ವಿಜಯ್,​ ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ ಸಂಗ್ರಹ ಚಿತ್ರ 
ಸಿನಿವಾಣಿ

ಅನನ್ಯಾ ಜೊತೆಗೆ ಫುಲ್​ ಕ್ಲೋಸ್..ಪತ್ನಿ ಜೊತೆ ದೂರ ದೂರ; ವಿಜಯ್​ ದೇವರಕೊಂಡ ಹಳೇ ವಿಡಿಯೋಗಳು ವೈರಲ್..Rashmika-Vijay

  • ಸೋಶಿಯಲ್​ ಮೀಡಿಯಾದಲ್ಲಿ ವಿಜಯ್​-ರಶ್ಮಿಕಾ ವಿರುದ್ಧ ನಿಲ್ಲದ ಟ್ರೋಲ್​.

  • ವಿಜಯ್​ ದೇವರಕೊಂಡ ಅವರು ಅನನ್ಯಾ ಪಾಂಡೆ ಜೊತೆಗಿದ್ದ ಕ್ಷಣ ಹಂಚಿಕೊಂಡು ಟೀಕೆ.

  • ಕಾಫಿ ವಿತ್​ ಕರಣ್ ಟಾಕ್​ ಶೋ ನಂತರ ವಿಜಯ್​ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಟ್ರೋಲ್ ಹೆಚ್ಚಳ.

'ಒಬ್ಬರನೊಬ್ಬರು ಎಷ್ಟು ಪ್ರೀತಿ ಮಾಡಿಕೊಳ್ಳುತ್ತಿದ್ದೇವೆ, ಎಂತಹ ದಾಂಪತ್ಯ ಜೀವನ ನಡೆಸುತ್ತಿದ್ದೇವೆ' ಎಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಸ್ಪಷ್ಟನೆ ಕೊಟ್ಟುಕೊಂಡು, ತಮ್ಮ ತಂಟೆಗೆ ಬರ್ಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದರೂ ಸಹ ನಟನ ವಿರುದ್ಧ ಟ್ರೋಲ್​ ಮಾತ್ರ ನಿಲ್ಲುತ್ತಿಲ್ಲ. ಅನನ್ಯಾ ಪಾಂಡೆ ಜೊತೆಗೆ ವಿಜಯ್​ ದೇವರಕೊಂಡ ಆತ್ಮೀಯವಾಗಿ ಕಳೆದ ಕ್ಷಣ, ಸಾರ್ವಜನಿಕರ ಪ್ರದೇಶದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಅಂತರ ಕಾಯ್ದುಕೊಂಡ ವಿಡಿಯೋಗಳನ್ನು ಹಂಚಿಕೊಂಡು ಮತ್ತೆ ಟ್ರೋಲ್ ಮಾಡಲಾಗುತ್ತಿದೆ.

ಕಾಫಿ ವಿತ್​ ಕರಣ್​ ಜೋಹರ್​ ಟಾಕ್​ ಶೋನಲ್ಲಿ ರಣಬಾಲಿ ಸಿನಮಾದ ಪ್ರಚಾರದ ಭಾಗವಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಭಾಗಿಯಾಗಿದ್ದರು. ಈ ವೇಳೆ ರಶ್ಮಿಕಾ ತಮಗೆ 100 ಬಾರಿ ಮದುವೆಯಾಗುವ ಬಗ್ಗೆ ಕೇಳಿದ್ದರು ಎಂದಿದ್ದರು. ಇದಕ್ಕೆ ನಟಿ ಇಲ್ಲ ನಾನು ವರ್ಷ ಪೂರ್ತಿ ಕೇಳಿದ್ದೆ ಎಂದರು. ಈ ಒಂದು ವಿಡಿಯೋ ತುಣುಕು ಸೋಶಿಯಲ್​​ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.

'ವಿಜಯ್​ ಅವರು ಹೀಗೆ ವರ್ತಿಸಬಾರದಿತ್ತು'. 'ರಶ್ಮಿಕಾರನ್ನು ವಿಜಯ್ ಪ್ರೀತಿ ಮಾಡುತ್ತಿಲ್ಲ. ಅಂತರ ಕಾಯ್ದುಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದ್ದರು. ಇದು ವೈರಲ್ ಆದ ಬೆನಲ್ಲೇ ತಾರಾ ದಂಪತಿ ಇನ್​ಸ್ಟಾಗ್ರಾಮ್​ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು, ಕಿಡಿಕಾರಿದ್ದರು.

