Uorfi Javed ಚಿತ್ರ Instagram 
ಸಿನಿವಾಣಿ

ಊರ್ಫಿ ಜಾವೆದ್​ಗೆ ಪ್ರಾಣ ಬೆದರಿಕೆ! ಕಣ್ಣೀರಿಡುತ್ತಲೇ ಸತ್ಯ ಬಿಚ್ಚಿಟ್ಟು ಇನ್‌ಸ್ಟಾಗ್ರಾಮ್ ಪೋಸ್ಟ್ ಡಿಲೀಟ್ ಮಾಡಿದ ನಟಿ! Uorfi Javed

ಮುಂಬೈ: ತಮ್ಮ ವಿಶಿಷ್ಟ ಹಾಗೂ ವಿವಾದಾತ್ಮಕ ಫ್ಯಾಷನ್ ಸೆನ್ಸ್ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೆದ್​ ಅವರು ಮತ್ತೊಮ್ಮೆ ತೀವ್ರ ಆಘಾತಕಾರಿ ಕಾರಣಕ್ಕಾಗಿ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ರಿಯಾಲಿಟಿ ಶೋ 'ದಿ ಟ್ರೇಟರ್ಸ್' ಸೀಸನ್ 1 ರ ವಿಜೇತೆಯಾಗಿ ಹೊರಹೊಮ್ಮಿ ಸಂಭ್ರಮದಲ್ಲಿದ್ದ ನಟಿ ಇಂದು ಮುಂಜಾನೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅವರಿಗೆ ಬಂದಿರುವ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳ ಕುರಿತು ಪೋಸ್ಟ್​ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ನಾನು ಅತ್ಯಂತ ಕಠೋರವಾದ ಟ್ರೋಲಿಂಗ್, ನಿಂದನೆ, ಅತ್ಯಾಚಾರ ಬೆದರಿಕೆಗಳು, ಕೊಲೆ ಬೆದರಿಕೆಗಳಿಗೆ ಒಳಗಾಗಿದ್ದೇನೆ. ನಾನು ಅನುಭವಿಸುತ್ತಿರುವ ಈ ಎಲ್ಲಾ ಹಿಂಸೆಗಳ ಬಗ್ಗೆ ಈಗ ಏನು ಹೇಳುತ್ತಿದ್ದೇನೋ, ಅದು ನಿಜವಾಗಿ ನಡೆಯುತ್ತಿರುವುದರಲ್ಲಿ ಶೇ 1ರಷ್ಟು ಮಾತ್ರ. ಇನ್ನುಳಿದ ಶೇ 99 ರಷ್ಟು ಹಿಂಸೆ ಯಾರಿಗೂ ಗೊತ್ತಿಲ್ಲ. ಅಪರಿಚಿತ ವ್ಯಕ್ತಿಗಳು ಹೇಗೋ ನನ್ನ ಫೋನ್ ನಂಬರ್ ಪತ್ತೆ ಹಚ್ಚಿ, ನೇರವಾಗಿ ನನಗೆ ಫೋನ್ ಮಾಡಿ ಅಸಭ್ಯವಾಗಿ ಬೈಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಮಾಡುವ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಊರ್ಫಿ ಜಾವೆದ್​ ಬರೆದಿದ್ದಾರೆ.
ನಾನು ಯಾವುದೇ ತಮಾಷೆ ಮಾಡುತ್ತಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನಾನು ಹೇಳುತ್ತಿದ್ದೇನೋ ಅದೆಲ್ಲವೂ ಸತ್ಯ. ಇಂತಹ ಕೆಟ್ಟ ಸಂದೇಶಗಳನ್ನು ಕಳುಹಿಸುವ ಹಾಗೂ ಬೆದರಿಕೆ ಹಾಕುವ ವಿಕೃತರು ಸಮಾಜದಲ್ಲಿ ಯೋಗ್ಯರಂತೆ, ಸಭ್ಯರಂತೆ ನಟಿಸುತ್ತಾ ತಿರುಗಾಡುತ್ತಾರೆ. ಇದು ಕೇವಲ ಊರ್ಫಿ ಜಾವೆದ್ ಅಥವಾ ನನ್ನೊಬ್ಬಳ ಸಮಸ್ಯೆ ಮಾತ್ರವಲ್ಲ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಎದುರಿಸುತ್ತಿರುವ ಕಹಿ ಸತ್ಯ ಎಂದಿದ್ದಾರೆ.

