ಸಿನಿವಾಣಿ

PHOTOS| ಕೊಡಗಿನಲ್ಲಿ ಸುರಿವ ಮಳೆಯಲ್ಲಿಯೇ ಉಪ್ಪಿ ಬರ್ತ್​​ಡೇ ಸಂಭ್ರಮ..

ನಟ, ನಿರ್ದೇಶಕ ಉಪೇಂದ್ರ ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಜನ್ಮದಿನದ ನಿಮಿತ್ತ ಹಲವು ಸಿನಿಮಾ ತಂಡಗಳು, ಪೋಸ್ಟರ್ ಮತ್ತು ಟೀಸರ್​ ಬಿಡುಗಡೆ ಮಾಡಿಕೊಂಡು ನೆಚ್ಚಿನ ನಟನಿಗೆ ಉಡುಗೊರೆ ನೀಡಿದ್ದವು. ಇತ್ತ ಕರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳ ಜತೆ ಕಾಣಿಸಕೊಳ್ಳದ ಉಪ್ಪಿ, ಕೊಡಗು ಪ್ರವಾಸದಲ್ಲಿ ಕಾಲ ಕಳೆದಿದ್ದಾರೆ. ಕುಟುಂಬ ಸಮೇತ ಹಲವು ದೇಗುಲ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಪ್ರಕೃತಿ ಮಧ್ಯೆ ಕೇಕ್​ ಕತ್ತರಿಸಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ಸಮೀಪವಿರುವ ನಿಸರ್ಗ ರಮಣೀಯ ಪ್ರಸಿದ್ಧ ಪುಣ್ಯ ಕ್ಷೇತ್ರ ಪುಷ್ಪ ಗಿರಿ ಬೆಟ್ಟದಲ್ಲಿನ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನಕ್ಕೆ ತೆರಳಿದ್ದ ಉಪ್ಪಿ, ಅದಾದ ಬಳಿಕ ಮಡಿಕೇರಿಯ ಸುಂದರ ತಾಣಗಳು ಮತ್ತು ಜಲಪಾತಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಆ ಫ್ಯಾಮಿಲಿ ಟ್ರಿಪ್​ನ ಫೋಟೋಗಳು ಇಲ್ಲಿವೆ.