ಜಗತ್ತಿನಲ್ಲಿ ಏನೆಲ್ಲಾ ಸ್ಪರ್ಧೆಗಳಿರುತ್ತವೆ, ಯಾವೆಲ್ಲಾ ವಿಷಯಗಳ ಬಗ್ಗೆ ಟಾಪ್ ಟೆನ್ ಕೌಂಟ್ ಮಾಡಲಾಗುತ್ತದೆ ಎಂದು ಹೇಳುವುದು ಕಷ್ಟ. ಈಗ್ಯಾಕೆ ಈ ವಿಷಯ ಎಂದರೆ, ಬಾಲಿವುಡ್ ನಟ ವಿದ್ಯುತ್ ಜಾಮ್ವಾಲ್ ಸಹ ಒಂದು ವಿಚಿತ್ರ ಟಾಪ್ ಟೆನ್ನಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಇಷ್ಟಕ್ಕೂ ವಿದ್ಯುತ್ ಯಾವ ಟಾಪ್ ಟೆನ್ನಲ್ಲಿ ಒಬ್ಬರಾಗಿದ್ದಾರೆ ಎಂಬ ಪ್ರಧ್ನೆ ಬರುವುದು ಸಹಜ. '10 ಪೀಪಲ್ ಯೂ ಡೋಂಟ್ ವಾಂಟ್ ಟು ಮೆಸ್ ವಿಥ್' ಎಂಬ ಟಾಪ್ ಟೆನ್ ಇದೆ. ಇದರಲ್ಲಿ ನೀವು ಸುಖಾಸುಮ್ಮನೆ ಕಿರಿಕ್ ಮಾಡಿಕೊಳ್ಳಲು ಇಷ್ಟಪಡದಿರುವ 10 ಬಲಾಢ್ಯರ ಪಟ್ಟಿ ಇದೆ. ಈ 10 ಜನರ ಪೈಕಿ ಭಾರತದಿಂದ ವಿದ್ಯುತ್ ಜಾಮ್ವಾಲ್ ಸಹ ಒಬ್ಬರಾಗಿದ್ದಾರೆ.
ವಿದ್ಯುತ್ ಜಾಮ್ವಾಲ್ ಅವರ ದೇಹವನ್ನು ನೋಡಿ, ಇದು ಬರೀ ಬಾಡಿ ಬಿಲ್ಡರ್ಗಳ ಪಟ್ಟಿ ಎಂದುಕೊಳ್ಳಬೇಡಿ. ಇದು ಖಂಡಿತಾ ಬಾಡಿ ಬಿಲ್ಡರ್ಗಳ ಅಥವಾ ದೈಹಿಕವಾಗಿ ಬಲಾಢ್ಯರ ಪಟ್ಟಿಯಲ್ಲ. ಅವರೆಲ್ಲಾ ದೇಹ ಹುರಿಗೊಳಿಸಿದ್ದಾರೆ, ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ ಎಂದರ್ಥವಲ್ಲ.
ಇದು ಜಗತ್ತಿನ ಪವರ್ಫುಲ್ ವ್ಯಕ್ತಿಗಳ ಪಟ್ಟಿ. ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಸಹ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಇನ್ನು ಸಾಹಸಿ ಬೇರ್ ಗ್ರಿಲ್ಸ್ ಸಹ ಈ ಪಟ್ಟಿಯಲ್ಲಿದ್ದಾರೆ. ಹೀಗೆ ಬೇರೆ ಬೇರೆ ವೃತ್ತಿಯಲ್ಲಿದ್ದರೂ, ತಮ್ಮ ವೃತ್ತಿಯಲ್ಲಿ ಪವರ್ಫುಲ್ ಆಗಿರುವವರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸದ್ಯದಲ್ಲೇ ತಾತ ಆಗಲಿದ್ದಾರೆ ವಿಕ್ರಮ್!
ಈ ಪೈಕಿ ವಿದ್ಯುತ್ ಜಾಮ್ವಾಲ್ ಸಹ ಭಾರತದಿಂದ ಸ್ಥಾನ ಪಡೆದಿದ್ದಾರೆ ಎನ್ನುವುದು ವಿಶೇಷ. ಈ ಕುರಿತು, ಟ್ವಿಟರ್ನಲ್ಲಿ ಅವರು 'ಜೈ ಹಿಂದ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.