Upcoming K-dramas July 2026
- ಜುಲೈ-4ರಿಂದ ರೊಮ್ಯಾಂಟಿಕ್ ಕೊರಿಯನ್ ಡ್ರಾಮಾ ಸಿನಿಮಾ ರಿಲೀಸ್
- ತೀವ್ರ ಕುತೂಹಲ ಕೆರಳಿಸುವ ಕೊರಿಯನ್ ಡ್ರಾಮಾ
- ಜುಲೈನಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಹೊಸ ಕೊರಿಯನ್ ಡ್ರಾಮಾಗಳು ಯಾವುದು?
Upcoming Kdramas July 2026:
ಇತ್ತೀಚೆಗೆ ಝೆನ್ಜಿಗಳು ದಕ್ಷಿಣ ಭಾರತ ಹಾಗೂ ಹಿಂದಿ ಸಿನಿಮಾಗಳಿಗಿಂತ ಕೊರಿಯನ್ ಸಿನಿಮಾಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಜುಲೈನಲ್ಲಿ ಕೊರಿಯನ್ ಡ್ರಾಮಾ ಪ್ರೇಮಿಗಳಿಗೆ ಸಿನಿಮಾ ಹಬ್ಬದೂಟವಾಗಿದೆ. ಏಕೆಂದರೆ, ಆಕ್ಷನ್, ಥ್ರಿಲ್ಲರ್, ಫ್ಯಾಂಟಸಿ ಮತ್ತು ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಪ್ರಮುಖ 7 ಹೊಸ ಕೊರಿಯನ್ ವಿವಿಧ ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಯಾವ ಸಿನಿಮಾ ಎಲ್ಲಿ ನೋಡಬಹುದು ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.
ದಿ ಹಸ್ಬೆಂಡ್
ಇದೊಂದು ಸಸ್ಪೆನ್ಸ್, ರೊಮ್ಯಾಂಟಿಕ್ ಥ್ರಿಲ್ಲರ್ಸ ಸಿನಿಮಾವಾಗಿದೆ. ನಮ್‌ಕೂಂಗ್ ಮಿನ್ ಹಾಗೂ ಲೀ ಸಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪತಿ ಮತ್ತು ಪತ್ನಿ ಮಧ್ಯೆ ವಿಚ್ಛೇದನಕ್ಕೆ ಕೆಲವು ದಿನ ಬಾಕಿ ಇರುವಾಗ ಅಪಹರಣಕ್ಕೆ ಒಳಗಾಗುವ ಆಕೆಯನ್ನು ರಕ್ಷಿಸಿಕೊಳ್ಳಲು ಎದುರಿಸುವ ಪರಿಪಾಟಲು ಕತೆಯಾಗಿದೆ. ಈ ಸಿನಿಮಾವನ್ನು ಜುಲೈ 4ರಂದು ಡಿಸ್ನಿ ಪ್ಲಸ್ನಲ್ಲಿ ನೋಡಬಹುದಾಗಿದೆ.
ಎ ಶಾರ್ಪ್ ಕಿಲ್ಲರ್ ಸೀಸನ್2
ಎ ಶಾರ್ಪ್ ಕಿಲ್ಲರ್ ಸೀಸನ್ ಒಂದಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರ ಮುಂದಿನ ಭಾಗವಾಗಿ 'ಎ ಶಾಪ್ ಫಾರ್ ಕಿಲ್ಲರ್ಸ್ ಸೀಸನ್ 2' ತರಲಾಗಿದೆ. ನಟ ಲೀ ಡಾಂಗ್-ವೂಕ್ ಮತ್ತು ಕಿಮ್ ಹ್ಯೆ-ಜೂನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜಿ-ಆನ್ ತನ್ನ ಅಂಕಲ್ ನಡೆಸುತ್ತಿದ್ದ ರಹಸ್ಯ ಶಾಪಿಂಗ್ ಮಾಲ್‌ನ ಜವಾಬ್ದಾರಿ ವಹಿಸಿಕೊಂಡು, ಜಾಗತಿಕ ಹಂತಕರ ನೆಟ್‌ವರ್ಕ್ 'ಬ್ಯಾಬಿಲೋನ್' ವಿರುದ್ಧ ನಡೆಸುವ ಪೂರ್ಣ ಪ್ರಮಾಣದ ಪ್ರತೀಕಾರದ ಆಕ್ಷನ್ ಕಥೆ ಇದರಲ್ಲಿದೆ. ಈ ಸಿನಿಮಾವನ್ನು ಜುಲೈ 22ಕ್ಕೆ ಡಿಸ್ನಿ ಪ್ಲಸ್ನಲ್ಲಿ ನೋಡಬಹುದಾಗಿದೆ.
