ಸಿನಿವಾಣಿ

ಲವ್ ಲಿ ವಸಿಷ್ಠ; ಪ್ರೀತಿಯ ಜತೆಗೆ ರೌಡಿಸಂ ಸಹ ಇದೆ..

ಬೆಂಗಳೂರು: ವಸಿಷ್ಠ ಹೀರೋ ಆಗಿ ಬಹಳ ಸಮಯವೇ ಆಗಿದೆ. ಆದರೆ, ಹೀರೋ ಆಗಿ ಅಭಿನಯಿಸಿರುವ ಚಿತ್ರವೊಂದು ಇನ್ನೂ ಬಿಡುಗಡೆಯಾಗಿಲ್ಲ ಅಷ್ಟೇ. ಈ ಮಧ್ಯೆ, ಅವರ ಚಿತ್ರಗಳ ಪಟ್ಟಿಗೆ ಇನ್ನೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಸಿಷ್ಠ, ಪ್ರೇಮಕಥೆ ಇರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರದ ಹೆಸರು ‘ಲವ್ ಲಿ’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದೆ.

ಅಷ್ಟೇ ಅಲ್ಲ, ಚಿತ್ರದಲ್ಲಿನ ಫಸ್ಟ್​ಲುಕ್ ಸಹ ಬಿಡುಗಡೆ ಆಗಿದೆ. ಇದೊಂದು ಬರೀ ಪ್ರೇಮಕಥೆ ಇರುವ ಚಿತ್ರವಷ್ಟೇ ಅಲ್ಲ, ರೌಡಿಸಂ ಸಹ ಇದೆಯಂತೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಜತೆಯಲಿ ಇರುವ ಮತ್ತು ‘ಮಫ್ತಿ’ ಖ್ಯಾತಿಯ ನರ್ತನ್ ಜತೆಗೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಮೇ ನಾಲ್ಕರಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕಲಾವಿದರ ಆಯ್ಕೆ ನಡೆಯುತ್ತಿದೆ.