ಬೆಂಗಳೂರು: ಟಾಲಿವುಡ್ನಲ್ಲಿ ನಿರ್ಮಾಣವಾಗುತ್ತಿರುವ ‘ಗನಿ’ ಚಿತ್ರದಲ್ಲಿ ಸ್ಯಾಂಡಲ್ವುಡ್ನ ‘ರಿಯಲ್ ಸ್ಟಾರ್’ ಉಪೇಂದ್ರ ನಟಿಸಲಿದ್ದಾರೆ ಎಂಬುದು ಗೊತ್ತಿರುವ ವಿಚಾರವೇ. ಇದೀಗ ಈ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಸದ್ಯದಲ್ಲೇ ಉಪೇಂದ್ರ ಸಹ ಸೆಟ್ಗೆ ಹಾಜರಿ ಹಾಕಲಿದ್ದಾರೆ. ವರುಣ್ ತೇಜ್ ನಾಯಕತ್ವದ ‘ಗನಿ’ ಬಾಕ್ಸಿಂಗ್ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಈ ಚಿತ್ರದಲ್ಲಿ ವರುಣ್ ಬಾಕ್ಸರ್ ಆಗಿ ಕಾಣಿಸಿಕೊಂಡರೆ, ಅವರ ತಂದೆಯಾಗಿ ಉಪೇಂದ್ರ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಓಡಾಡುತ್ತಿದೆ. ಇತ್ತ ಖಳನಟನ ಪಾತ್ರಕ್ಕೆ ಜಗಪತಿ ಬಾಬು ಆಯ್ಕೆಯಾಗಿದ್ದು, ಉಪೇಂದ್ರ ಮತ್ತು ಜಗಪತಿ ಬಾಬು ಜುಗಲ್ಬಂದಿ ಚಿತ್ರದ ಹೈಲೈಟ್ ಅಂತೆ.
ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ‘ದಬಾಂಗ್’ ಖ್ಯಾತಿಯ ಸಾಯಿ ಮಂಜ್ರೇಕರ್, ಈ ಚಿತ್ರದಲ್ಲಿ ವರುಣ್ ತೇಜ್ಗೆ ನಾಯಕಿಯಾಗುವ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಬಹುಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ಕಬ್ಜ’ ಸೇರಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ಉಪೇಂದ್ರ, ‘ಗನಿ’ ಚಿತ್ರದ ಚಿತ್ರೀಕರಣದ ಸಲುವಾಗಿ ಫೆ. 12ರಂದು ಹೈದರಾಬಾದ್ಗೆ ತೆರಳಲಿದ್ದಾರೆ. ಕಿರಣ್ ಕೊರಪಾಟಿ ಮೊದಲ ಬಾರಿ ನಿರ್ದೇಶನಕ್ಕಿಳಿದಿದ್ದು, ಜುಲೈ 30ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.