ರಶ್ಮಿಕಾ ಸ್ಪಷ್ಟನೆ ಕೊಟ್ಟಿದ್ರು

'ನನ್ನ ಬಗ್ಗೆ ಎಷ್ಟಾದರೂ ಮಾತನಾಡಿ ನನ್ನ ಕುಟುಂಬದ ತಂಟೆಗೆ ಬರಬೇಡಿ. ನಾನು ಇಷ್ಟ ಪಡುವ ಹುಡುಗನಿಗೆ ಮದುವೆಯಾಗು ಎಂದು ಸಾವಿರ ಸಲ ಕೇಳಿದರೂ ತಪ್ಪೇನಿದೆ. ನಾವು ನಮ್ಮದೇ ಆದ ಕುಟುಂಬದಲ್ಲಿ ಸಂತೋಷವಾಗಿದ್ದೇವೆ. ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕು ಅದಕ್ಕಾಗಿ ವಿಜಯ್ ಸಮಯ ತೆಗೆದುಕೊಂಡಿದ್ದಾರೆ. ನಮಗೆ ಲಕ್ಷ್ಯುರಿ ಪ್ರಪೋಸಲ್​, ಎಂಗೇಜ್​ಮೆಂಟ್ ಅಗತ್ಯವಿಲ್ಲ. ಜೀವನ ಪೂರ್ತಿ ಜೊತೆಯಾಗಿದ್ದರೆ ಸಾಕು. ನನ್ನ ಸೊಂಟದ ಮೂಳೆಗೆ ಸಮಸ್ಯೆಯಾದಾಗ, ಹೊಟ್ಟೆ ನೋವು ಕಾಣಿಸಿಕೊಂಡಾಗ, ನಾನು ಕೆಲವು ವರ್ಷದ ಹಿಂದೆ ಸಮಸ್ಯೆಗೆ ಒಳಗಾದಾಗ ನನ್ನ ಜೊತೆ ಇದ್ದದ್ದು ವಿಜಯ್​ ನೀವಲ್ಲ ಎಂದು ಟ್ರೋಲಿಗರಿಗೆ ಟಾಂಗ್​ ಕೊಟ್ಟಿದ್ದರು. ವಿಜಯ್​ ದೇವರಕೊಂಡ ಅವರು ಸಹ ತಾವಿಬ್ಬರು ಎಷ್ಟು ಪ್ರೀತಿ ಮಾಡುತ್ತಿದ್ದೇವೆ ಎಂದು ಪೋಸ್ಟ್ ಹಂಚಿಕೊಂಡಿದ್ದರು.

ನಿಲ್ಲದ ಟ್ರೋಲ್​

ಇಷ್ಟೆಲ್ಲ ಸ್ಪಷ್ಟನೆ, ಕಾನೂನು ಹೋರಾಟ ಕೈಗೊಂಡರೂ ಸಹ ವಿಜಯ್​ ದೇವರಕೊಂಡ ಮೇಲಿನ ಆರೋಪ ನಿಂತಿಲ್ಲ. Gitanjali Pathak ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ಈ ಹಿಂದೆ ಲೈಗರ್​ ಸಿನಿಮಾದ ಪ್ರಚಾರದ ಭಾಗವಾಗಿ, ಸಂದರ್ಶನದಲ್ಲಿ ಅನನ್ಯ ಪಾಂಡೆ ಜೊತೆಗೆ ವಿಜಯ್​ ಆತ್ಮೀಯವಾಗಿ ಇದ್ದದ್ದು, ಅನನ್ಯಾ ಮಾತನಾಡುವಾಗ ವಿಜಯ್​ ಕೂದಲು ಸರಿಪಡಿಸಿದ್ದು, ಏರ್ಪೋರ್ಟ್​ನಲ್ಲಿ ಅನನ್ಯಾ ಕೈ ಹಿಡಿದು ನಡಿಸಿದ್ದು, ಅನನ್ಯಾ ತುಂಡುಡುಗೆ ತೊಟ್ಟಾಗ ಅವರನ್ನು ರಕ್ಷಿಸಿದ ಪರಿ, ಸಂದರ್ಶನವೊಂದರಲ್ಲಿ ಅವರಿಗೆ ಮುತ್ತು ಕೊಟ್ಟಿದ್ದು, ಕಾರ್ಯಕ್ರಮವೊಂದರಲ್ಲಿ ಅವರಿಗೆ ಆತ್ಮೀಯವಾಗಿ ಊಟ ಮಾಡಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ರಶ್ಮಿಕಾ ಅವರ ಜೊತೆಗೆ ವಿಜಯ್​​ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆಯೂ ಕಂಪೇರ್ ಮಾಡಲಾಗಿದೆ. ಏರ್ಪೋರ್ಟ್​ನಲ್ಲಿ ಅಂತರ ಕಾಯ್ದು ಕೊಂಡಿರುವುದು, ರಶ್ಮಿಕಾ ತಾವಾಗಿಯೇ ವಿಜಯ್​ ಕೈ ಹಿಡಿದಿರುವ ವಿಡಿಯೋವನ್ನು ಟ್ರೋಲಿಗರು ಹಂಚಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್).