ಸಿನಿವಾಣಿ

VIDEO | ವೈರಲ್ ಆಗ್ತಿದೆ, ಶನಾಯಾ ಕಪೂರ್​ರ ಆಕರ್ಷಕ ಬೆಲ್ಲಿ ಡ್ಯಾನ್ಸ್

ನವದೆಹಲಿ : ನಟ ಸಂಜಯ್ ಕಪೂರ್ ಮಗಳಾದ ಶನಾಯಾ ಕಪೂರ್ ಇನ್ನೂ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ ಅಷ್ಟೆ. ಆದರೆ ಅದಾಗಲೇ ಅವರು ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದಕ್ಕೆ ಒಂದು ಮುಖ್ಯ ಕಾರಣ, ಇನ್ಸ್​ಟಾಗ್ರಾಂನಲ್ಲಿ ಅವರು ಪೋಸ್ಟ್ ಮಾಡುವ ಡ್ಯಾನ್ಸ್ ವಿಡಿಯೋಗಳು.

ಬೆಲ್ಲಿ ಡ್ಯಾನ್ಸ್ ಕಲಿಯುತ್ತಿರುವ ಶನಾಯಾ ಆಗಾಗ್ಗೆ ತಮ್ಮ ತರಗತಿಯಲ್ಲಿ ಕಲಿತ ಹೊಸ ಸೀಕ್ವೆನ್ಸ್​ಗಳ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಅವರ ಹೊಸ ವಿಡಿಯೋದಲ್ಲಿ ಅವರು ನೆಲದ ಮೇಲೆ ಕೂತು ಮಾಡುವ ಸ್ಟೆಪ್​ಗಳು ನೆಟ್ಟಿಗರ ಮನ ಸೆಳೆದಿದೆ. ಈ ವಿಶಿಷ್ಟ ಮಾದರಿಯ ನೃತ್ಯವನ್ನು ತಮ್ಮ ಇನ್ಸ್​ಟ್ರಕ್ಟರ್ ಸಂಜನಾ ಮುತ್ರೇಜಾರೊಂದಿಗೆ ಆಕರ್ಷಕವಾಗಿ ಪ್ರದರ್ಶಿಸಿದ್ದಾರೆ. ನಿನ್ನೆ ಬೆಳಿಗ್ಗೆ ಶೇರ್ ಮಾಡಿರುವ ವಿಡಿಯೋಗೆ ಅದಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದ್ದು, ಲೈಕ್​ಗಳ ಸುರಿಮಳೆಯಾಗುತ್ತಿದೆ. ನೀವೂ ನೋಡಿ -

ಹಿನ್ನೆಲೆಯಲ್ಲಿ ಶಕೀರಾ ಮತ್ತು ಬೆಯಾನ್ಸ್​ನ ಬ್ಯೂಟಿಫುಲ್ ಲೈಯರ್ ಹಾಡಿನ ಸಂಗೀತ ಹಾಕಿದ್ದಾರೆ. ಬೆಲ್ಲಿ ಡ್ಯಾನ್ಸ್​ನ ನಾಜೂಕು ಶೈಲಿಯನ್ನು ಕಲಿಯುವುದು ಸುಲಭವೇನಲ್ಲ. ಅದರಲ್ಲೂ "ನೆಲದ ಮೇಲೆ ಮಾಡುವ ಸ್ಟೆಪ್​ಗಳನ್ನು ಕಲಿಯುವುದು ದೊಡ್ಡ ಸವಾಲು" ಎಂದಿರುವ ಶನಾಯಾ, ತಮ್ಮನ್ನು ಪ್ರೇರೇಪಿಸುವ ತಮ್ಮ ಶಿಕ್ಷಕಿ ಸಂಜನಾಗೆ ಧನ್ಯವಾದ ಸೂಚಿಸಿದ್ದಾರೆ. (ಏಜೆನ್ಸೀಸ್)