ಸಿನಿವಾಣಿ

ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್​ ಬೆರೆಸಿ ಕೊಡು: ರಿಯಾ ವಾಟ್ಸ್​ಆ್ಯಪ್​ ಚಾಟ್​ನಲ್ಲಿದೆ ಮಹತ್ವದ ಸುಳಿವು!

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಸುಶಾಂತ್​, ಪ್ರೇಯಸಿ ರಿಯಾ ಚಕ್ರವರ್ತಿ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದರು ಎಂಬ ಸುಳಿವೊಂದು ಆಕೆಯ ವಾಟ್ಸ್​ಆ್ಯಪ್​ ಸಂಭಾಷಣೆಯಲ್ಲಿ ಬಹಿರಂಗವಾಗಿದೆ.

ನಟಿಯೇ ಮಾಡಿದ್ದಾಳೆ ಎನ್ನಲಾದ ಸರಣಿ ವಾಟ್ಸ್​ಆ್ಯಪ್​ ಸಂದೇಶಗಳು ಟೈಮ್ಸ್​ ನೌ ಮಾಧ್ಯಮಕ್ಕೆ ಲಭ್ಯವಾಗಿದ್ದು, ರಿಯಾ ಮೊಬೈಲ್​ನಿಂದ ಕಳುಹಿಸಿರುವ ವಾಟ್ಸ್​ಆ್ಯಪ್​ ಸಂದೇಶಗಳಲ್ಲಿ ವಿರಳವಾಗಿ ಉಪಯೋಗಿಸುವ ಎಂಡಿಎಂಎ ಮತ್ತು ಗಾಂಜಾ ಮುಂತಾದ ಡ್ರಗ್ಸ್​ ಬಳಸುತ್ತಿದ್ದರು ಎಂಬ ಸುಳಿವು ದೊರೆತಿದೆ.

ಸಂಭಾಷಣೆಯೊಂದರಲ್ಲಿ ರಿಯಾ ಡ್ರಗ್ಸ್​ ಮಾರಾಟಗಾರ ಆರೋಪಿ ಗೌರವ್​ ಆರ್ಯ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ನಾವು ಕಠಿಣ ಡ್ರಗ್ಸ್​ ಬಗ್ಗೆ ಮಾತನಾಡಿದರೆ, ನಾನು ಅದನ್ನು ಹೆಚ್ಚಿಗೆ ಮಾಡುವಂತಿಲ್ಲ. ಒಮ್ಮೆ ಎಂಡಿಎಂಎ ಪ್ರಯತ್ನಿಸಿ ನೋಡಿ ಬಳಿಕ ನಿಮಲ್ಲಿ ಎಂಡಿ ಇದೆಯೇ? ಎಂದು ಅದೇ ಕೇಳಿಸುತ್ತದೆ ಎಂದಿದ್ದಾರೆ.

ಮಿರಾಂಡಾ ಸುಶಿ ಎಂದು ಸೇವ್​ ಆಗಿರುವ ನಂಬರ್ ಜತೆಗಿನ ಮತ್ತೊಂದು ಸಂಭಾಷಣೆಯಲ್ಲಿ "ಹಾಯ್​ ರಿಯಾ ಪದಾರ್ಥವೂ ಬಹುತೇಕ ಮುಗಿದು ಹೋಗಿದೆ" ಎಂದು ಡ್ರಗ್ಸ್​ ಕುರಿತು ರಿಯಾಗೆ ಮಿರಾಂಡ ಹೇಳಿದ್ದಾರೆ. ಮುಂದುವರಿದು ರಿಯಾ ಜತೆ ಚಾಟ್​ ಮಾಡಿರುವ ಮಿರಾಂಡ ಪದಾರ್ಥ (ಡ್ರಗ್ಸ್​)ವನ್ನು ಶೋವಿಕ್​ (ರಿಯಾ ಸಹೋದರ) ಫ್ರೆಂಡ್​ ಬಳಿ ಪಡೆದುಕೊಳ್ಳೋಣವಾ? ಆದರೆ, ಅವರು ಕೇವಲ ಹ್ಯಾಶ್​ ಮತ್ತು ಮೊಗ್ಗನ್ನು ಮಾತ್ರ ಹೊಂದಿದ್ದಾರೆ ಎಂದಿದ್ದಾರೆ.

ರಿಯಾ ಹೆಚ್ಚಾಗಿ ತನ್ನ ಫ್ರೆಂಡ್​ ಜಯಾ ಸಾಹಾ ಬಳಿ ಸಂಭಾಚಣೆ ನಡೆಸಿದ್ದಾರೆ. 2019ರ ನವೆಂಬರ್​ 25 ರಂದು ರಿಯಾಗೆ ಜಯಾ ಚಾಟ್​ ಮಾಡಿದ್ದು, ಟೀ ಅಥವಾ ನೀರಿನಲ್ಲಿ ನಾಲ್ಕು ಹನಿ ಹಾಕಿ ಅದನ್ನು ಅವನಿಗೆ ಸೇವಿಸಲು ಕೊಡು. ಬಳಿಕ 30 ರಿಂದ 40 ನಿಮಿಷ ಸಮಯ ಕೊಡು ಕಿಕ್​ ಏರುತ್ತೆ ಎಂದಿದ್ದಾಳೆ. ಇದಕ್ಕೆ ಪ್ರತಿಯಾಗಿ ಚಾಟ್​ ಮಾಡಿರುವ ರಿಯಾ, ಜಯಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಳಿಕ ಜಯಾ ತೊಂದರೆ ಏನಿಲ್ಲ ಇದು ನಿನಗೆ ಸಹಾಯವಾಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.

ಇನ್​ಸ್ಟಾಗ್ರಾಂ ಪೊಸ್ಟ್​ ಒಂದರಲ್ಲಿ ತಾನು ಸುಶಾಂತ್​ ಸಿಂಗ್​ ರಜಪೂತ್​ ಗರ್ಲ್​ಫ್ರೆಂಡ್​ ಎಂದು ರಿಯಾ ತನ್ನಷ್ಟಕ್ಕೆ ತಾನು ಘೋಷಿಸಿಕೊಂಡಿದ್ದಳು. 2019ರ ನವೆಂಬರ್​ನಿಂದ ಆಕೆ ಸುಶಾಂತ್​ ಜತೆಯಲ್ಲೇ ಬಾಂದ್ರಾ ನಿವಾಸದಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.

ಇದೀಗ ಸುಶಾಂತ್​ ಪ್ರಕರಣದಲ್ಲಿ ಡ್ರಗ್ಸ್ ಪಿತೂರಿ ಶಂಕೆ ಹಿನ್ನೆಲೆಯಲ್ಲಿ​ ಪ್ರಕರಣವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ತನಿಖೆ ನಡೆಸುವ ಸಾಧ್ಯತೆಯೂ ಇದೆ. (ಏಜೆನ್ಸೀಸ್​)