ಸಿನಿವಾಣಿ

ಸಿಂಹಪ್ರಿಯಾ ಮದುವೆ; ಸ್ಯಾಂಡಲ್​ವುಡ್​ ಗಣ್ಯರಿಗೆ ಆಹ್ವಾನ …

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ಇದೇ ತಿಂಗಳ 26ಕ್ಕೆ ಫಿಕ್ಸ್​ ಆಗಿರುವುದು ಮತ್ತು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಮದುವೆ 26ರಂದು ನಡೆದರೆ, 28ಕ್ಕೆ ಬೆಂಗಳೂರಿನ ಗೋಲ್ಡನ್​ ಪಾಮ್ಸ್​ ರೆಸಾರ್ಟ್​​ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆ ಮತ್ತು ಆರತಕ್ಷತೆಗೆ ಬಂದು ಹರಸಿ, ಹಾರೈಸುವಂತೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳ ಮನೆಗೆ ಖುದ್ದು ಭೇಟಿ ನೀಡಿ ಆಹ್ವಾನ ನೀಡಿ ಬಂದಿದ್ದಾರೆ.

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಾದ ಅನಂತ್​ ನಾಗ್​, ಸುಮಲತಾ ಅಂಬರೀಷ್​, ಸುದೀಪ್​, ಜಗ್ಗೇಶ್​, ಅಮೂಲ್ಯ, ಗುರುಕಿರಣ್​, ಮಾಲಾಶ್ರೀ, ಧ್ರುವ ಸರ್ಜಾ, ರಿಷಭ್​ ಶೆಟ್ಟಿ, ಪ್ರೇಮ್​, ಸೃಜನ್​ ಲೋಕೇಶ್​ ಮುಂತಾದವರನ್ನು ವಸಿಷ್ಠ ಮತ್ತು ಹರಿಪ್ರಿಯಾ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.