ದಿ ಟ್ರೇಟರ್ಸ್ ಬಗ್ಗೆ

BAFTA ಮತ್ತು ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿರುವ ಹಾಗೂ 30ಕ್ಕೂ ಹೆಚ್ಚು ದೇಶಗಳಲ್ಲಿ ಸ್ಪರ್ಧಿಗಳ ನಡುವಿನ ಸ್ನೇಹ ಮುರಿಯುವಂತೆ ಮಾಡಿರುವ, ಹಾಗೆಯೇ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿರುವ ರಿಯಾಲಿಟಿ ಶೋನ ರೂಪಾಂತರವು ಈಗ ಭಾರತಕ್ಕೆ ಬರುತ್ತಿದೆ. ಕರಣ್ ಜೋಹರ್ ನಿರೂಪಿಸಲಿರುವ ಈ ಕಟ್‌ಥ್ರೋಟ್ ಆಟ 'ದಿ ಟ್ರೇಟರ್ಸ್', ಹಿಂದೆಂದೂ ಕಾಣದ ರೀತಿಯಲ್ಲಿ ದ್ರೋಹ, ಸಾಸ್, ಸಸ್ಪೆನ್ಸ್ ಮತ್ತು ಮೈಂಡ್ ಗೇಮ್‌ಗಳ ಭರವಸೆಯನ್ನು ನೀಡಿದ್ದು, ಇದನ್ನು ಜೂನ್​ 2025 ರಲ್ಲಿ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆ ಮಾಡಲಾಯಿತು.
'ದಿ ಟ್ರೇಟರ್ಸ್ ' ಸೀಸನ್ 1 ರ ವಿಜೇತರು ಊರ್ಫಿ ಜಾವೆದ್ ಮತ್ತು ನಿಕಿತಾ ಲೂಥರ್. ಹಾಸ್ಯನಟರಾದ ಹರ್ಷ್ ಗುಜ್ರಾಲ್ ಮತ್ತು ಪುರವ್ ಝಾ ಅವರನ್ನು ಮತ ಚಲಾಯಿಸಿ ಸೋಲಿಸಿದ ನಂತರ ಅವರನ್ನು 'ಮುಗ್ಧರು' ಎಂದು ಕರೆಯಲಾಯಿತು. ಅವರು 70.5 ಲಕ್ಷ ರೂಪಾಯಿಗಳ ವಿಭಜಿತ ನಗದು ಬಹುಮಾನವನ್ನು ಪಡೆದರು. ಆದಾಗ್ಯೂ, ಊರ್ಫಿ ಜಾವೆದ್ ತೀವ್ರ ಪ್ರತಿಕ್ರಿಯೆಗೆ ಬಲಿಯಾಗಿದ್ದು, ಅದರ ಉದಾಹರಣೆಯನ್ನು ಪೋಸ್ಟ್​ ತೆಗೆದುಹಾಕುವ ಮೂಲಕ ಹಂಚಿಕೊಂಡರು.
ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಸೂಪರ್ ಹಿಟ್ ರಿಯಾಲಿಟಿ ಶೋ 'ದಿ ಟ್ರೇಟರ್ಸ್' ಭಾರತೀಯ ಆವೃತ್ತಿಯ ಚಿತ್ರೀಕರಣಕ್ಕಾಗಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಪ್ರಸಿದ್ಧ 'ಸೂರ್ಯಗಢ್ ಅರಮನೆ' ಸಾಕ್ಷಿಯಾಗಿದೆ. ಸೀಸನ್​ 1 ರಲ್ಲಿ ಭಾಗವಹಿಸಿದರಲ್ಲಿ ಅಂಶುಲಾ ಕಪೂರ್, ಅಪೂರ್ವ, ಆಶಿಶ್ ವಿದ್ಯಾರ್ಥಿ, ಎಲ್ನಾಜ್ ನೊರೌಜಿ, ಹರ್ಷ್ ಗುಜ್ರಾಲ್, ಜನ್ನತ್ ಜುಬೈರ್, ಜಾನ್ವಿ ಗೌರ್, ಜಾಸ್ಮಿನ್ ಭಾಸಿನ್, ಕರಣ್ ಕುಂದ್ರಾ, ಲಕ್ಷ್ಮಿ ಮಂಚು, ಮಹೀಪ್ ಕಪೋರ್, ಮಹೀಪ್ ಕಪೋರ್, ಮಹೀಪ್ ಕಪೂರ್ ಝಾ, ರಫ್ತಾರ್, ರಾಜ್ ಕುಂದ್ರಾ, ಸಾಹಿಲ್ ಸಲಾಥಿಯಾ, ಸುಧಾಂಶು ಪಾಂಡೆ, ಸೂಫಿ ಮೋತಿವಾಲಾ ಮತ್ತು ಉರ್ಫಿ ಜಾವೇದ್ ಇದ್ದರು.
'ದಿ ಟ್ರೇಟರ್ಸ್' ನ ಮೊದಲ ಸೀಸನ್ ಗೆ ಸಿಕ್ಕ ಅಗಾಧ ಪ್ರತಿಕ್ರಿಯೆಯ ನಂತರ ನಿರ್ಮಾಪಕರು ಈಗಾಗಲೇ ಎರಡನೇ ಸೀಸನ್​ನ್ನು ಘೋಷಿಸಿದ್ದು, ಕರಣ್​ ಜೋಹರ್​ ನಿರೂಪಣೆ ಮಾಡಲಿದ್ದಾರೆ (ಏಜೆನ್ಸೀಸ್​).