ಲಕ್ಕಿ ಭಾಸ್ಕರ್​ 2 ಸೀಕ್ವೆಲ್​ ಬಗ್ಗೆ ನಿರ್ದೇಶಕರ ಮಾತು 
ಸಿನಿವಾಣಿ

ದುಲ್ಕರ್​ ಹಿಟ್​ 'ಲಕ್ಕಿ ಭಾಸ್ಕರ್​ 2' ಬರುತ್ತೆ! ಆದ್ರೆ... ​ ಸೀಕ್ವೆಲ್​ ನಿರೀಕ್ಷೆಯಲ್ಲಿರುವ ಫ್ಯಾನ್ಸ್​ಗೆ ನಿರ್ದೇಶಕರ ಶಾಕಿಂಗ್​ ಟ್ವಿಸ್ಟ್​

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್​ ನಟ ದುಲ್ಕರ್ ಸಲ್ಮಾನ್ ಅಭಿನಯದ 'ಲಕ್ಕಿ ಭಾಸ್ಕರ್'
  • 'ಲಕ್ಕಿ ಭಾಸ್ಕರ್' ಸೀಕ್ವೆಲ್​ ಬಗ್ಗೆ ನಿರ್ದೇಶಕ ವೆಂಕಿ ಅಟ್ಲೂರಿ ಅಪ್ಡೇಟ್​
  • ಸಿನಿಮಾ ಮಾಡೋದು ಖಚಿತ ಆದ್ರೆ, ದೊಡ್ಡ ಜವಾಬ್ದಾರಿ ಇದೆ
Lucky Baskhar 2: ತೆಲುಗಿನ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶನದ ಹಾಗೂ ಮಾಲಿವುಡ್​ ಸ್ಟಾರ್​ ನಟ ದುಲ್ಕರ್ ಸಲ್ಮಾನ್ ಅಭಿನಯದ 'ಲಕ್ಕಿ ಭಾಸ್ಕರ್' ಮಲಯಾಳಂ, ತಮಿಳು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್​ಹಿಟ್​ ಕಂಡಿದ್ದಲ್ಲದೇ, ಬಾಕ್ಸ್ ಆಫೀಸ್‌ನ ಹಣವನ್ನೂ ದೋಚಿಕೊಂಡಿತು. ಸಖತ್ ಸ್ಟೋರಿ ಮೂಲಕ ಚಿತ್ರಪ್ರೇಮಿಗಳನ್ನು ಥ್ರಿಲ್​ ಆಗಿಸಿದ ನಿರ್ದೇಶಕರಿಂದ ಸೀಕ್ವೆಲ್ ಯಾವಾಗ ಎಂದು ಕಾಯುತ್ತಿದ್ದ ದುಲ್ಕರ್​ ಫ್ಯಾನ್ಸ್​ಗೆ ಸಿಹಿ-ಕಹಿ ಎರಡೂ ಸಿಕ್ಕಂತಾಗಿದೆ. ​ 
1992ರ ಷೇರು ಮಾರುಕಟ್ಟೆ ಹಗರಣವನ್ನೇ ತಮ್ಮ ಚಿತ್ರದ ಕಥೆಯ ಜೀವಾಳ ಮಾಡಿಕೊಂಡ ವೆಂಕಿ, ಅದರ ಸುತ್ತವೇ ವಿಶಿಷ್ಟ ಸ್ಟೋರಿ ಕಟ್ಟಿ,  ದುಲ್ಕರ್ ಸಲ್ಮಾನ್​ ಅವರ ಕ್ಲಾಸಿಕ್​ ಅಭಿನಯದಿಂದ ಭರ್ಜರಿ ಯಶಸ್ಸನ್ನು ಕಂಡರು. ಚಿತ್ರಮಂದಿರಗಳಲ್ಲಿ ಮಾತ್ರ ವಿಶೇಷ ಮನ್ನಣೆ ಗಳಿಸಿದ ಚಿತ್ರವು, ಒಟಿಟಿಯಲ್ಲಿಯೂ ಅತ್ಯಂತ ಜನಪ್ರಿಯ ಮತ್ತು ಮೆಚ್ಚುಗೆಗಳನ್ನು ಸ್ವೀಕರಿಸಿತು. ಮೊದಲಿನಿಂದಲೂ ಈ ಸಿನಿಮಾದ ಸೀಕ್ವೆಲ್ ಬರುವ ಬಗ್ಗೆ ಕುತೂಹಲ ಹೊಂದಿದ್ದ ಅಭಿಮಾನಿಗಳಿಗೆ ನಿರ್ದೇಶಕರ ಇತ್ತೀಚಿನ ಹೇಳಿಕೆ ಖುಷಿಗಿಂತ ಬೇಸರವನ್ನೇ ತಂದೊಡ್ಡಿದೆ. 
'ಲಕ್ಕಿ ಭಾಸ್ಕರ್ 2' ಕುರಿತು ಹೊಸ ಅಪ್‌ಡೇಟ್ ನೀಡಿದ ವೆಂಕಿ, ಈ ಚಿತ್ರದ ಮುಂದುವರಿದ ಭಾಗ ಖಂಡಿತಾ ಬರಲಿದೆ. ಅಂದರೆ ಸಿನಿಪ್ರಿಯರ ನಿರೀಕ್ಷೆಯಂತೆ ಸೀಕ್ವೆಲ್​ ರಿಲೀಸ್ ಆಗಲಿದೆ. ಆದ್ರೆ, ಸದ್ಯಕ್ಕೆ ಆ ಮಾತು ದೂರವಿದೆ. ಎರಡನೇ ಭಾಗವು ನನಗೆ ದೊಡ್ಡ ಜವಾಬ್ದಾರಿ. ಮೊದಲ ಭಾಗ ಸೂಪರ್​ಹಿಟ್​ ಆದ ಮೇಲಂತು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈಗ ಅವುಗಳನ್ನು ಸೆಕೆಂಡ್​ ಪಾರ್ಟ್​ನಿಂದೇ ಪೂರೈಸಬೇಕಿದೆ ಎಂದರು.
ಈ ಕಾರಣಗಳಿಂದ ತರಾತುರಿಯಲ್ಲಿ ಕಥೆಯನ್ನು ಬರೆದು, ಸಿನಿಮಾ ಮಾಡುವುದಿಲ್ಲ. ಸದ್ಯಕ್ಕೆ ನನ್ನ ಕೈಯಲ್ಲಿ ಎರಡು ಪ್ರಾಜೆಕ್ಟ್‌ಗಳು ಬಾಕಿ ಉಳಿದಿವೆ. ಅವು ಪೂರ್ಣಗೊಂಡ ನಂತರವೇ ‘ಲಕ್ಕಿ ಭಾಸ್ಕರ್ 2’ಗೆ ಕೈಹಾಕುವೆ. ಎರಡು ವರ್ಷಗಳ ಬಳಿಕ ಈ ಚಿತ್ರದ ಮುಂದಿನ ಭಾಗ ಮಾಡುವುದು ಖಚಿತ. ಆದ್ರೆ, ಸಮಯ ತೆಗೆದುಕೊಂಡು ಬರುತ್ತೇನೆ. ಸ್ವಲ್ಪ ಕಾಯಬೇಕು ಅಷ್ಟೇ ಎಂದು ಹೇಳಿದ್ದಾರೆ,(ಏಜೆನ್ಸೀಸ್).