ಸ್ಪೂಕಿ ಇನ್ ಲವ್
ಸ್ಪೂಕಿ ಇನ್ ಲವ್ ಸಿನಿಮಾವನ್ನು ಜುಲೈ18ರಂದು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ. ಇದರಲ್ಲಿ ಪಾರ್ಕ್ ಯೂನ್ ಬಿನ್, ಯಾಂಗ್ ಸೆ ಜಾಂಗ್, ಓಂಗ್ ಸಿಯೋಂಗ್ ವೈ ನಟಿಸಿದ್ದಾರೆ. ಪ್ರಾಸಿಕ್ಯೂಟರ್ ಹಾಗೂ ಹೋಟೆಲ್ ಒಡತಿ ಒಟ್ಟಾಗಿ ನಿಗೂಢ ಪ್ರಕರಣಗಳನ್ನು ಬೇಧಿಸುವುದು ಕತೆಯಾಗಿದೆ.
ಲವ್ ಇನ್ ಸಿಂಕ್
ಕಿಮ್ ಮ್ಯುಂಗ್ ಸೂ, ಕಾಂಗ್ ಮಿನ್ ಆಹ್ ನಟಿಸಿರುವ ಲವ್ ಇನ್ ಸಿಂಕ್ ಕೊರಿಯನ್ ಡ್ರಾಮಾ ಜುಲೈ 4ರಂದು Disney+, Lifetime, U+ Mobile TVಯಲ್ಲಿ ನೋಡಬಹುದಾಗಿದೆ. ಇದೊಂದು ರೊಮ್ಯಾಂಟಿಕ್ ಸಿನಿಮಾ. ಸಹಾನುಭೂತಿ ನಿರಾಕರಿಸುವ ಮಹಿಳೆ ಮತ್ತು ಅದರ ಹೊರೆಯನ್ನು ಹೊರುವ ಕಥಾ ನಾಯಕನ ಮಧ್ಯೆ ಪ್ರೀತಿ ಹುಟ್ಟುವುದು, ಭಾವನಾತ್ಮಕ ಕ್ಷಣ ತೆರೆದುಕೊಳ್ಳುವುದು ಕತೆಯಾಗಿದೆ.
ದಿ ಅಪಾರ್ಟ್ಮೆಂಟ್ ಜಾಬ್
ಅಪಾರ್ಟ್ಮೆಂಟ್ನಲ್ಲಿ ನಡೆಯುವ ಚುನಾವಣೆಯ ಭ್ರಷ್ಟಾಚಾರ, ರಹಸ್ಯ ಹಣದ ಸುತ್ತ ಸುತ್ತುತ್ತದೆ. ಭ್ರಷ್ಟಾಚಾರ ಎದುರಿಸಿ ನಾಯಕ ಹೇಗೆ ಹೊರಬರುತ್ತಾರೆ ಎನ್ನುವುದೇ ಕತೆ. ಕೊರಿಯನ್ ಡ್ರಾಮಾದಲ್ಲಿ ಜಿ ಸಂಗ್, ಹಾ ಯೂನ್ ಕ್ಯುಂಗ್, ಪಾರ್ಕ್ ಬೈಯುಂಗ್ ಯೂನ್, ಮೂನ್ ಸೋ ರಿ ನಟಿಸಿದ್ದಾರೆ. ಇದೊಂದು ಹಾಸ್ಯ ಕತೆಯಾಗಿದೆ.ಇದು ದಕ್ಷಿಣ ಕೊರಿಯಾದ JTBCಯಲ್ಲಿ ಜುಲೈ 11ರಂದು ರಿಲೀಸ್ ಆಗಲಿದೆ.
ಫ್ಯಾಮಿಲಿ ರಿಜಿಸ್ಟರ್
ಪಾರ್ಕ್ ಸೆ ಯಂಗ್, ಹಾನ್ ಗೋ ಯೂನ್, ಇಮ್ ಜಿ ಯೂನ್, ಸಂಗ್ ಲೆ ಆನ್ ನಟನೆಯ ಫ್ಯಾಮಿಲಿ ರಿಜಿಸ್ಟರ್ ಸಿನಿಮಾವೊಂದು ಮೆಲೋಡ್ರಾಮಾ ಇದನ್ನು ದಕ್ಷಿಣ ಕೊರಿಯಾದ ಎಂಬಿಸಿಯಲ್ಲಿ ನೋಡಬಹುದಾಗಿದೆ. ಆದರೆ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಇನ್ಯಾವ ಸಿನಿಮಾ ರಿಲೀಸ್ ಆಗಲಿದೆ?
ಡ್ರೀಂ ಟು ಯು ಸಿನಿಮಾವನ್ನು ಜುಲೈ 13ರಂದು ಇಎನ್ಎ ಹಾಗೂ ಜೆನಿ ಟಿವಿಯಲ್ಲಿ ನೋಡಬಹುದು. ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ದಿ ಈಸ್ಟ್ ಪ್ಯಾಲೆಸ್ ಜುಲೈ 17ರಂದು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ. ಇದೊಂದು ಹಾರರ್, ಆಕ್ಷನ್ ಸಿನಿಮಾವಾಗಿದೆ. ಇದರಲ್ಲಿ ನಾಮ್ ಜೂ ಹ್ಯುಕ್, ರೋಹ್ ಯೂನ್ ಸಿಯೋ, ಚೋ ಸೆಯುಂಗ್ ವೂ ಬಣ್ಣ ಹಚ್ಚಿದ್ದಾರೆ, (ಏಜೆನ್ಸೀಸ್).