ಸಿನಿವಾಣಿ

ರಾಘು ಪ್ರಾರಂಭ: ಅಣ್ಣನ ಚಿತ್ರಕ್ಕೆ ತಮ್ಮನ ಕ್ಲಾಪ್​

ಬೆಂಗಳೂರು: ವಿಜಯ್​ ರಾವೇಂದ್ರ, "ರಾಘು' ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಕಳೆದ ತಿಂಗಳ ಸುದ್ದಿ. ಈಗ ಚಿತ್ರದ ಮುಹೂರ್ತ ಸದ್ದಿಲ್ಲದೆ ಮುಗಿದಿದೆ.

ಅಣ್ಣನ ಚಿತ್ರಕ್ಕೆ ಶ್ರೀಮುರಳಿ ಕ್ಲಾಪ್​ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. "ಆನ', "ಬ್ಯಾಂಗ್​' ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆನಂದ್​ ರಾಜ್​, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದರಲ್ಲಿ ವಿಜಯ್​ ರಾವೇಂದ್ರ ಕಾಣಿಸಿಕೊಳ್ಳುತ್ತಿದ್ದಾರಂತೆ. ಪಾತ್ರ ಮತ್ತು ಚಿತ್ರದ ಕಥೆಯೇನು ಎಂಬುದನ್ನು ಗೌಪ್ಯವಾಗಿಯೇ ಇಟ್ಟ ವಿಜಯ್​ ರಾವೇಂದ್ರ, ಚಿತ್ರಕ್ಕೆ "ರಾಘು' ಎಂಬ ಹೆಸರಿಟ್ಟಿದ್ದೇಕೆ ಎಂದು ವಿವರಿಸಿದರು.

"ರಾವೇಂದ್ರ ಎನ್ನುವವರಿಗೆ ಸಹಜವಾಗಿಯೇ ರಾು ಎಂದು ಪ್ರೀತಿಯಿಂದ, ಆತ್ಮೀಯವಾಗಿ ಕರೆಯಲಾಗುತ್ತದೆ. ನನ್ನನ್ನು ಕೆಲವರು ರಾು ಎನ್ನುತ್ತಾರೆ. ನಿಜ ಹೇಳಬೇಕೆಂದರೆ, ಈ ಟೈಟಲ್​ ಇಟ್ಟುಕೊಂಡು ಅವರು ಕಥೆ ಹೇಳಲಿಲ್ಲ. ಮೊದಲು ಕಥೆ ಹೇಳಿದರು. ಕಥೆಗೆ ಯಾವ ಶೀರ್ಷಿಕೆ ಸರಿ ಹೋಗುತ್ತದೆ ಎಂದು ಯೋಚಿಸಿದಾಗ, ಈ ಹೆಸರು ಹೊಳೆಯಿತು. ಕಳೆದ ಎಂಟ್ಹತ್ತು ವರ್ಷಗಳಲ್ಲಿ ಜನರಿಗೆ ಬರೀ ವಿಜಯ್​ ರಾವೇಂದ್ರ ಅಲ್ಲದೆ, ರಾು ಆಗಿ ಹತ್ತಿರವಾಗುತ್ತಿದ್ದೇನೆ. ಟಿವಿ ಕಾರ್ಯಕ್ರಮಗಳಿಂದ ಚಿರಪರಿಚಿತನಾಗಿದ್ದೇನೆ. ಆ ಟೈಟಲ್​ನ್ನು ಚಿತ್ರಕ್ಕೆ ಇಟ್ಟರೆ, ಜನರನ್ನು ರೀಚ್​ ಮಾಡುವುದು ಸ್ವಲ್ಪ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಈ ಹೆಸರಿಟ್ಟಿದ್ದೇವೆ' ಎನ್ನುತ್ತಾರೆ ವಿಜಯ್​ ರಾವೇಂದ್ರ.

ಶ್ರೀಮುರಳಿಗೂ ಚಿತ್ರದ ಟೈಟಲ್​ ಬಹಳ ಇಷ್ಟವಾಯಿತಂತೆ. ಇದೊಂದು ಎನರ್ಜಿ ಇರುವ ತಂಡ ಎಂದು ಮಾತು ಶುರು ಮಾಡಿದ ಅವರು, "ಈ ಎನರ್ಜಿ ಚಿತ್ರ ಮುಗಿಯುವವರೆಗೂ ಇರಲಿ. ಒಳ್ಳೆಯ ಚಿತ್ರ ಮಾಡಿದಾಗ, ಅಭಿಮಾನಿಗಳು ಯಾವತ್ತೂ ಕೈಬಿಟ್ಟಿಲ್ಲ. ಅವರು ಪ್ರೋತ್ಸಾಹ ಕೊಟ್ಟಿದ್ದಾರೆ. ಈ ಸಿನಿಮಾದಿಂದ ನಮ್ಮಣ್ಣಂಗೆ ಒಳ್ಳೆಯದಾಗಲಿ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸುತ್ತಾರೆ. ರಣ್ವಿತ್​ ಶಿವಕುಮಾರ್​ ಮತ್ತು ಅಭಿಷೇಕ್​ ಕೋಟ ಜತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಉದಯ್​ ಲೀಲಾ ಛಾಯಾಗ್ರಹಣ ಮತ್ತು ಅಭಿಷೇಕ್​ ಕೋಟ ಸಂಗೀತವಿದೆ.