂ ಅವರು ಮತ್ತೆ ಪ್ರೇಮಕಥೆಯೊಂದಿಗೆ ಕಂಬ್ಯಾಕ್ ಆಗ್ತಿರೋದು ನಿಜಕ್ಕೂ ಸಂತೋಷ ಎಂದು ಬರೆದುಕೊಂಡಿದ್ದಾರೆ.
ಚೆಕ್ಕ ಚಿವಂತ ವಾನಮ್ ಸಿನಿಮಾ 2018ರಲ್ಲಿ ರಿಲೀಸ್ ಆಗಿತ್ತು. ವಿಜಯ್ ಸೇತುಪತಿ ಅವರೇ ನಾಯಕನಾಗಿದ್ದರು. ಮಣಿರತ್ನಂ ಅವರು ನಿರ್ದೇಶನದ ಹೊಣೆ ಹೊತ್ತಿದ್ದರು. ಸದ್ಯ ಎರಡನೇ ಬಾರಿಗೆ ಅವರೊಂದಿಗೆ ವಿಜಯ್ ಸೇತುಪತಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸಾಯಿಪಲ್ಲವಿ ಅವರಿಗೆ ಇದು ಮೊದಲನೇ ಸಿನಿಮಾ.
ಏಕ್ ದಿನ್ ನಂತರ ಹಿಂದಿ ಮಾತನಾಡುವ ವಿಚಾರವಾಗಿ ಸಾಕಷ್ಟು ಟ್ರೋಲ್ಗೊಳಗಾದ ಸಾಯಿಪಲ್ಲವಿ ಅವರಿಗೆ ರಾಮಾಯಣದಲ್ಲಿ ಸೀತಾ ಪಾತ್ರ ಸಿಕ್ಕಿದ್ದ ವಿರುದ್ಧವೂ ಆಕ್ಷೇಪವಿತ್ತು. ಈ ಮಧ್ಯೆ ಅವರು ಸೌತ್ ಇಂಡಿಯಾ ಸಿನಿಮಾಗೆ ಕಂಬ್ಯಾಕ್ ಆಗಿ ಹಿಟ್ ಕೊಡಲಿದ್ದಾರಾ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).