ಸಿನಿವಾಣಿ

ಆಫ್ರಿಕಾ ಆನೆ ದತ್ತು ಪಡೆದ ಉಪೇಂದ್ರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಉಳಿವಿಗೆ ಸಹಕರಿಸಿ ಎಂದು "ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಮಾಡಿದ ಒಂದೇ ಒಂದು ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೆಲವೇ ದಿನಗಳಲ್ಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ರಾಜ್ಯದ ಮೃಗಾಲಯಗಳಿಗೆ ಸಂದಾಯವಾಗಿದೆ.

ಕೇವಲ ಆಸಕ್ತರು, ಅಭಿಮಾನಿಗಳಷ್ಟೇ ಅಲ್ಲದೆ, ಚಿತ್ರರಂಗದ ಮಂದಿಯೂ ದರ್ಶನ್​ ಮನವಿಯನ್ನು "ಚಾಲೆಂಜ್​' ರೀತಿಯಲ್ಲಿ ಸ್ವೀಕರಿಸಿ ಪ್ರಾಣಿ, ಪಗಳನ್ನು ದತ್ತು ಪಡೆದಿದ್ದಾರೆ. ಇದೀಗ "ರಿಯಲ್​ ಸ್ಟಾರ್​' ಉಪೇಂದ್ರ ಸಹ ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್​ ಆನೆಯನ್ನು ದತ್ತು ಪಡೆದಿದ್ದಾರೆ. "ದರ್ಶನ್​ ಮನವಿಗೆ ಸ್ಪಂದಿಸಿ ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್​ ಆನೆಯನ್ನು ದತ್ತು ಪಡೆದಿದ್ದೇನೆ. ಈ ಮೂಲಕ ಅವರ ಅತ್ಯುತ್ತಮ ಉದ್ದೇಶಕ್ಕೆ ಕೈ ಜೋಡಿಸಿದ್ದೇನೆ' ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ. ಇನ್ನು ನಿರ್ಮಾಪಕಿ ಶ್ರುತಿ ನಾಯ್ಡು ಮೈಸೂರು ಮೃಗಾಲಯದಲ್ಲಿನ ಜೀಬ್ರಾ ದತ್ತು ಪಡೆ ದರೆ, ನಟ ಪ್ರಮೋದ್​ ಬಿಳಿ ನವಿಲನ್ನು ಅಡಾಪ್ಟ್​ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ಕಲಾವಿದರೂ ದಾಸನ ಮನವಿಗೆ ಸ್ಪಂದಿಸಿದ್ದಾರೆ.