ವಿಜಯ್​​-ಸಂಗೀತಾ ಜೋಡಿ, ನಟಿ ತ್ರಿಷಾ  
ಸಿನಿವಾಣಿ

ಸಂಗೀತಾ-ವಿಜಯ್ ಒಂದಾಗಲು ತಾಯಿ ಪಣ! ತ್ರಿಷಾ ಜೊತೆ ಹೆಸರು ಕೇಳಿಬಂದ ಬೆನ್ನಲ್ಲೇ ಈ ನಿರ್ಧಾರ?

ಪ್ರಮುಖ ಮುಖ್ಯಾಂಶಗಳು

  • ವಿಜಯ್​-ಸಂಗೀತಾ ವಿಚ್ಚೇದನ ಪ್ರಕರಣಕ್ಕೆ ತಿರುವು
  • ಸೊಸೆ-ಮಗನನ್ನು ಒಂದಾಗಿಸಲು ತಾಯಿ ಪಣ
ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದೆ. ದಾಂಪತ್ಯ ಜೀವನದಲ್ಲಿ ಉಂಟಾದ ಕೆಲವು ಮನಸ್ತಾಪಗಳಿಂದ ಡಿವೋರ್ಸ್​ ಪಡೆಯಲು ಮುಂದಾದ ಸಂಗೀತಾರನ್ನು ಇದೀಗ ವಿಜಯ್​ ಜೊತೆಗೆ ಒಂದು ಮಾಡಲು ಸ್ವತಃ ವಿಜಯ್​ ತಾಯಿಯೇ ಮುಂದಾಗಿದ್ದಾರೆ ಎಂಬ ಸುದ್ದಿಗಳು ಸದ್ಯ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ವಿಜಯ್ ಜೊತೆಗೆ ಸುತ್ತಾಟ, ಮದುವೆ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಇಂತಹ ಊಹಾಪೋಹಗಳು ನಿಜ ಎಂಬುದನ್ನು ಒತ್ತಿ ಹೇಳುತ್ತಿವೆ.
ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ನಟಿ ತ್ರಿಷಾ ಜೊತೆಗಿನ ಅಕ್ರಮ ಸಂಬಂಧದ ಆರೋಪ ಹೊರಿಸಿ, ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಸದ್ಯ ವಿಚ್ಛೇದನ ಪ್ರಕರಣ ಕೋರ್ಟ್​ ಅಂಗಳದಲ್ಲಿದ್ದು, ವಿಚಾರಣೆ ಕೂಡ ನಡೆದಿದೆ. ಇದರ ನಡುವೆ ತ್ರಿಷಾ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳನ್ನು ಎಗ್ಗಿಲ್ಲದೆ ಮುಂದುವರಿಸಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯ್​ ತಾಯಿ, ಸಂಗೀತಾ ಮತ್ತು ಮಗನನ್ನು ಒಂದಾಗಿಸಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಸದ್ದು ಮಾಡುತ್ತಿವೆ.
ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಸೇರಿ ಕುಟುಂಬ ಸದಸ್ಯರ ಮಧ್ಯಸ್ಥಿಕೆಯಿಂದಾಗಿ ಸ್ಟಾರ್​ ನಟನ ದಾಂಪತ್ಯದಲ್ಲಿನ ಬಿರುಕು ಇತ್ಯರ್ಥವಾಗಲಿದೆ ಎಂದು ಕೆಲವು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಕೋರ್ಟ್​ಗೆ ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಲಂಡನ್‌ನಲ್ಲಿದ್ದ ಸಂಗೀತಾ ಈಗ ಚೆನ್ನೈ ತಲುಪಿದ್ದಾರೆ ಎಂದು ಒಂದಷ್ಟು ವರದಿಗಳು ಬಲವಾಗಿ ತಿಳಿಸಿವೆ. ಜೂನ್ 22ರಂದು ಬರುವ ನಟನ ಹುಟ್ಟುಹಬ್ಬದಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದೂ ಹೇಳಲಾಗಿದೆ. ಆದ್ರೆ, ಇದೆಷ್ಟು ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).