Ram Charan Peddi movie release
Ram Charan Peddi movie release: ದೇಶದಾದ್ಯಂತ ಇಂದು(ಜೂನ್ 4) 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಟ ರಾಮ್ಚರಣ್ ಅಭಿಮಾನಿಗಳು ಸಿನಿಮಾವನ್ನು, ಅವರ ಆಕ್ಟಿಂಗ್ ಅನ್ನು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು ಉಪಾಸನಾ ಕೊನಿಡೇಲಾ ಅವರು.
ಹುಚ್ಚೆದ್ದು ಸಂಭ್ರಮಿಸಿದ ಉಪಾಸನಾ
ರಾಮ್ ಚರಣ್ ಪತ್ನಿ ಉಪಾಸನಾ ಅವರು ಜೂನ್3ರಂದು ಹೈದರಾಬಾದ್ನಲ್ಲಿ ಪ್ರೀಮಿಯರ್ ಶೋ ವೇಳೆ ತಮ್ಮ ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸಿದರು. ಈ ವೇಳೆ ಅಭಿಮಾನಿಗಳು ಇದ್ದರು. ಪತಿಯ ಎಂಟ್ರಿ ಹಾಗೂ ಖಡಕ್ ಆಕ್ಟಿಂಗ್ ಕಂಡು ಮೈಮರೆತಾ ಅವರು ಸೀಟಿ ಹೊಡೆಯುತ್ತಾ ಹುಚ್ಚೆದ್ದು ಸಂಭ್ರಮಿಸಿರುವ ವಿಡಿಯೋಗಳು ವೈರಲ್ ಆಗಿದೆ.
ಅದ್ಭುತಾ ಸಿನಿಮಾ
ಸಿನಿಮಾ ಮುಗಿದ ನಂತರ ಉಪಾಸನಾ ಅವರನ್ನು ಭದ್ರತೆಯೊಂದಿಗೆ ಕರೆದೊಯ್ಯುವಾಗ ಮಾತನಾಡಿರುವ ಅವರು, ಅಮೇಜಿಂಗ್ ಚಿತ್ರ ಅದ್ಭುತವಾಗಿದೆ ಎಂದು ಒನ್-ವರ್ಡ್ ರಿವ್ಯೂ ನೀಡಿದ್ದಾರೆ.
ಸಿನಿಮಾಗೆ ಉತ್ತಮ ಪ್ರತಿಕ್ರಿಯೆ
ಖ್ಯಾತ ಟ್ರೇಡ್ ಅನಾಲಿಟಿಕ್ಸ್ ರಮೇಶ್ ಬಾಲ ಅವರ ಪ್ರಕಾರ, "ಚಿತ್ರದ ಮುಂಗಡ ಬುಕ್ಕಿಂಗ್ ಟ್ರೆಂಡ್ ಅತ್ಯುತ್ತಮವಾಗಿದೆ. ಬಿಡುಗಡೆಗೆ ಮುಂಚಿತವಾಗಿಯೇ ಆಂಧ್ರಪ್ರದೇಶದಿಂದಲೇ 10 ಕೋಟಿ ರೂ. ಮತ್ತು ಬೆಂಗಳೂರಿನಿಂದ 1.50 ಕೋಟಿ ರೂ. ಗಳಿಕೆಯಾಗಿದೆ. ತೆಲಂಗಾಣ ಬುಕ್ಕಿಂಗ್ ಪೂರ್ಣಗೊಳ್ಳುವ ಮೊದಲೇ ಇಷ್ಟು ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ತೋರಿಸುತ್ತದೆ" ಎಂದಿದ್ದಾರೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಪ್ರತಿಭಾವಂತ ಯುವಕನೊಬ್ಬನ ಸುತ್ತ 'ಪೆದ್ದಿ' ಚಿತ್ರದ ಕಥೆ ಸಾಗುತ್ತದೆ. ವಿವಿಧ ಕ್ರೀಡೆಗಳಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ ಈ ಯುವಕ, ತನ್ನ ವೈಯಕ್ತಿಕ ಹೋರಾಟಗಳು, ವೈಷಮ್ಯಗಳು ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಾ ತನ್ನ ಜೀವನವನ್ನು ಹೇಗೆ ಉತ್ತಮಗೊಳಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾಹಂದರವಾಗಿದೆ.
ಬುಚ್ಚಿಬಾಬು ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್, ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್, ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ ನಾಯಕ ನಟಿಯಾಗಿ ಮಿಂಚಿದ್ದಾರೆ.