ಜೈಲರ್ 2 ಸಿನಿಮಾದಲ್ಲಿ ಕಾಂತಾ ಆಗಿ ವಿದ್ಯಾಬಾಲನ್ ಅಬ್ಬರ.
ಸಿಗರೇಟ್ ಕೈಯಲ್ಲಿ ಹಿಡಿದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಟಿ.
ಕಿಲ್ಲರ್ ಲುಕ್, ಕ್ರೇಜಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು, ಸಿನಿ ಪ್ರೇಮಿಗಳು.
Vidya Balan’s Kantha look revealed in New Jailer 2: ಜೈಲರ್ ಸಿನಿಮಾದ ಮುಂದುವರೆದ ಭಾಗವಾದ ಜೈಲರ್ 2 ಸಿನಿಮಾವು ಅಕ್ಟೋಬರ್ 15 ರಂದು ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪ್ರಚಾರ ಕಾರ್ಯ ಸಮಾರೋಪದಿ ನಡೆಯುತ್ತಿರುವ ಹೊತ್ತಲ್ಲಿ, ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಪಾತ್ರ ಪರಿಚಯ ಮಾಡಲಾಗಿದೆ. ಒಂದೊಂದೇ ಪೋಸ್ಟರ್ ಹಾಗೂ ಸಿನಿಮಾ ಗ್ಲಿಂಪ್ಸ್ ಬಿಡುಗಡೆ ಮಾಡಲಾಗುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಳ್ಳುತ್ತಿದ್ದಾರೆ.
ಹೇಗಿದೆ ನಟಿಯ ಲುಕ್?
ಸೆ.20ರಂದು ಸನ್ ಪಿಕ್ಚರ್ಸ್ ನಟಿ ವಿದ್ಯಾ ಬಾಲನ್ ಅವರ ಪಾತ್ರದ ಬಗ್ಗೆ ಗ್ಲಿಂಪ್ಸ್ ಹಂಚಿಕೊಂಡಿದೆ. ಕಾಂತಾ ಪಾತ್ರವು ಬೋಲ್ಡ್ ಕ್ಯಾರೆಕ್ಟರ್ನಂತೆ ತೋರಿಸುತ್ತದೆ. ನೀಲಿ ಬಣ್ಣದ ಸೀರೆ. ಮಾಡ್ರನ್ ಹೇರ್ ಸ್ಟೈಲ್, ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮೆಟ್ಟಿಲುಗಳ ಮೂಲಕ ಕೆಳಗೆ ಬರುವಾಗ ಅವರು ಒಮ್ಮೆ ನಿಂತು, ಮುಂದೆ ನೋಡುತ್ತಾ ಹೊಗೆಯನ್ನು ಬಿಡುವ ದೃಶ್ಯವಿದೆ. ಅನಿರುದ್ಧ ರವಿಚಂದರ್ ಅವರ ಉತ್ಸಾಹಭರಿತ ಹಿನ್ನೆಲೆ ಸಂಗೀತವು ಈ ದೃಶ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.
ರಜನಿಕಾಂತ್ ಅವರ ಪಾತ್ರದೊಂದಿಗೆ ವಿದ್ಯಾ ಬಾಲನ್ ಅವರ ಪಾತ್ರವು ತೀವ್ರವಾದ ಮುಖಾಮುಖಿಯನ್ನು ಹೊಂದಿರಬಹುದು ಎಂಬುದನ್ನು ಪ್ರೇಕ್ಷಕರು ಊಹೆ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ವಿದ್ಯಾಬಾಲನ್ ಲುಕ್ಗೆ ಫಿದಾ
ನೆಟ್ಟಿಗರು ವಿದ್ಯಾಬಾಲನ್ ಅವರ ಕಾಂತಾ ಲುಕ್ಗೆ ಫಿದಾ ಆಗಿದ್ದಾರೆ. ಎಂತ ಕ್ರೇಜಿಯಾಗಿ, ವಿದ್ಯಾಬಾಲನ್ ಡೇಂಜರಸ್ ಕಾಸ್ಟಿಂಗ್, ಕಿಲ್ಲರ್ ಲುಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೈಲರ್ 2 ವಿದ್ಯಾಬಾಲನ್ ಅವರಿಗೆ ಗುಡ್ ಕಂಬ್ಯಾಕ್ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಜನಿ ಕಾಂತ್ ಸರ್ ಅವರ ಲುಕ್ ಮೊದಲು ರಿಲೀಸ್ ಮಾಡಿ ನಾವು ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಮತ್ತೊಬ್ಬ ಯೂಟ್ಯೂಬ್ ಬಳಕೆದಾರ ಬೇಡಿಕೆ ಮುಂದಿಟ್ಟಿದ್ದಾರೆ.
ಇಬ್ಬರು ನಟರ ಪಾತ್ರ ಪರಿಚಯ
ಇತ್ತೀಚೆಗೆ ಜೈಲರ್ 2 ಸಿನಿಮಾದಲ್ಲಿ ಮಲಯಾಳಂ ನಟ ಸೂರಜ್ ವೆಂಜಾರಮೂಡು ಅವರ ಪಾತ್ರ ಏನು ಎನ್ನುವುದರ ಗ್ಲಿಂಪ್ಸ್ ಹಂಚಿಕೊಳ್ಳಲಾಗಿತ್ತು. ದಿಲೀಪ್ ಹೆಸರಲ್ಲಿ ಖಳನಾಯಕನಾಗಿ ಮಿಂಚಲಿದ್ದಾರೆ. ಪಂಚೆಯುಟ್ಟು ಕಾರಿನ ಮೇಲೆ ಕುಳಿತು ಸಿಗರೇಟ್ ಸೇದುವ ಶೈಲಿ ಸಾಕಷ್ಟು ಸದ್ದು ಮಾಡಿತ್ತು. ಇಷ್ಟೇ ಅಲ್ಲದೇ ಕಾಲಿವುಡ್ ನಟ ಎಸ್ ಜೆ ಸೂರ್ಯ ಅವರನ್ನು ಬೋಧಿಯಾಗಿ ಪರಿಚಯಿಸಲಾಗಿದೆ, (ಏಜೆನ್ಸೀಸ್).