ಬಾಲಿವುಡ್ನ ಖ್ಯಾತ ನಟ ವರುಣ್ ಧವನ್ ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅವರು ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ರಂಜಿಸಿದ್ದಾರೆ. ಇನ್ನು, ಅವರ ಖ್ಯಾತಿ ದಿನದಿಂದ ದಿನಕ್ಕೆ ಒಳ್ಳೆಯ ಸಿನಿಮಾಗಳ ಆಯ್ಕೆಯ ಮೂಲಕ ಹೆಚ್ಚುತ್ತಲೇ ಇದೆ. ಇವರು ಬಾಲಿವುಡ್ನ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರ ಮೊದಲ ಪುತ್ರ. ಸಾಮಾನ್ಯವಾಗಿ ನಟ ವರುಣ್ ಧವನ್ ತಮ್ಮ ಸಿನಿಮಾಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ.
ಆದರೆ, ಈಗ ಅವರು ದಕ್ಷಿಣ ಭಾರತದ ನಟಿಯರ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕರಣಕ್ಕೆ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗೆ ವರುಣ್ ಅವರು ರಶ್ಮಿಕಾ ಜತೆ ಕಾಣಿಸಿಕೊಂಡಿದ್ದರು. ‘ಬೀಸ್ಟ್’ ಚಿತ್ರದ ಸೂಪರ್ ಹಿಟ್ ಹಾಡಾದ ''ಅರೇಬಿಕ ಕುತ್ತು''ಗೆ ಸಮುದ್ರ ತೀರದಲ್ಲಿ ಹೆಜ್ಜೆ ಹಾಕಿ ಸದ್ದು ಮಾಡಿದ್ದರು. ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ, ಸಮಂತಾ ಜತೆಗೆ ವರುಣ್ ಕಾಣಿಸಿಕೊಂಡಿದ್ದಾರೆ. ಹೌದು, ಮುಂಬೈನಲ್ಲಿ ನಟ ವರುಣ್ ಹಾಗೂ ಸಮಂತಾ ಒಟ್ಟಾಗಿ ಮಾಧ್ಯಮಗಳ ಕ್ಯಾಮೆರಾ ಕಣ್ಣುಗಳಿಗೆ ಸಿಕಿದ್ದಾರೆ.
ಇವರಿಬ್ಬರು ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಧೂಳೆಬ್ಬಿಸುತ್ತಿವೆ. ಅಂದಹಾಗೆ, ನಟ ವರುಣ್ ಹಾಗೂ ನಟಿ ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದೇಕೆ ಎನ್ನುವ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ. ಅವರಿಬ್ಬರು ಜಾಹೀರಾತಿನ ಶೂಟಿಂಗ್ಗಾಗಿ ಒಟ್ಟಿಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ನಟ ವರುಣ್ ಹಾಗೂ ಸಮಂತಾ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಕಾರಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.